7:15 PM Friday12 - September 2025
ಬ್ರೇಕಿಂಗ್ ನ್ಯೂಸ್
Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು… Kodagu | ಕಾಲೇಜಿನಲ್ಲಿ ಮಚ್ಚು ಹಿಡಿದು ರೀಲ್ಸ್: ವಿದ್ಯಾರ್ಥಿ ವಿರುದ್ದ ಪ್ರಕರಣ ದಾಖಲು;… Kodagu | ಕೇರಳದ ಕಸಾಯಿಖಾನೆಗೆ ಕೋಣಗಳ ಸಾಗಾಟ: 34 ಕೋಣಗಳ ರಕ್ಷಣೆ ಸಂತೋಷದ ಬಾಗಿಲಿನತ್ತ ಪೂಜಾಳ ಪಯಣ: ಬಿಹಾರದಲ್ಲಿರುವ ಕುಟುಂಬ ಜತೆ ಪುನರ್ಮಿಲನ ಕರಾವಳಿಯಲ್ಲಿ ಸಂಭ್ರಮದ ಮೊಂತಿ ಹಬ್ಬ: ಚರ್ಚ್ ಗಳಲ್ಲಿ ವಿಶೇಷ ಬಲಿಪೂಜೆ; ತೆನೆ ವಿತರಣೆ ಮೈಸೂರು ದಸರಾ: ಗೋಲ್ಡ್​ ಕಾರ್ಡ್​; ಟಿಕೆಟ್​ ದರ ಎಷ್ಟು? ಖರೀದಿ ಹೇಗೆ? ಇಲ್ಲಿದೆ… Kodagu | ಮಡಿಕೇರಿ: ಮಾಂದಲಪಟ್ಟಿಗೆಯಲ್ಲಿ ಪ್ರವಾಸಿಗನ ಮೇಲೆ ಜೀಪ್ ಚಾಲಕ ಹಲ್ಲೆ

ಇತ್ತೀಚಿನ ಸುದ್ದಿ

ಭೂ ಸಂತ್ರಸ್ತರಿಗೆ ಸಿಗದ ಪರಿಹಾರ: ಶೀಘ್ರದಲ್ಲೇ ಬಳ್ಳಾರಿ ಬಂದ್ ಗೆ ರಾಜ್ಯ ರೈತ ಸಂಘ ನಿರ್ಧಾರ

22/09/2024, 20:54

ಗಣೇಶ್ ಇನಾಂದಾರ ಬಳ್ಳಾರಿ

info.reporterkarnataka@gmal.com

ಕೈಗಾರಿಕೆ ಸ್ಥಾಪನೆಯ ಉದ್ದೇಶಕ್ಕಾಗಿ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ರೈತರಿಂದ ವಶಪಡಿಸಿಕೊಂಡ ಜಮೀನುಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ ಇಲ್ಲವೆ ಜಮೀನುಗಳನ್ನು ವಾಪಸ್‌ ನೀಡಲು ಒತ್ತಾಯಿಸಿ, ನಿರುದ್ಯೋಗ ಭತ್ಯೆಗಾಗಿ ಆಗ್ರಹಿಸಿ ಭೂ ಸಂತ್ರಸ್ತರು, ವಿವಿಧ ಸಂಘಟನೆಗಳಿಂದ ನಡೆಸುವ ಹೋರಾಟವು ಕುಡತಿನಿಯಲ್ಲಿ ಭಾನುವಾರಕ್ಕೆ 645 ದಿನಗಳನ್ನು ಪೂರೈಸಿತು.
ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಯು.ಬಸವರಾಜ್ ಮಾತನಾಡಿ, ‘ಕುಡತಿನಿ, ಸುತ್ತಲಿನ ಗ್ರಾಮಗಳ ಬಡ ರೈತರಿಂದ 2010ರಲ್ಲಿ ಅರ್ಸೇಲ್‍ರ ಮಿತ್ತಲ್, ಬ್ರಾಹ್ಮಿಣಿ ಸ್ಟೀಲ್ ಹಾಗೂ ಎನ್‍ಎಂಡಿಸಿ ಕಂಪನಿಗಳು ಕೈಗಾರಿಕೆಗಳ ಸ್ಥಾಪನೆಯ ಉದ್ದೇಶಕ್ಕಾಗಿ ಮೋಸದ ಭೂ ಬೆಲೆ, ಅತಿ ಕಡಿಮೆ ಬೆಲೆಗೆ 13 ಸಾವಿರ ಎಕರೆಯ ಭೂಮಿ ವಶಪಡಿಸಿಕೊಂಡು ಸುಮಾರು 14 ವರ್ಷಗಳಾದರೂ ಕೈಗಾರಿಕೆಗಳನ್ನು ಸ್ಥಾಪಿಸಿಲ್ಲ. ರೈತರಿಗೆ ಉದ್ಯೊಗ ಭದ್ರತೆ ಒದಗಿಸಿಲ್ಲ. ರಾಜ್ಯ ಸರ್ಕಾರವು ಮೋಸದ ಭೂ ಬೆಲೆ ರದ್ದುಪಡಿಸಿ ಕೋರ್ಟ್ ಆದೇಶದಂತೆ ಹೊಸ ಭೂ ಬೆಲೆಯನ್ನು ನಿಗದಿಪಡಿಸಿ ಪ್ರತಿ ರೈತ ಕುಟುಂಬಕ್ಕೆ ರೂ 1.60 ಲಕ್ಷಕ್ಕಿಂತ ಹೆಚ್ಚಿನ ಭೂ ಬೆಲೆಯನ್ನು ನೀಡಬೇಕು’ ಎಂದರು.

ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಎಲ್ಲ ಗ್ರಾಮಗಳ ರೈತರಿಂದ, ವಿವಿಧ ಸಂಘಟನೆಗಳ ಸಹಕಾರದಿಂದ ಶೀಘ್ರವಾಗಿ ಬಳ್ಳಾರಿ ಬಂದ್‍ ನಡೆಸಲಾಗುವುದು ಎಂದು ಹೇಳಿದರು.

‘ಇತ್ತೀಚೆಗೆ ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕದ ವಿಮೋಚಾನ ದಿನಾಚರಣೆ ಅಂಗವಾಗಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು ಕಲ್ಯಾಣ ಕರ್ನಾಟಕ ಭಾಗದ ಭೂಮಿ ಕಳೆದು ಕೊಂಡ ಕುಡತಿನಿಯ ಬಡ ರೈತರು ಸುಮಾರು ಎರಡು ವರ್ಷಗಳಿಂದ ನಿರಂತರ ಧರಣಿ ನಡೆಸುತ್ತಿದ್ದರೂ ಅವರ ಬಗ್ಗೆ ಸಭೆಯಲ್ಲಿ ಮುಖ್ಯಮಂತ್ರಿ, ಇತರೆ ಮಂತ್ರಿಗಳು ಕನಿಷ್ಠ ಸೌಜನ್ಯಕ್ಕಾದರೂ ಚರ್ಚೆ ನಡೆಸಿದಿರುವುದು ಅತ್ಯಂತ ವಿಷಾದಕರ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಖಂಡರಾದ ತಿಪ್ಪೇಸ್ವಾಮಿ, ಜಂಗ್ಲಿಸಾಬ್, ಅಂಜಿನಪ್ಪ, ಯು.ತಿಮ್ಮಪ್ಪ, ಮಲ್ಲಯ್ಯ, ಶೇಖರ್, ವಿವಿಧ ಗ್ರಾಮಗಳ ರೈತರು ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು