ಇತ್ತೀಚಿನ ಸುದ್ದಿ
ಬಿಜೆಪಿ ಸರಕಾರ ಮೇಲಿನ ಪರ್ಸಂಟೇಜ್ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಿ: ಸಿಎಂ ಸಿದ್ದರಾಮಯ್ಯ ಅವರಿಗೆ ಸಿಟಿಜನ್ ರೈಟ್ಸ್ ಫೌಂಡೇಷನ್ ಒತ್ತಾಯ
22/05/2023, 19:21
ಮಂಗಳೂರು(reporterkarnataka.com): ಹಿಂದಿನ ಬಿಜೆಪಿ ಸರಕಾರದ ಮೇಲಿನ ಪರ್ಸಂಟೇಜ್ ಆರೋಪದ ಕುರಿತು ಸಮಗ್ರ ತನಿಖೆ ನಡೆಸುವಂತೆ ಸಿಟಿಜನ್ ರೈಟ್ಸ್ ಫೌಂಡೇಷನ್ ಆಗ್ರಹಿಸಿದೆ.
ಹಿಂದಿನ ಸರ್ಕಾರದ ಅವಧಿಯಲ್ಲಿನ ಭ್ರಷ್ಟಾಚಾರ ಬಗ್ಗೆ ಹೋರಾಟ ಮಾಡಿದ್ದೀರಿ. ಪರ್ಸಂಟೇಜ್ ಹಗರಣ, ಪಿಎಸ್‌ಐ ನೇಮಕಾತಿ ಅಕ್ರಮ, ಮತದಾರರ ಪಟ್ಟಿ ಗೋಲ್‌ಮಾಲ್ ಸಹಿತ ಹಲವಾರು ಅಕ್ರಮಗಳ ಬಗ್ಗೆ ಆರೋಪ ಮಾಡಿದ್ದೀರಿ. ಒಟ್ಟಾರೆ 1,50,000 ಕೋಟಿ ರೂಪಾಯಿ ಭ್ರಷ್ಟಾಚಾರ ಬಗ್ಗೆ ರೇಟ್ ಕಾರ್ಡ್ ಬಿಡುಗಡೆ ಮಾಡಿರುವಿರಿ. ಈಗ ತಮ್ಮದೇ ಪಕ್ಷ ಅಧಿಕಾರಕ್ಕೆ ಬಂದಿದೆ. ಹಾಗಾಗಿ ಉನ್ನತಮಟ್ಟದ ತನಿಖೆ ನಡೆಸಿ ಎಂದು ಕೋರಲಾಗಿದೆ.