7:14 AM Sunday5 - October 2025
ಬ್ರೇಕಿಂಗ್ ನ್ಯೂಸ್
ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಗರ ಆತಂಕಗೊಳಿಸಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ Kodagu | ಡಿವೈಎಸ್ಪಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಅ. 16 ರವರೆಗೆ… ಹೆತ್ತಬ್ಬೆಯನ್ನೇ ಕೊಂದ ಪಾಪಿ ಪುತ್ರ: ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಹತ್ಯೆ; ಆರೋಪಿಯ… Kodagu | ಮಂಜಿನ ನಗರಿ ಮಡಿಕೇರಿಯಲ್ಲಿ ಜನೋತ್ಸವಕ್ಕೆ ಜನಜoಗುಳಿ: ದಶ ಮಂಟಪಗಳಿಂದ ಶೋಭಾ… Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ… ಮಡಿಕೇರಿ ದಸರಾ ಶೋಭಯಾತ್ರೆಗೆ ತೆರೆ: ದಶಮoಟಪಗಳ ತೀರ್ಪುಗಾರರ ವಿರುದ್ದ ಆಕ್ರೋಶ; ಪ್ರತಿಭಟನೆ ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ ವಿಶ್ವ ವಿಖ್ಯಾತ ಮೈಸೂರು ದಸರಾ: ಜಂಬೂ ಸವಾರಿಗೆ ಗಜಪಡೆ ಸಜ್ಜು ಮೈಸೂರು ಅರಮನೆಗೆ ಬೆಳ್ಳಿ ರಥದಲ್ಲಿ ಹೊರಟ ಚಾಮುಂಡಿ ದೇವಿ: ಬಿಗಿ ಬಂದೋಬಸ್ತ್

ಇತ್ತೀಚಿನ ಸುದ್ದಿ

ಭಾರತೀಯ ಸಮಾಜದಲ್ಲಿ ಗಂಡು-ಹೆಣ್ಣು ಸಮಾನತೆ: ನಿಜವೇ? ಭ್ರಮೆಯೇ? ತಮಾಷೆಯೇ? ಅಲ್ಲ, ಇದು ಆಕಾಶಕ್ಕೊಂದು ಏಣಿಯೇ ?

15/06/2021, 16:55

ಭಾರತವು ವಿವಿಧತೆಯಲ್ಲಿ ಏಕತೆಯ ಕಂಡ ರಾಷ್ಟ್ರ. ಪ್ರಕೃತಿಯ ಅಭೂತಪೂರ್ವ ಸೃಷ್ಟಿಯೇ ಈ ಗಂಡು ಮತ್ತು ಹೆಣ್ಣಾದರೆ ಇವರಲ್ಲೇಕಿಲ್ಲ ಸಮಾನತೆ? ಇವರಿಬ್ಬರ ನಡುವೆ ಕೇವಲ ದೇಹರಚನೆಯಲ್ಲಿ ವ್ಯತ್ಯಾಸವಿದೆಯೇ ವಿನಃ ಇವರ ಆಸೆ, ಆಕಾಂಕ್ಷೆ ಮತ್ತು ಅಭಿರುಚಿಗಳಲ್ಲಿ ಅಲ್ಲ. ಭಗವಂತನ ಈ ಅಪರೂಪದ ಸೃಷ್ಟಿಯಲ್ಲಿ ಸಮಾನತೆ ಪದಕ್ಕಿಂದು ಅರ್ಥವಿಲ್ಲದಂತಾಗಿದೆ. 

ಅಂದು ಗಾಂಧೀಜಿ ನುಡಿದ ಮಾತು ‘ಯಾವತ್ತು ಒಬ್ಬ ಹೆಣ್ಣು ನಡುರಾತ್ರಿ ಒಬ್ಬಂಟಿಯಾಗಿ ಬೀದಿಯಲ್ಲಿ ನಡೆಯುತ್ತಾಳೋ, ಅಂದು ಭಾರತವು ಸ್ವಾತಂತ್ರ್ಯವನ್ನು ಪಡೆಯುವುದು’ ಇದು ಇಂದಿಗೂ ಕನಸಾಗಿಯೇ ಉಳಿದಿದೆ. ವಾಸ್ತವದಲ್ಲಿ ಇಂದು ನಾವು

ಪ್ರತಿದಿನವೂ ಟಿವಿ, ಪತ್ರಿಕೆ, ಶ್ರವಣ ಮಾಧ್ಯಮಗಳಲ್ಲಿ ಹೆಣ್ಣಿನ ಮೇಲೆ ಅತ್ಯಾಚಾರ ಸುದ್ದಿಯನ್ನು ನೋಡುತ್ತೇವೆ, ಕೇಳುತ್ತೇವೆ. ದಿನಬೆಳಗಾದರೆ ಸಾಕು GANG RAPE ಇನ್ನೊಂದು ಮತ್ತೊಂದು ಎಂದು ಹೆಣ್ಣಿನ ಮೇಲಾಗುವ ದೌರ್ಜನ್ಯ ಒಂದಲ್ಲ ಎರಡಲ್ಲ ಲೆಕ್ಕವಿಲ್ಲದಷ್ಟು. ಇದನ್ನ ನೋಡುವವರಿಗೆ, ಕೇಳುವವರಿಗೆ ಕೇವಲ ಸಣ್ಣ ವಿಷಯವಾದರೂ ಅನುಭವಿಸುವ ಜೀವಕ್ಕೆ ಗೊತ್ತು ಅದರ ಹಿಂದಿನ ಯಾತನೆ.

ರಾಷ್ಟ್ರಪಿತರ ಮಾತು ಶತ ಶತಮಾನಗಳುರುಳಿದರೂ ಫಲಿಸದು.

ನವಮಾಸ ತನ್ನ ಹೊಟ್ಟೆಯಲ್ಲಿ ಇಟ್ಟುಕೊಳ್ಳುವ ತಾಯಿ ಅದೆಷ್ಟೋ ಯಾತನೆ ಪಡುತ್ತಾಳೆ. ಅಂತಹ ಕಂದಮ್ಮನ ಮೇಲೆ ದೌರ್ಜನ್ಯ ನಡೆಯುತ್ತದೆ. ನಾವು ನಮ್ಮ ಅಮ್ಮ, ಅಕ್ಕ, ತಂಗಿಯರ ಮೇಲೆ ಯಾಕೆ ದೌರ್ಜನ್ಯ ನಡೆಸುವುದಿಲ್ಲ? ಅವರ ಹಾಗೆ ತಾನೆ ಬೇರೆ ಮನೆಯ ಹೆಣ್ಮಕ್ಕಳು ಕೂಡ ಎಂಬ ಅರಿವು ನಮ್ಮಲ್ಲಿ ಮೂಡಬೇಕು.

ಸಮಾಜದಲ್ಲಿ ಕೇವಲ ಸಂತಾನಭಿವೃದ್ಧಿಗೆ ಮಾತ್ರ ಹೆಣ್ಣು ಬೇಕೇ?

ಹೆಣ್ಣು ಗಂಡಿನ ಕಾಮದ ವಸ್ತುವೇ,? ಇಲ್ಲ ಸೂತ್ರದ ಗೊಂಬೆಯೇ? ಮೈತುಂಬಿ ಬೆಳೆದು ಜನಮದಾತರ ಎದೆ ಎತ್ತರಕ್ಕೆ ನಿಂತ ಮುಗ್ಧ ಜೀವಿಯು ಕೇವಲ ಕಾಮವನ್ನೇ ಉಸಿರಾಗಿಸಿರುವ ಕೆಲವೊಂದು ಬರಗೆಟ್ಟ ಗಂಡಿಗೆ ಆಹಾರವಾಗಬೇಕೇ? 

ಹೆಣ್ಣಿನ ಮೇಲಾಗುವ ಈ ಅಮಾನುಷ ಕೃತ್ಯಕ್ಕೆ ಆಕೆ ಧರಿಸುವ ಉಡುಪುಗಳೇ ಮೂಲ ಕಾರಣವೆಂದರೆ ನಂಬುವುದು ಕಷ್ಟಸಾಧ್ಯ. ಏಕೆಂದರೆ ಏನೂ ಅರಿಯದ ತೊಟ್ಟಿಲ ಹಸುಳೆಯನ್ನೇ ಬಿಡದ ಭಕ್ಷಕರು ಇನ್ನಾವ ಹೆಣ್ಣನ್ನು ಬಿಟ್ಟಾರು? ಹೀಗಿದ್ದ ಮೇಲೆ ಗಂಡಿನ ಕಾಮಕ್ಕೂ ಹೆಣ್ಣು ಧರಿಸುವ ಬಟ್ಟೆಗೂ ಸಂಬಂಧ ಕಲ್ಪಿಸಲಾಗದು. ಮತ್ತೊಂದೇನೆಂದರೆ ಸಾಮಾನ್ಯ ಪ್ರಜೆಗಳಾದ ನಾವು ಆ ಪಕ್ಷ ಈ ಪಕ್ಷ ಎಂದು ರಾಜಕೀಯವನ್ನು ಎತ್ತಿ ಹಿಡಿದು ಯಾವುದೇ ಪಕ್ಷವನ್ನು ಟೀಕಿಸಿ ಅಲ್ಲಗಳೆಯುವುದರಿಂದ ಏನನ್ನೂ ಕಿತ್ತುಕೊಳ್ಳಲಾಗದು. ರಾಜಕೀಯದ ಹಿಂದೆ ಓಟಕ್ಕಿಳಿಯುವುದಕ್ಕಿಂತ ನಾವೆಲ್ಲರೂ ಮಾನವರೆಂದು ನಮ್ಮೊಳಗಿನ ಸಹೋದರಿಗಿಂದು ಕಷ್ಟ ಒದಗಿದೆ ಎಂದರಿತು ನ್ಯಾಯದ ಹಾದಿಯಲ್ಲಿ ನಡೆಯಲಾಗದೆ? ಕಾಡಿಗೆ ಹತ್ತಿರುವ ಬೆಂಕಿ ತನ್ನ ಬುಡಕ್ಕೆ ಹತ್ತಿದಾಗ ಎಚ್ಚೆತ್ತುಕೊಳ್ಳುವುದು ಸರಿಯಲ್ಲ. ಕೆಲವೊಮ್ಮೆ ನನಗೆ ಕಾಡುವ ಪ್ರಶ್ನೆಯೆಂದರೆ ಈ ನೀಚ ಕೃತ್ಯವೆಸಗುವ ಗಂಡು ಜೀವಿ ನಿಜವಾಗಿಯೂ ತನ್ನ ತಾಯಿ ಗರ್ಭದಿಂದಲೇ ಜನಿಸಿರುವನೇ? ಅಕೆಯ ಎದೆ ಹಾಲೇ ಕುಡಿದಿರುವನೇ ? ಎಂದು ಇನ್ನೂ ಅರ್ಥವಾಗಿಲ್ಲ. ಇತರ ಎಲ್ಲ ಜೀವಿಗಳಿಗಿರುವ ಸ್ವಾತಂತ್ರ್ಯ ಹೆಣ್ಣಿಗೆಂದು ದಕ್ಕುವುದೋ..? ಇದಕ್ಕೆಲ್ಲ ಕೊನೆ ಎಂದೋ..?? 

ಪ್ರೀತಿ
ಉಪನ್ಯಾಸಕಿ
ಮಂಗಳ ಕಾಲೇಜು ಮಂಗಳೂರು

ಇತ್ತೀಚಿನ ಸುದ್ದಿ

ಜಾಹೀರಾತು