ಇತ್ತೀಚಿನ ಸುದ್ದಿ
ಬಿಜೆಪಿ ಇಡ್ಯಾ ಪಶ್ಚಿಮ ಶಕ್ತಿ ಕೇಂದ್ರ ಪೇಜ್ ಪ್ರಮುಖರ ಸಮಾವೇಶ: ಶಾಸಕ ಡಾ. ವೈ. ಭರತ್ ಶೆಟ್ಟಿ ಚಾಲನೆ
09/01/2023, 15:33

ಸುರತ್ಕಲ್ (reporterkarnataka.com): ಬಿಜೆಪಿ ಮಂಗಳೂರು ನಗರ ಉತ್ತರ ಮಹಾ ಶಕ್ತಿ ಕೇಂದ್ರ, ಸುರತ್ಕಲ್ ನಗರ 2 ರ ವಾರ್ಡ್ ಸಂಖ್ಯೆ 7ರ ಇಡ್ಯಾ ಪಶ್ಚಿಮ ಶಕ್ತಿಕೇಂದ್ರದ ಪೇಜ್ ಪ್ರಮುಖರ ಸಮಾವೇಶವನ್ನು ಶಾಸಕ ಡಾ. ವೈ. ಭರತ್ ಶೆಟ್ಟಿ ಉದ್ಘಾಟಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ರೈತ ಮೋರ್ಚಾದ ಉಪಾಧ್ಯಕ್ಷರ ರಾಜೀವ ಶೆಟ್ಟಿ ಸಲ್ಲಾಜೆ, ಬಿಜೆಪಿ ಉಪಾಧ್ಯಕ್ಷರಾದ ಗಣೇಶ ಹೊಸ ಬೆಟ್ಟು ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ನಯನಾ ಕೋಟ್ಯಾನ್, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ರಾಜೇಶ್ ಕೊಟ್ಟಾರಿ ಮತ್ತು ಸಂದೀಪ್ ಪಚ್ಚನಾಡಿ, ಮಂಡಲದ ಉಪಾಧ್ಯಕ್ಷ ವಿಟ್ಟಲ್ ಸಾಲಿಯಾನ್, ಮಹಾಶಕ್ತಿ ಕೇಂದ್ರದ ಪ್ರಭಾರಿ ಅಮರೇಶ್ , ಮಂಡಲದ ಕಾರ್ಯದರ್ಶಿಯಾದ ರಾಘವೇಂದ್ರ ಶೆಣೈ, ಶಕ್ತಿ ಕೇಂದ್ರದ ಪ್ರಮುಖರಾದ ಸತೀಶ್ ದೇವಾಡಿಗ, ಸಹ ಪ್ರಮುಖ ಸಚಿನ್, ಹರೀಶ್, ಲಿಖಿತ್ ಉಪಸ್ಥಿತರಿದ್ದರು.