ಇತ್ತೀಚಿನ ಸುದ್ದಿ
BJP v/s Yatnal | ಬಿಜೆಪಿಯಿಂದ ಉಚ್ಚಾಟನೆಗೊಂಡ ಯತ್ನಾಳ್ ರಿಂದ ಹೊಸ ಕೇಸರಿ ಪಕ್ಷ?: ವಿಜಯ ದಶಮಿಗೆ ಉದಯ?
30/03/2025, 21:17

ವಿಜಯಪುರ(reporterkarnataka.com): ಬಿಜೆಪಿಯಿಂದ ಉಚ್ಛಾಟಿತಗೊಂಡ ಎರಡು ದಿನಗಳ ನಂತರ ಕೇಂದ್ರ ಮಾಜಿ ಸಚಿವ, ಹಾಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೊಸ ಪಕ್ಷ ಕಟ್ಟುವ ಬಗ್ಗೆ ಸುಳಿವು ನೀಡಿದ್ದಾರೆ.
ಈ ಮಧ್ಯೆ ಬಿಜೆಪಿ ಹೈಕಮಾಂಡ್ ಉಚ್ಚಾಟನೆ ಆದೇಶವನ್ನು ವಾಪಸ್ ತೆಗೆದುಕೊಳ್ಳುವ ಬಗ್ಗೆ ಆಶಾವಾದ ವ್ಯಕ್ತಪಡಿಸಿದ್ದಾರೆ.
ಉಚ್ಚಾಟನೆ ಆದೇಶ ವಾಪಸ್ ಪಡೆಯದಿದ್ದರೆ, ಈ ವರ್ಷದ ವಿಜಯದಶಮಿ ಮೊದಲು ಹೊಸ ರಾಜಕೀಯ ಪಕ್ಷವನ್ನು ಪ್ರಾರಂಭಿಸುವ ಸುಳಿವು ನೀಡಿದ್ದಾರೆ.
ಕೇಸರಿ ಪಕ್ಷವು ಹಿಂದೂಗಳನ್ನು ರಕ್ಷಿಸಲು ಎಂದು ಹೇಳಿದ್ದಾರೆ. ದಾನಿಗಳಿಂದ ಹೊಸ ಪಕ್ಷಕ್ಕೆ ಬೆಂಬಲವನ್ನು ಪಡೆದಿದ್ದೇನೆ ಎಂದು ಅವರು ಹೇಳಿದ್ದಾರೆ.
ಬಿಜೆಪಿಯಿಂದ ಉಚ್ಚಾಟನೆಗೊಂಡ ಬಳಿಕ ದಿಲ್ಲಿಯಿಂದ ವಿಜಯಪುರಕ್ಕೆ ಆಗಮಿಸಿದ ಅವರಿಗೆ ಭಾರೀ ಬೆಂಬಲ ವ್ಯಕ್ತವಾಗಿತ್ರು.