1:28 AM Thursday13 - March 2025
ಬ್ರೇಕಿಂಗ್ ನ್ಯೂಸ್
ಎಲ್ಲರೂ ಬುದ್ದಿ ಹೇಳೋರೆ ಇರೋದು; ಹೊಸಬರು ಹಿರಿಯ ಮಾತು ಕೇಳಿ ಕಲಿಯಿರಿ: ನೂತನ… ಮಂಗಳೂರು ಏರ್ ಪೋರ್ಟ್: ಗುಡುಗು ಮಳೆಗೆ ಲ್ಯಾಂಡ್ ಆಗದೆ ವಾಪಸ್ ಹೋದ 3… DCM | ತುಂಗಭದ್ರ ಆಣೆಕಟ್ಟಿನ 27 ಟಿಎಂಸಿ ನೀರಿನ ಸದ್ಬಳಕೆಗೆ ಸರಕಾರ ಕ್ರಮ:… Traffic Jam | ಬೆಂಗಳೂರು ಸಂಚಾರ ದಟ್ಟಣೆ ನಿವಾರಣೆಗೆ ಟನಲ್ ರಸ್ತೆ, ಡಬಲ್… Home Minister | ಪೊಲೀಸರು ಸ್ವಂತ ವಾಹನದ ಮೇಲೆ ಪೊಲೀಸ್​ ಎಂದು ಬರೆಸುವಂತಿಲ್ಲ:… ಮಂಗಳೂರಿನ ಆಟೋಗಳಿಗೆ ತಮಿಳುನಾಡು ಮಾದರಿ ಅನುಷ್ಠಾನಗೊಳಿಸಿ: ವಿಧಾನ ಸಭೆಯಲ್ಲಿ ಶಾಸಕ ವೇದವ್ಯಾಸ ಕಾಮತ್… Budget Session | ರಾಜ್ಯದ 189 ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಿಗೆ ತಲಾ 10… ಕೆಎಎಸ್ ಮರು ಪರೀಕ್ಷೆ ಕೋರ್ಟ್ ಆದೇಶದ ಮೇಲೆ ಅವಲಂಬಿತವಾಗಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ Tourism | ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಕರಾವಳಿ ಭಾಗದ ಶಾಸಕರ ಜತೆ ಪ್ರತ್ಯೇಕ… ಕರಾವಳಿಗೆ ತಂಪೆರಚಿದ ವರ್ಷಧಾರೆ: ಮಂಗಳೂರಿನಲ್ಲಿ ಸಾಧಾರಣ ಮಳೆ; ಬೆಳ್ತಂಗಡಿಯಲ್ಲಿ ಆಲಿಕಲ್ಲು ಸುರಿಮಳೆ

ಇತ್ತೀಚಿನ ಸುದ್ದಿ

ಭಾರತೀಯ ವೈದ್ಯಕೀಯ ಸಂಘ ದ.ಕ.ಜಿಲ್ಲಾ ಶಾಖೆ ವೈದ್ಯರ ದಿನಾಚರಣೆ ; ಸಾಧಕ ವೈದ್ಯರಿಗೆ ಪ್ರಶಸ್ತಿ ಪ್ರದಾನ

09/07/2024, 22:23

 

ಮಂಗಳೂರು(reporterkarnataka.com): ವೈದ್ಯಕೀಯ ವೃತ್ತಿ ಒಂದು ಗೌರವಾನ್ವಿತ ವೃತ್ತಿಯಾಗಿದ್ದು, ವೈದ್ಯರು ಸಮಾಜದಲ್ಲಿ ಉನ್ನತ ಸ್ಥಾನವನ್ನು ಪಡೆದಿದ್ದಾರೆ ಎಂದು ನಿಟ್ಟೆ ವಿಶ್ವ ವಿದ್ಯಾಲಯದ ಕುಲಪತಿ ಡಾ.ಶಾಂತರಾಮ್ ಶೆಟ್ಟಿ ಹೇಳಿದರು.

ಅವರು ಭಾರತೀಯ ವೈದ್ಯಕೀಯ ಸಂಘ ದ.ಕ. ಜಿಲ್ಲಾ ಶಾಖೆಯ ಆಶ್ರಯದಲ್ಲಿ ಇತ್ತೀಚೆಗೆ ಸಂಸ್ಥೆಯ ಸಭಾಂಗಣದಲ್ಲಿ ಜರಗಿದ ವೈದ್ಯರ ದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದರು.

