3:50 AM Friday27 - March 2026
ಬ್ರೇಕಿಂಗ್ ನ್ಯೂಸ್
ಕೇಂದ್ರ ಸರಕಾರವನ್ನು ಟೀಕೆ ಮಾಡುವುದರಲ್ಲೇ 3 ವರ್ಷಗಳ ಕಾಲಹರಣ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ… ಕೈ ನಾಯಕರ ಸಂಧಾನ ಯಶಸ್ವಿ: ದಾವಣಗೆರೆ ದಕ್ಷಿಣ ಬಂಡಾಯ ಅಭ್ಯರ್ಥಿ ಪೈಲ್ವಾನ್ ಸ್ಪರ್ಧೆಯಿಂದ… ಚಿಕ್ಕಮಗಳೂರು: ಬಿಸಿಲ ಧಗೆಗೆ ಹೊತ್ತಿ ಉರಿಯುತ್ತಿರುವ ಮೀಸಲು ಅರಣ್ಯ; ಅಪಾಯದಲ್ಲಿ ಜೀವ ಸಂಕುಲ 1ನೇ ತರಗತಿ ದಾಖಲಾತಿ ವಯೋಮಿತಿಯಲ್ಲಿ 60 ದಿನಗಳ ಸಡಿಲಿಕೆ: ಸಚಿವ ಮಧು ಬಂಗಾರಪ್ಪ… ತುಮಕೂರು | ಮಧ್ಯರಾತ್ರಿ ಕುಡುಕ ಪುಂಡರ ಅಟ್ಟಹಾಸ: 10ಕ್ಕೂ ಅಧಿಕ ವಾಹನಗಳ ಗ್ಲಾಸ್… ರಾಜ್ಯ ಸರ್ಕಾರಕ್ಕೆ ಪ್ರತಿಷ್ಠೆಯಾದ ಉಪ ಚುನಾವಣೆ: ಪೈಲ್ವಾನ್ ಮನವೊಲಿಸಲು ಜಮೀರ್‌ಗೆ ಮುಖ್ಯಮಂತ್ರಿ ಸೂಚನೆ ಮಾಜಿ ಶಾಸಕರ ಪುತ್ರನ ಕೊಲೆ ಪ್ರಕರಣ: ಮಹಿಳೆ ಸೇರಿ ಮೂವರು ಪೊಲೀಸ್ ವಶಕ್ಕೆ ಹೈಕಮಾಂಡ್ ಹೇಳಿದಾಗ ಡಿಕೆಶಿ ಸಿಎಂ: ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ ಕಾಂಗ್ರೆಸ್ ಮೋಸ ಮಾಡಿದೆ; ನಾಮಪತ್ರ ಹಿಂತೆಗೆಯುವ ಮಾತೇ ಇಲ್ಲ: ತೊಡೆ ತಟ್ಟಿದ ಪೈಲ್ವಾನ್‌ ದಾವಣಗೆರೆ ದಕ್ಷಿಣ: ಬಿಜೆಪಿ ಅಭ್ಯರ್ಥಿಯ ಪತ್ನಿಗೆ ಮುಸ್ಲಿಂ ಮಹಿಳೆಯರಿಂದ ಭವ್ಯ ಸ್ವಾಗತ, ಉಡಿ…

ಇತ್ತೀಚಿನ ಸುದ್ದಿ

ಭಾರತದೊಂದಿಗೆ ಬಾಹ್ಯಾಕಾಶ ಸಹಯೋಗ ನಕ್ಷತ್ರದಾಚೆಗೂ ಮುಂದುವರಿಯುವುದು: ಅಮೆರಿಕ ರಾಯಭಾರಿ ಗಾರ್ಸೆಟ್ಟಿ

27/05/2024, 10:52

ಬೆಂಗಳೂರು(reporterkarnataka.com): ಭಾರತದಲ್ಲಿನ ಅಮೆರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ ಅವರು ಬಾಹ್ಯಾಕಾಶ ವಲಯದ ಮಂಚೂಣಿ ನಾಯಕರು ಮತ್ತು ಉದ್ಯಮಿಗಳನ್ನು ಭೇಟಿ ಮಾಡಲು ಬೆಂಗಳೂರಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮುಂಬರುವ ದಿನಗಳಲ್ಲಿ ಅಮೆರಿಕ-ಭಾರತದ ಸಂಬಂಧ ಕಡಲ ತಡಿಯಿಂದ ಬಾಹ್ಯಾಕಾಶದ ನಕ್ಷತ್ರಗಳವರೆಗೂ ವಿವಿಧ ವಲಯಗಳಲ್ಲಿ ವಿಸ್ತರಿಸಲಿರುವ ವ್ಯಾಪಾರ ವಾಣಿಜ್ಯ ಸಂಬಂಧಗಳ ಮಹತ್ವವನ್ನು ಎತ್ತಿ ತೋರಿದರು.

