ಇತ್ತೀಚಿನ ಸುದ್ದಿ
ಬಿಳಾಲುಕೊಪ್ಪ-ಬಸರೀಕಟ್ಟೆ ರಸ್ತೆ ಕೆಸರುಮಯ: ಬಸ್ ಸಂಚಾರ ಸ್ಥಗಿತ, ಪ್ರಯಾಣಿಕರ ಪರದಾಟ
15/10/2024, 19:39
ಶಶಿ ಬೆತ್ತದಕೊಳಲು ಜಯಪುರ
info.reporterkarnataka@gmaio.com
ಬಿಳಾಲುಕೊಪ್ಪದಿಂದ ಬಸರೀಕಟ್ಟೆ ಹೋಗುವ ರಸ್ತೆಯ ಅಕ್ಕಪಕ್ಕ ಮಣ್ಣುಹಾಕಿದ್ದು ಮಳೆಗೆ ರಸ್ತೆ ಕೆಸರುಮಯವಾಗಿ ವಾಹನ ಸವಾರರು ಪರದಾಡುವ ಸ್ಥಿತಿ ಎದುರಾಗಿದೆ.




ಮೊದಲೇ ಹೊಂಡ ಗುಂಡಿಯಿಂದ ಕೂಡಿದ್ದ ಈ ಕಿರಿದಾದ ರಸ್ತೆಯಲ್ಲಿ ಓಡಾಡುವುದೇ ಸಮಸ್ಯೆಯಾಗಿತ್ತು. ಆದರೆ ಈಗ ರಸ್ತೆಯ ಎರಡು ಬದಿಯಲ್ಲೂ ಮಣ್ಣು ಹಾಕಲಾಗಿದೆ. ಎರಡ್ಮೂರು ದಿನದಿಂದ ಸುರಿಯುತ್ತಿರುವ ಮಳೆಗೆ ರಸ್ತೆ ಸಂಪೂರ್ಣ ಕೆಸರುಮಯವಾಗಿ ವಾಹನ ಸವಾರರಿಗೆ ಓಡಾಡಲು ಸಮಸ್ಯೆಯಾಗಿದೆ. ಈ ರಸ್ತೆಯೂ ಹೊರನಾಡು ಮತ್ತು ಶೃಂಗೇರಿ ಮುಖ್ಯ ರಸ್ಯೆಯೂ ಹೌದು. ದಸರ ರಜೆಯೂ ಇರುವುದರಿಂದ ವಾಹನದಟ್ಟನೆ ಜಾಸ್ತಿ ಇದೆ. ರಸ್ತೆ ಕೆಸರುಮಯವಾಗಿದ್ದಕ್ಕೂ, ಕಿರಿದಾದ ಹೊಂಡ ಗುಂಡಿ ಇರುವ ರಸ್ತೆಯಾಗಿದ್ದಕ್ಕೂ ಪ್ರತಿದಿನ ಓಡಾಡುವ ಬಸ್ಸುಗಳು ಎದುರಿನಿಂದ ಬರುವ ವಾಹನಗಳಿಗೆ ಜಾಗಬಿಡಲು ರಸ್ತೆಯಿಂದ ಕೆಳಗೆ ಇಳಿಸಿದಾಗ ಬಸ್ಸುಗಳು ಕೆಸರಿಗೆ ಸಿಲುಕುತ್ತಿದ್ದಾವೆ.
ಹೀಗಾಗಿ ಇಂದು ಮಧ್ಯಾಹ್ನದ ನಂತರ ಬಸ್ಸುಗಳು ಬಸರೀಕಟ್ಟೆಯಿಂದ ಬಿಳಾಲುಕೊಪ್ಪ ಕೊಗ್ರೆ ಮೂಲಕ ಜಯಪುರಕ್ಕೆ ಹೋಗಬೇಕಿದ್ದ ಮಾರ್ಗವನ್ನು ಬದಲಾಯಿಸಿ
ಬಸರೀಕಟ್ಟೆಯಿಂದ ಹೇರೂರು ಮಾರ್ಗ ಮೂಲಕ ಜಯಪುರಕ್ಕೆ ತಲುಪುತ್ತಿವೆ.














