ಇತ್ತೀಚಿನ ಸುದ್ದಿ
ಬರ್ತ್ ಡೇ ಪಾರ್ಟಿಯಲ್ಲಿ ಸಖತ್ ಕುಣಿದ ಮಾಜಿ ಶಾಸಕ ದತ್ತಾ!: ಅಭಿಮಾನಿಗಳಿಂದ ಅನ್ನಸಂತರ್ಪಣೆ; ಡಿಜೆ ಡ್ಯಾನ್ಸ್!
25/06/2023, 11:01
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಬರ್ತ್ ಡೇ ಪಾರ್ಟಿಯಲ್ಲಿ ಮಾಜಿ ಶಾಸಕ ವೈ.ಎಸ್.ವಿ.ದತ್ತ ಅವರು ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ದತ್ತರ ಮನೆಯ ಮುಂದೆ ನೆರೆದ ಸಾವಿರಾರು ಅಭಿಮಾನಿಗಳ ಮುಂದೆ ದತ್ತ ಅವರು ಸಖತ್ ಸ್ಟೆಪ್ ಹಾಕಿದ್ದಾರೆ.
ಇದೆಲ್ಲ ನಡೆದದ್ದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ
ಪಾತೇನಹಳ್ಳಿಯಲ್ಲಿರುವ ದತ್ತ ಅವರ ಮನೆಯಲ್ಲಿ.
70ನೇ ವಸಂತಕ್ಕೆ ಕಾಲಿಟ್ಟ ದತ್ತಮೇಷ್ಟ್ರು ಹುಟ್ಟಹಬ್ಬದ ಅಂಗವಾಗಿ ಕಳೆದ ರಾತ್ರಿ ದತ್ತ ಮನೆಯಲ್ಲಿ ಸಾವಿರಾರು ಮಂದಿ ಅಭಿಮಾನಿಗಳು ಜಮಾಯಿಸಿದ್ದರು. ಡಿಜೆ ಸೌಂಡ್ ಗೆ ಮನಸ್ಸೋ ಇಚ್ಛೆ ಅಭಿಮಾನಿಗಳು ಕುಣಿದರು. ಅಭಿಮಾನಿಗಳ ಜೊತೆ ದತ್ತ ಅವರು ಕೂಡ ಹೆಜ್ಜೆ ಹಾಕಿದರು.
ದತ್ತ ಹುಟ್ಟುಹಬ್ಬ ಹಿನ್ನೆಲೆ ಅಭಿಮಾನಿಗಳಿಂದ ಅನ್ನಸಂತರ್ಪಣೆ ನಡೆಯಿತು.