ಇತ್ತೀಚಿನ ಸುದ್ದಿ
ಬಿಜೆಪಿ ಸೇರಲು ಹಣದ ಆಮಿಷೆ: ಮಾಜಿ ಸಚಿವ ಶ್ರೀಮಂತ ಪಾಟೀಲ್ ಆರೋಪಕ್ಕೆ ಮಾಜಿ ಡಿಸಿಎಂ ಸವದಿ ಹೇಳಿದ್ದೇನು?
12/09/2021, 14:04
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಅಥಣಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪರಿಶಿಷ್ಟ ಪಂಗಡ ಜನಾಂಗಕ್ಕೆ 1.50 ಕೋಟಿ ರೂ. ವೆಚ್ಚದ ವಾಲ್ಮೀಕಿ ಸಮುದಾಯ ಭವನಕ್ಕೆ ಅಡಿಗಲ್ಲು ಸಮಾರಂಭವನ್ನು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ನೆರವೇರಿಸಿದರು
ಈ ವೇಳೆ ಮಾತನಾಡಿದ ಮಾಜಿ ಡಿಸಿಎಂ, ಮಾಜಿ ಸಚೀವ ಶ್ರೀಮಂತ ಪಾಟೀಲಗೆ ಹಣದ ಆಮಿಷದ ವಿಚಾರ ಶ್ರೀಮಂತ ಪಾಟೀಲ ಹೇಳಿಕೆಯನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಈ ಬಗ್ಗೆ ನನಗೂ ಅವರಿಗೂ ಭೇಟಿ ಆಗಿಲ್ಲ. ಯಾರು ಹಣ ಕೊಡಲು ಹೋಗಿದ್ದರು. ಯಾರು ಆಮಿಷಯೊಡ್ಡಿದ್ದರು ಪರಿಶೀಲನೆ ಆಗಬೇಕು ಎಂದರು.
ಅಧಿಕಾರ ಶಾಸ್ವತವಲ್ಲ, ಇದ್ದಾಗ ಮತ್ತು ಅವಕಾಶ ಕೊಟ್ಟಾಗ ಸದ್ಬಳಕೆ ಮಾಡಿಕೊಳ್ಳಬೇಕು.
ಶ್ರೀಮಂತ ಪಾಟೀಲ ವೈಮನಸ್ಸಿನಿಂದ ಹಾಗೆ ಹೇಳಿದ್ದಾರೆ ಅನ್ನಿಸುವುದಿಲ್ಲ. ಮಾತನಾಡುವ ಭರದಲ್ಲಿ ಆ ರೀತಿ ಹೇಳಿರಬಹುದು ಈ ಬಗ್ಗೆ ಅವರನ್ನು ಖುದ್ದು ಭೇಟಿಯಾಗಿ ಮಾತನಾಡುವೆ.