7:12 PM Wednesday26 - November 2025
ಬ್ರೇಕಿಂಗ್ ನ್ಯೂಸ್
ಟೈಯರ್ ಸ್ಫೋಟ: ನಿಯಂತ್ರಣ ಕಳೆದುಕೊಂಡು ಪಿಕ್ ಅಪ್ ಪಲ್ಟಿ; ಚಾಲಕನಿಗೆ ತೀವ್ರ ಗಾಯ ಛಲವಾದಿ ಹಾಗೂ ಆರ್. ಅಶೋಕ್ ಗೆ ರಾಜಕೀಯ ವಿವೇಕ ಇಲ್ಲ: ಸಚಿವ ಎನ್.… ಸಂತಾನ ಹರಣ ಚಿಕಿತ್ಸೆ ಬಳಿಕವೂ ಗರ್ಭಿಣಿಯಾದ ಪತ್ನಿ: ಪತಿಯಿಂದ ವೈದ್ಯರಿಗೆ ಬೆದರಿಕೆ ಆರೋಪ:… ರಾಜ್ಯದ ಕ್ರಿಕೆಟ್ ಪಟುಗಳಿಗೆ ತಲಾ 10 ಲಕ್ಷ ನಗದು ಬಹುಮಾನ ಜತೆಗೆ ಸರ್ಕಾರಿ… ಹೈವಿಷನ್ ಇಂಡಿಯಾ ಜತೆ ಕೊರಿಯನ್ ಸಂಸ್ಥೆ ಜಿಟಿಟಿಸಿ ಒಪ್ಪಂದಕ್ಕೆ ಸಹಿ |ರಾಜ್ಯದ ಪ್ರವಾಸಿ… ಗಗನಯಾನಿಯಾಗಲು ದೈಹಿಕ, ಮಾನಸಿಕ ಆರೋಗ್ಯ ಬಹಳ ಮುಖ್ಯ: ಶುಭಾಂಶು ಶುಕ್ಲಾ Kodagu | ಅಪಘಾತಕ್ಕೆ ಈಡಾಗಿ ಗಂಭೀರ ಸ್ಥಿತಿಯಲ್ಲಿ ಪುತ್ರ: ನೊಂದ ತಾಯಿ ಕೆರೆಗೆ… ಅಕ್ರಮ‌ ಆಸ್ತಿ ಸಂಪಾದನೆ ಆರೋಪ: ಕೊಡಗು ಪಿಡಬ್ಲ್ಯುಡಿ ಎಂಜಿನಿಯರ್ ಕಚೇರಿ, ಮನೆ ಮೇಲೆ… Yadagiri | ವಿದ್ಯುತ್ ಕಳ್ಳತನ ನಿಯಂತ್ರಣ, ಟಿಸಿಗಳ ಸಮರ್ಪಕ ನಿರ್ವಹಣೆಗೆ ಇಂಧನ ಸಚಿವ… ಹಿಂದೂ ಧರ್ಮ ಮತ್ತು ಭಾರತೀಯತೆ ಎರಡೂ ಒಂದೇ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ಇತ್ತೀಚಿನ ಸುದ್ದಿ

ಬಿಜೆಪಿ ಕಾರ್ಯಕರ್ತರಿಂದ ದಾಂಧಲೆ: ತಾಲೂಕು ಪಂಚಾಯಿತಿ ಇಒ ಮೇಲೆ ಹಲ್ಲೆ; ಗೂಂಡಾಗಿರಿ ವಿರುದ್ಧ ಪ್ರತಿಭಟನೆ

15/02/2022, 07:42

ಶಿವಣ್ಣ ಗೋಪಾನಹಳ್ಳಿ ಚಳ್ಳಕೆರೆ ಚಿತ್ರದುರ್ಗ

info.reporterkarnataka@gmail.com

ತಾಲೂಕು ಪಂಚಾಯಿತಿ ಕಚೇರಿಗೆ ನುಗ್ಗಿದ ಬಿಜೆಪಿ ಕಾರ್ಯಕರ್ತರು ಕರ್ತವ್ಯ ನಿರತ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ಘಟನೆ ಚಳ್ಳಕೆರೆಯಲ್ಲಿ ನಡೆದಿದೆ.

