ಇತ್ತೀಚಿನ ಸುದ್ದಿ
ಬೈಕಿಗೆ ಗುದ್ದಿ ಮನೆಗೆ ನುಗ್ಗಿದ ಕಾರು: ಸವಾರ ಗಂಭೀರ; ಮನೆ ಮಂದಿ ಸ್ವಲ್ಪದರಲ್ಲೇ ಅಪಾಯದಿಂದ ಪಾರು
05/08/2022, 19:24
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಬೈಕಿಗೆ ಗುದ್ದಿ ಮನೆಗೆ ನುಗ್ಗಿದ ರಿಟ್ಜ್ ಕಾರೊಂದು ಮನೆಯೊಂದಕ್ಕೆ ನುಗ್ಗಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಶಾಂತಿಪುರ ಬಳಿ ಶುಕ್ರವಾರ ನಡೆದಿದೆ.
ರಾಜ್ಯ ಹೆದ್ದಾರಿ 27ರಲ್ಲಿ ನಡೆದ ಈ ಅವಘಡದಲ್ಲಿ ಪಲ್ಸರ್ ಬೈಕ್ ಚಾಲಕನಿಗೆ ಗಂಭೀರ ಗಾಯ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಾರು ನುಗ್ಗಿದ ರಭಸಕ್ಕೆ ಮನೆಯ ಮುಂಭಾಗದ ಗೋಡೆ ಕುಸಿದಿದೆ. ಮನೆಯವರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.