ಇತ್ತೀಚಿನ ಸುದ್ದಿ
ಬಿಜೆಪಿಯದ್ದು ಮನೆಯೊಂದು ಆರು ಬಾಗಿಲು ಪರಿಸ್ಥಿತಿ: ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಟೀಕೆ
08/07/2023, 18:09
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ರಾಜ್ಯ ಬಿಜೆಪಿಯದ್ದು ಮನೆಯೊಂದು ಆರು ಬಾಗಿಲು ಪರಿಸ್ಥಿತಿ. ವಿಧಾನಸಭೆ ಅಧಿವೇಶನ ಆರಂಭವಾಗಿ ಮೂರು ದಿನಗಳು ಕಳೆದರು ಬಿಜೆಪಿಗೆ ಪ್ರತಿಪಕ್ಷದ ನಾಯಕನ ಆಯ್ಕೆ ಮಾಡಲು ಸಾಧ್ಯವಾಗಲಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಅಥಣಿ ಶಾಸಕ ಲಕ್ಷ್ಮಣ್ ಸವದಿ ಲೇವಡಿ ಮಾಡಿದರು.
ಅಥಣಿ ತಾಲೂಕಿನ ಹಲ್ಯಾಳ ಗ್ರಾಮ ಕರಿಮಸೂತಿ ನೀರಾವರಿ ಯೋಜನೆಯ ಕಾಲುವೆಗೆ ನೀರು ಹರಿಸಿ ಮಾಧ್ಯಮ ಜತೆ ಅವರು ಮಾತನಾಡಿದರು.
ಬರದಿಂದ ತತ್ತರಿಸಿದ ಜನರಿಗೆ ಖುಷಿ ಹಂಚಿದ ಲಕ್ಷ್ಮಣ್ ಸವದಿ, ಬಿಜೆಪಿ ರಾಷ್ಟ್ರೀಯ ಪಕ್ಷ ವಿದ್ದರೂ ವಿಪಕ್ಷ ನಾಯಕನ ಕೊರತೆ ಎದುರಿಸುತ್ತಿದೆ.
ಬಿಜೆಪಿ ಪಕ್ಷದಲ್ಲಿ ಒಗ್ಗಟ್ಟಿಲ್ಲದ್ದು ಅದರ ಹೀನಾಯ ಸೋಲಿಗೆ ಕಾರಣ ಎಂದರು.
ಸಿದ್ದರಾಮಯ್ಯ ಬಜೆಟ್ ಸರ್ವರಿಗೂ ಸಮಪಾಲು ಸಮಬಾಳು ನೀಡುವಂತದ್ದು.
ನೀರಾವರಿಗೂ ಹೆಚ್ಚಿನ ಕೊಡುಗೆ ನೀಡಲಾಗಿದೆ. ಅಥಣಿ ಹಾಗೂ ಕಾಗವಾಡ ತಾಲೂಕಿನ ನೀರಾವರಿ ಯೋಜನೆಗೆ ಹೆಚ್ಚಿನ ಒಲವು ನೀಡುವ ಭರವಸೆ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ 30 ಸಾವಿರ ಕೋಟಿ ಬೆಳೆ ಸಾಲ ಕೊಡುವ ಭರವಸೆಯನ್ನು ಶಾಸಕ ಲಕ್ಷ್ಮಣ್ ಸವದಿ ನೀಡಿದರು.