ಕಾನ್ಸಲ್‌ ಜನರಲ್‌ ಕ್ರಿಸ್‌ ಹಾಡ್ಜಸ್‌ ಅವರೊಡಗೂಡಿ ಇಸ್ರೋ ಅಧ್ಯಕ್ಷ ಡಾ. ಸೋಮನಾಥ್‌ ಅವರನ್ನು ಭೇಟಿ ಮಾಡಿದ ರಾಯಭಾರಿ ಗಾರ್ಸೆಟ್ಟಿ ಅವರು ನಾಸಾ- ಇಸ್ರೋ ಸಿಂಥೆಟಿಕ್‌ ಅರ‍್ಚರ್‌ ರಾಡಾರ್‌ ಮಿಷನ್‌ (NISAR) ಸೇರಿದಂತೆ ಬಾಹ್ಯಾಕಾಶವಲಯದಲ್ಲಿ ಸಹಯೋಗಗಳ ಕುರಿತು ಮಾತುಕತೆ ನಡೆಸಿದರು. ಗಾರ್ಸೆಟ್ಟಿ ಅವರು ಉದ್ಯಮದ ಪ್ರಮುಖರು ಮತ್ತು ಅಮೇರಿಕನ್ ಚೇಂಬರ್ ಆಫ್ ಕಾಮರ್ಸ್‌ ಇಂಡಿಯಾದ ಸದಸ್ಯರೊಂದಿಗೆ, ವ್ಯೂಹಾತ್ಮಕ ಭದ್ರತೆ ಮತ್ತು ತಂತ್ರಜ್ಞಾನದ ಸಹಕಾರವನ್ನು ವಿಸ್ತರಿಸುವ ನಿಟ್ಟಿನಲ್ಲಿ ʼಯುಎಸ್-ಇಂಡಿಯಾ ಇನಿಶಿಯೇಟಿವ್ ಆನ್ ಕ್ರಿಟಿಕಲ್ ಅಂಡ್ ಎರ‍್ಜಿಂಗ್ ಟೆಕ್ನಾಲಜೀಸ್ (iCET) ಮಹತ್ವದ ಕುರಿತು ಮಾತನಾಡಿದರು. ಅಮೆರಿಕದ ರಾಯಭಾರಿ ಅವರು ಭಾರತದ ಮೊದಲ ಸಂಶೋಧನೆ ಆಧಾರಿತ ಹಾಗೂ ಸ್ವತಂತ್ರ ಲಾಭರಹಿತ ಸಾರ್ವಜನಿಕ ಸಂಸ್ಥೆಯಾದ ʻಬೆಂಗಳೂರು ಸೈನ್ಸ್‌ ಗ್ಯಾಲರಿʼಗೆ ಭೇಟಿ ನೀಡಿ “ಕಾರ್ಬನ್” ಪ್ರದರ್ಶನವನ್ನು ವೀಕ್ಷಿಸಿದರು.
ಜಂಟಿ ಬಾಹ್ಯಾಕಾಶ ಅನ್ವೇಷಣೆ, ಉಪಗ್ರಹಗಳ ಉಡಾವಣೆ ಹಾಗೂ ಗಗನಯಾತ್ರಿಗಳಿಗೆ ತರಬೇತಿ ನೀಡುವುದರ ಕುರಿತು ಕೇಂದ್ರೀಕೃತವಾಗಿದ್ದ ಅಮೆರಿಕ ಭಾರತ ವಾಣಿಜ್ಯ ಬಾಹ್ಯಾಕಾಶ ಸಹಕಾರ ಸಮ್ಮೇಳನದಲ್ಲಿ ಗಾರ‍್ಸೆಟ್ಟಿ ಅವರು ಮಾತನಾಡಿದರು.
“ಅಮೆರಿಕ-ಭಾರತ ವಾಣಿಜ್ಯ ಬಾಹ್ಯಾಕಾಶ ಸಹಕಾರ ಸಮ್ಮೇಳನದಲ್ಲಿ ಭಾಗವಹಿಸಲು ನಾನು ಇಂದು ಬೆಂಗಳೂರಿಗೆ ಬಂದಿರುವುದಕ್ಕೆ ಸಂತೋಷವಾಗಿದೆ. ಇಸ್ರೊ ಅಧ್ಯಕ್ಷ ಡಾ. ಸೋಮನಾಥ್ ಅವರೊಂದಿಗೆ ವೇದಿಕೆಯನ್ನು ಹಂಚಿಕೊಂಡಿರುವುದು ಹೆಮ್ಮೆಯ ಸಂಗತಿ, ಏಕೆಂದರೆ ನಾವು ನಮ್ಮ ಪಾಲುದಾರಿಕೆಯನ್ನು ನಕ್ಷತ್ರಗಳಿಗೆ ಮತ್ತು ಅದರಾಚೆಗೆ ಕೊಂಡೊಯ್ಯಲು ವಾಣಿಜ್ಯ ಅವಕಾಶಗಳನ್ನು ಅನಾವರಣ ಮಾಡುತ್ತೇವೆ. ಇಂದಿನ ಕಾರ‍್ಯಕ್ರಮವು ಅಮೆರಿಕ ಮತ್ತು ಭಾರತದ ಬಾಹ್ಯಾಕಾಶ ಸಹಕಾರವನ್ನು ವಾಯುಮಂಡಲಕ್ಕೆ ವಿಸ್ತರಿಸುವ ಹಲವು ಮಾರ್ಗಗಳಲ್ಲಿ ಒಂದಾಗಿದೆ.” ಎಂದು ಗಾರ್ಸೆಟ್ಟಿ ಅವರು ಹೇಳಿದರು.
ರಾಯಭಾರಿ ಗಾರ್ಸೆಟ್ಟಿ ಅವರು ಅಂಧರ ಕ್ರಿಕೆಟ್ ಕ್ಷೇತ್ರದಲ್ಲಿ ಮಾಜಿ ವಿಶ್ವ ಚಾಂಪಿಯನ್‌ ಆಗಿರುವ ತಂಡದ ಜತೆ ಒಡನಾಡಿದರು. ೨೦೨೮ ರ ಒಲಿಂಪಿಕ್ಸ್ ಮತ್ತು ಪ್ಯಾರಾ ಒಲಿಂಪಿಕ್ಸ್‌ಗೆ ಮುನ್ನ ಅಂಧರ ಕ್ರಿಕೆಟ್‌ ಅನ್ನು ಉತ್ತೇಜಿಸಲು ಈ ತಂಡವು ಅಮೆರಿಕಕ್ಕೆ ಭೇಟಿ ನೀಡುತ್ತಿರುವುದಕ್ಕೆ ಶುಭ ಹಾರೈಸಿದರು.
ಇದು ರಾಯಭಾರಿ ಗಾರ್ಸೆಟ್ಟಿಯವರ ಮೊದಲ ಬೆಂಗಳೂರು ಭೇಟಿಯಾಗಿದ್ದು, ಸಾಮಾಜಿಕ ಪ್ರಗತಿಗಾಗಿ ತಂತ್ರಜ್ಞಾನ ಮತ್ತು ಅನ್ವೇಷಣೆ ಹಾಗೂ ವಾಣಿಜ್ಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೆಚ್ಚಿನ ಸಹಯೋಗ ಮತ್ತು ವ್ಯೂಹಾತ್ಮಕ ಪಾಲುದಾರಿಕೆಗೆ ಅಡಿಪಾಯ ಹಾಕಲು ಅಮೆರಿಕ ಮತ್ತು ಭಾರತ ಪ್ರದರ್ಶಿಸುತ್ತಿರುವ ಬದ್ಧತೆಯನ್ನು ಒತ್ತಿಹೇಳಿತು.

ಇತ್ತೀಚಿನ ಸುದ್ದಿ

ಜಾಹೀರಾತು