ವೈದ್ಯಕೀಯ ವೃತ್ತಿ ಮತ್ತು ಸೇವೆಯ ವಿರುದ್ಧ ಸರಕಾರ ವಿಶೇಷ ಕಾನೂನನ್ನು ಹೊರಡಿಸಿದೆ ಎಂದು ಖೇದ ವ್ಯಕ್ತಪಡಿಸಿ ಅದನ್ನು ವೈದ್ಯಕೀಯ ವೃಂದದವರು ವಿರೋಧಿಸಬೇಕು ಮತ್ತು ಪ್ರತಿಭಟಿಸಬೇಕೆಂದು ಕರೆ ನೀಡಿದರು.

ಭಾರತೀಯ ವೈದ್ಯಕೀಯ ದ.ಕ. ಜಿಲ್ಲಾ ಶಾಖೆಯ ಅಧ್ಯಕ್ಷ ಡಾ.ರಂಜನ್‌ ಅಧ್ಯಕ್ಷೀಯ ಭಾಷಣದಲ್ಲಿ ವೈದ್ಯರ ದಿನಾಚರಣೆಯ ಉದ್ದೇಶ ಮತ್ತು ಮಹತ್ವವನ್ನು ವಿವರಿಸಿ ಸಂಸ್ಥೆಯ ಭವಿಷ್ಯದ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಡಾ.ಎಲ್.ಎಲ್.ಜೋಶ್ವಾ (ವೈದ್ಯಕೀಯಶಾಸ್ತ್ರ ತಜ್ಞ), ಡಾ.ಜೀವರಾಜ್ ಸೊರಕೆ (ಶಸ್ತ್ರ ಚಿಕಿತ್ಸಕರು), ಡಾ.ಇಂದುಮತಿ ಮಲ್ಯ (ಸ್ತ್ರಿ ಆರೋಗ್ಯ ಮತ್ತು ಪ್ರಸೂತಿ ತಜ್ಞರು), ಡಾ.ಸುಬೀರ್ ರೆಬೆಲ್ಲೋ (ಕುಟುಂಬ ವೈದ್ಯರು) ಅವರು ವೈದ್ಯಕೀಯ ಕ್ಷೇತ್ರಕ್ಕೆ ಸಲ್ಲಿಸಿದ ಸುದೀರ್ಘ ಅನುಪಮ ಸೇವೆ ಮತ್ತು ಕೊಡುಗೆಯನ್ನು ಪರಿಗಣಿಸಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಂಸ್ಥೆಯ ನಿರಂತರ ವೈದ್ಯಕೀಯ ಶಿಕ್ಷಣ ಅಂಗವಾಗಿ ನಗರದ ಯೆನಪೋಯ ಆಸ್ಪತ್ರೆಯ ಕೀಲು ಮೂಳೆ ಶಾಸ್ತ್ರ ವಿಭಾಗದ ತಜ್ಞ ಡಾ.ದೀಪಕ್ ರೈ ಮಂಡಿ ಬದಲಾವಣೆಗೆ ಆಧುನಿಕ ರೊಬೋಟಿಕ್ ಶಸ್ತ್ರ ಚಿಕಿತ್ಸೆ ಬಗ್ಗೆ ಉಪನ್ಯಾಸ ನೀಡಿದರು.

ಸಂಸ್ಥೆಯ ಚುನಾಯಿತ ಅಧ್ಯಕ್ಷರಾದ ಡಾ.ಜೆಸ್ಸಿ ಮರಿಯಾ ಡಿ’ಸೋಜಾ, ಕೋಶಾಧಿಕಾರಿ ಡಾ.ಪ್ರಶಾಂತ್, ಸಂಸ್ಥೆಯ ಪ್ರತಿಷ್ಠಾನದ ಅಧ್ಯಕ್ಷ ಡಾ.ದಿವಾಕರ್ ರಾವ್, ಕೋಶಾಧಿಕಾರಿ ಕೆ.ಆರ್.ಕಾಮತ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಡಾ. ಅವಿನ್ ಆಳ್ವ ವಂದಿಸಿದರು. ಅಕ್ಷತಾ ಸುಧೀರ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

ಇತ್ತೀಚಿನ ಸುದ್ದಿ

ಜಾಹೀರಾತು