11:59 AM Saturday5 - July 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಗೆ ಅಧಿಕಾರ, ಆರೆಸ್ಸೆಸ್‌ ಬ್ಯಾನ್‌ ಹಗಲುಗನಸು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಚಿಕ್ಕಮಗಳೂರು: ಶಾಲೆಗೆ ರಜೆ; ಕೆರೆಯಲ್ಲಿ ಈಜಲು ಹೋದ ಬಾಲಕ ದಾರುಣ ಸಾವು ನಾಪತ್ತೆಯಾಗಿದ್ದ ಕೊಡಗಿನ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ ಭೂ ಸ್ವಾಧೀನ; ಕಾನೂನು ತೊಡಕು ನಿವಾರಿಸಿ ರೈತರ ಸಭೆ: ಮುಖ್ಯಮಂತ್ರಿ ಸಿದ್ದರಾಮಯ್ಯ Virajpete | ಎರಡು ಮಕ್ಕಳ ತಾಯಿಯೊಂದಿಗೆ ಲಿವಿಂಗ್ ರಿಲೇಶನ್ ಶಿಪ್: ಯುವಕ ಆತ್ಮಹತ್ಯೆಗೆ… ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ದಿನ ದೂರವಿಲ್ಲ: ಬೀದರ್ ನಲ್ಲಿ ಸಚಿವೆ ಲಕ್ಷ್ಮೀ… ಕಡೂರು: 6 ದಿನಗಳ ಹುಡುಕಾಟದ ನಂತರವೂ ಸಿಗದ ಫಾರೆಸ್ಟ್ ಗಾರ್ಡ್ ಶರತ್‌ ಸುಳಿವು ಸೋರುತ್ತಿದೆ ಸೂರು; ಕೊಠಡಿ ತುಂಬಾ ನೀರು: ರಾಷ್ಟ್ರಕವಿ ಕುವೆಂಪು ಓದಿದೆ ಶಾಲೆಯ ಕೇಳುವವರೇ… ಮಲೆನಾಡಲ್ಲಿ ಮುಂದುವರಿದ ಮಳೆ: ಶೃಂಗೇರಿಯ ಗಾಂಧಿ ಮೈದಾನದ ರಸ್ತೆಗೆ ನುಗ್ಗಿ ನೆರೆ ನೀರು;… ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಪೈಪೋಟಿಯಿಲ್ಲ: ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ

ಇತ್ತೀಚಿನ ಸುದ್ದಿ

ಬಿಗ್ ಬಾಸ್ 13ರಲ್ಲಿ ವಿಜೇತರಾಗಿದ್ದ ಸಿದ್ದಾರ್ಥ್ ಶುಕ್ಲಾ ಹೃದಯಾಘಾತದಿಂದ ನಿಧನ

02/09/2021, 19:27

ಹಿಂದಿ ಕಿರುತೆರೆ ನಟ ಸಿದ್ದಾರ್ಥ್ ಶುಕ್ಲಾ ನಿಧನರಾಗಿದ್ದಾರೆ. ‘ಬಿಗ್ ಬಾಸ್ 13’ರಲ್ಲಿ ವಿಜೇತರಾಗಿದ್ದ ಸಿದ್ದಾರ್ಥ್ ಶುಕ್ಲಾ ಹೃದಯಾಘಾತದಿಂದ ಗುರುವಾರ ಸಾವನ್ನಪ್ಪಿದ್ದಾರೆ.