ತಾಲೂಕು ಪಂಚಾಯಿತಿ ಕಚೇರಿಯಲ್ಲಿ ತಾಪಂ ಇಒ ಮಡುಗಿನ ಬಸಪ್ಪ ಕರ್ತವ್ಯ ನಿರ್ವಹಿಸುವ ವೇಳೆ ನೂತನವಾಗಿ ಆಯ್ಕೆಯಾದ ಕೆಡಿಪಿ ಸದಸ್ಯರು ಹಾಗೂ ಬಿಜೆಪಿ ಮಂಡಲ ಅಧ್ಯಕ್ಷರು ಬೆಂಬಲಿಗರ ಜತೆ ಬಂದು ಶಾಸಕರು ನಡೆಸಿ ಸಭೆಗೆ ಕೆಡಿಪಿ ಸದಸ್ಯರನ್ನು ಆಹ್ವಾನಿಸಿಲ್ಲ ಎಂದು ನಿಂದಿಸಿ ಹಲ್ಲೆ ನಡೆಸಿದರು. ಕಚೇರಿಯ ಪೀಠೋಪಕರಣಗಳನ್ನು ಕೂಡ ಧ್ವಂಸ ಮಾಡಿದ್ದಾರೆ.


ಬಿಜೆಪಿ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಮಾತನಾಡಿ, ಗ್ರಾಮೀಣ ಭಾಗದ ಗ್ರಾಪಂ ಕಚೇರಿಗಳಲ್ಲಿ ಇ-ಸ್ವತ್ತು ಖಾತೆಗೆ 50 ರೂ. ಇದ್ದು 5 ರಿಂದ 10 ಸಾವಿರು ರೂ.ಗಳನ್ನು ಪಡೆಯುತ್ತಿದ್ದಾರೆ ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಸರಿಯಾದ ಉತ್ತರ ನೀಡದ ಭ್ರಷ್ಟ ಅಧಿಕಾರಿಗಳು ತೊಲಗಲಿ ಎಂದು ತಾಪಂ  ಇ ಒ ಕಾಚೇರಿ ಮುಂದೆ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿದರು.

ತಾಪಂ ಇಒ ಮಡುಗಿನ ಬಸಪ್ಪ ಮಾತನಾಡಿ, ಯಾವುದೇ ಕೆಪಿಡಿ ಸಭೆ ನಡೆದಿಲ್ಲ. ಆದರೂ ಸಹ ಕೆಡಿಪಿ ಸದಸ್ಯರು ಹಾಗೂ ಬಿಜೆಪಿ ಬೆಂಬಲಿಗರು ಕರ್ತವ್ಯಕ್ಕೆ ಅಡ್ಡಿಪಡಿಸಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸ್ಥಳಕ್ಕೆ ಡಿವೈಎಸ್‍ಪಿ ಕೆ.ಶ್ರೀಧರ್, ವೃತ್ತ ನಿರೀಕ್ಷ ಜೆ.ಎಸ್.ತಿಪ್ಪೇಸ್ವಾಮಿ, ಪಿಎಸ್‍ಐ ಮಹೇಶ್‍ಗೌಡ ಹಾಗೂ ಸಿಬ್ಬಂದಿಗಳು ಬಂದು ತಾಪಂ ಇಒ ಮಡುಗಿನ ಬಸಪ್ಪ ಮೇಲೆ ಹಲ್ಲೆ ಮಾಡಿದವರನ್ನು ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

ತಾಪಂ ಕಚೇರಿ ಮುಂದೆ ಗ್ರಾಪಂ ಪಿಡಿಒಗಳು ಕಚೇರಿ un ತಾಪಂ ಇಒ ಮೇಲೆ ಹಲ್ಲೆ ಮಾಡಿದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.

ವಾಲ್ಮೀಕಿ ವೃತ್ತದಲ್ಲಿ ಗ್ರಾಪಂ ಸದಸ್ಯರ, ನಗರಸಭೆ ಸದಸ್ಯರು ವಿವಿಧ ಕನ್ನಡ ಪರ ಸಂಘಟನೆಗಳು ಸೇರಿದಂತೆ ರಸ್ತೆಗಿಗಿದು ಪ್ರತಿಭಟನೆ ನಡೆಸಿದ್ದಾರೆ.


ನಗರಸಭೆ ಸದಸ್ಯ ವೀರಭದ್ರಪ್ಪ ಮಾತನಾಡಿ ತಾಲೂಕಿನ ಇವಿಧ ಇಲಾಖೆಗಳಲ್ಲಿ ಹಾಗೂ ಪಿಡಿಒಗಳು ನೆಮ್ಮದಿಯಾಗಿ ಕರ್ತವ್ಯ ನಿರ್ವಹಿಸುವಂತಿಲ್ಲ. ಪದೆಪದೇ ವರ್ಗಾವಣೆ, ಅಧಿಕಾರಿಗಳ ಮೇಲೆ ಗೂಂಡ ವರ್ತನೆ ಮಾಡುವ  ಬಿಜೆಪಿ ಕಾರ್ಯಕರ್ತರ ವಿರುದ್ದ ಕಠಿಣ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು