ಇತ್ತೀಚಿನ ಸುದ್ದಿ
ಬೈಕಿನ ಹಿಂದೆ ನಿಂತು ಜ್ವಾಲಿ ರೈಡ್ ಮಾಡಿದ ಮಲೆನಾಡಿನ ಶ್ವಾನ: ವೀಡಿಯೋ ವೈರಲ್
30/12/2024, 18:11
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಶ್ವಾನವನ್ನು ದ್ವೇಷಿಸುವವರ ನಡುವೆ ಶ್ವಾನವನ್ನು ಪ್ರಾಣಕ್ಕಿಂತ ಪ್ರೀತಿಸುವವರನ್ನು ನಾವು ಆಗಾಗ ಕಾಣಬಹುದು. ಶ್ವಾನವನ್ನು ಮಾಲೀಕನೊಬ್ಬ ತನ್ನ ಬೈಕ್ ಹಿಂದುಗಡೆ ನಿಲ್ಲಿಸಿಕೊಂಡು ಗೆಳೆಯನ್ನು ಕರೆದುಕೊಂಡು ಹೋದಂತೆ ಕರೆದೊಯ್ದ ವೀಡಿಯೊವೊಂದು ಇದೀಗ ವೈರಲ್ ಆಗಿದೆ.
ಬೈಕ್ ನಲ್ಲಿ ಮಾಲೀಕ ನಾಯಿಯನ್ನು ಸುಮಾರು 3 ಕಿ.ಮೀ. ಬೈಕಿನ ಹಿಂದೆ ನಿಲ್ಲಿಸಿಕೊಂಡು ಕರೆದೊಯ್ದಿದ್ದಾರೆ. ಮೂಡಿಗೆರೆ ತಾಲೂಕಿನ ಹಾಂದಿ ಬಳಿ ಈ ಘಟನೆ ನಡೆದಿದೆ.
ವೇಗವಾಗಿದ್ದ ಬೈಕಿನ ಹಿಂದೆ ನಿಂತ ನಾಯಿ ಬ್ಯಾಲೆನ್ಸಿಗಾಗಿ ಆಗಾಗ ಸರ್ಕಸ್ ಮಾಡುತ್ತಿತ್ತು.
ಬೈಕಿನ ಸೀಟಿನ ಮೇಲೆ ಒಂದು ಕಾಲು ಜಾರಿದಾಗ 3 ಕಾಲಿನಲ್ಲಿ ಶ್ವಾನ ಬ್ಯಾಲೆನ್ಸ್ ಮಾಡುತ್ತಿತ್ತು.
ಬೈಕಿನ ಮೇಲೆ ನಿಂತು ಸರ್ಕಸ್ ಮಾಡಿದ ನಾಯಿಯ ವಿಡಿಯೋವನ್ನ ಮತ್ತೊಬ್ಬ ಬೈಕ್ ಸವಾರ ಸೆರೆ ಹಿಡಿದಿದ್ದಾರೆ.