40 ವರ್ಷ ವಯಸ್ಸಿನ ಸಿದ್ದಾರ್ಥ್ ಶುಕ್ಲಾ ಅಕಾಲಿಕ ನಿಧನವನ್ನು
ಮುಂಬೈನ ಕೂಪರ್ ಆಸ್ಪತ್ರೆ ದೃಢಪಡಿಸಿದೆ. ನಿದ್ದೆ ಮಾಡುವ ಮುನ್ನ ಕೆಲ ಔಷಧಿಗಳನ್ನು ಸಿದ್ದಾರ್ಥ್ ಶುಕ್ಲಾ ಸೇವಿಸಿದ್ದರು ಎನ್ನಲಾಗಿದೆ. ಹೃದಯಾಘಾತದಿಂದ ಸಿದ್ದಾರ್ಥ್ ಶುಕ್ಲಾ ನಿಧನರಾಗಿದ್ದಾರೆ ಎಂದು ಕೂಪರ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಸದ್ಯ ಸಿದ್ದಾರ್ಥ್ ಶುಕ್ಲಾ ಅವರ ಮೃತದೇಹದ ಪೋಸ್ಟ್ ಮಾರ್ಟಂ ನಡೆಯುತ್ತಿದೆ.

ಡಿಸೆಂಬರ್ 12, 1980 ರಂದು ಮುಂಬೈನಲ್ಲಿ ಜನಿಸಿದವರು ಸಿದ್ದಾರ್ಥ್ ಶುಕ್ಲಾ. ಅಶೋಕ್ ಶುಕ್ಲಾ-ರಿತಾ ಶುಕ್ಲಾ ದಂಪತಿಯ ಮಗನಾಗಿ ಜನಿಸಿದ ಸಿದ್ದಾರ್ಥ್ ಶುಕ್ಲಾ ಇಂಟೀರಿಯರ್ ಡಿಸೈನಿಂಗ್‌ನಲ್ಲಿ ಪದವಿ ಪಡೆದಿದ್ದರು. ಇಂಟೀರಿಯರ್ ಡಿಸೈನರ್ ಆಗಿ ಕೆಲ ವರ್ಷ ಕೆಲಸ ಮಾಡಿದ ಸಿದ್ದಾರ್ಥ್ ಶುಕ್ಲಾ ಮಾಡೆಲಿಂಗ್ ಲೋಕಕ್ಕೆ ಕಾಲಿಟ್ಟರು. 2005ರಲ್ಲಿ ಟರ್ಕಿಯಲ್ಲಿ ನಡೆದ ‘ವರ್ಲ್ಡ್ಸ್ ಬೆಸ್ಟ್ ಮಾಡೆಲ್’ ಸ್ಪರ್ಧೆಯಲ್ಲಿ ಭಾಗವಹಿಸಿ ಗೆಲುವಿನ ನಗೆ ಬೀರಿದರು. ನಂತರ ಅನೇಕ ಜಾಹೀರಾತುಗಳಲ್ಲಿ ಸಿದ್ದಾರ್ಥ್ ಶುಕ್ಲಾ ಕಾಣಿಸಿಕೊಂಡರು.

ಸಿದ್ದಾರ್ಥ್ ಶುಕ್ಲಾ ಹಿಂದಿ ಕಿರುತೆರೆಗೆ ಪದಾರ್ಪಣೆ ಮಾಡಿದ್ದು 2008 ರಲ್ಲಿ. ಅದು ‘ಬಾಬುಲ್ ಕಾ ಆಂಗನ್ ಚೂಟೇ ನಾ’ ಧಾರಾವಾಹಿ ಮೂಲಕ. ಬಳಿಕ ‘ಲವ್ ಯೂ ಜಿಂದಗಿ’, ‘ಬಾಲಿಕಾ ವಧು’, ‘ದಿಲ್ ಸೇ ದಿಲ್ ತಕ್’ ಧಾರಾವಾಹಿಗಳಲ್ಲಿ ಸಿದ್ದಾರ್ಥ್ ಶುಕ್ಲಾ ಅಭಿನಯಿಸಿದರು. ಇವು ಸಿದ್ದಾರ್ಥ್ ಶುಕ್ಲಾಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತ್ತು.

ಇತ್ತೀಚಿನ ಸುದ್ದಿ

ಜಾಹೀರಾತು