ಇತ್ತೀಚಿನ ಸುದ್ದಿ
ಬೆಂಗ್ರೆ ಅಭಿವೃದ್ಧಿಗೆ ರಾಜ್ಯ ಬಿಜೆಪಿ ಸರಕಾರ ಬದ್ಧ: ಶಾಸಕ ವೇದವ್ಯಾಸ ಕಾಮತ್
24/11/2022, 12:10

ಮಂಗಳೂರು(reporterkarnataka.com): ಬೆಂಗ್ರೆ ಪರಿಸರವನ್ನು ಅಭಿವೃದ್ಧಿಪಡಿಸಲು ರಾಜ್ಯ ಸರಕಾರದಿಂದ ಈಗಾಗಲೇ ಸಾಕಷ್ಟು ಯೋಜನೆಗಳನ್ನು ತರಲಾಗಿದೆ. ಮೀನುಗಾರಿಕೆಯನ್ನೇ ನಂಬಿಕೊಂಡಿರುವ ಈ ಭಾಗದ ಜನರ ಬೇಡಿಕೆಗಳನ್ನು ಈಡೇರಿಸಲು ನಮ್ಮ ಸರಕಾರ ಬದ್ಧವಾಗಿದೆ ಎಂದು ಶಾಸಕ ಡಿ. ವೇದವ್ಯಾಸ ಕಾಮತ್ ಹೇಳಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯ ಪಣಂಬೂರು ಬೆಂಗ್ರೆ ವಾರ್ಡಿನ ಕುದ್ರೋಳಿ ಬೆಂಗ್ರೆಯಲ್ಲಿ 75 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಮೀನುಗಾರರ ಹಿತ ಕಾಯುವ ದೃಷ್ಟಿಯಿಂದ ರಾಜ್ಯ ಸರಕಾರವು ವಿವಿಧ ಯೋಜನೆಗಳನ್ನು ರೂಪಿಸಿದೆ. ನಮ್ಮ ಸರಕಾರವು ಮೀನುಗಾರರ ಮಕ್ಕಳಿಗೆ ವಿಧ್ಯಾನಿಧಿ ಯೋಜನೆ ರೂಪಿಸಿದ್ದು ಅದರ ಉಪಯೋಗ ಪಡೆಯುವಂತೆ ಶಾಸಕರು ನುಡಿದರು.
ಈ ಸಂದರ್ಭದಲ್ಲಿ ಮಂಗಳೂರು ಉಪ ಮೇಯರ್ ಪೂರ್ಣಿಮಾ, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶಕಿಲಾ ಕಾವಾ, ಸ್ಥಳೀಯ ಕಾರ್ಪೋರೇಟರ್ ಸುನಿತಾ, ಮುಖಂಡರಾದ ಅರವಿಂದ್ ಬೆಂಗ್ರೆ, ವರದರಾಜ್, ಮಿಲನ್, ಯತೀಶ್, ಅಶ್ವತ್ಥಾಮ, ಪ್ರಸಾದ್, ಅಜಯ್, ನವೀನ್, ಭರತ್, ಪ್ರವೀಣ್, ಸುಧಾಕರ್, ವಸಂತ್ ಜೆ ಪೂಜಾರಿ, ಪ್ರಕಾಶ್, ಭಾಸ್ಕರ್, ಶ್ರೀಧರ್, ಭಾಗೀರಥಿ, ಸುನಂದಾ, ಸೂರ್ಯಕಾಂತ್, ಪ್ರಜ್ವಲ್, ಸುಧೀರ್, ಸೂರಜ್, ದಾಕ್ಷಾಯಿಣಿ, ಶ್ರೀನಿವಾಸ್, ವಿನಯ್, ನವೀನ್ ಪುತ್ರನ್, ಸೀಮಾ, ಚಂಪಾ, ಶಶಿಕಲಾ, ಲೀಲಾವತಿ, ಮನೋಜ್, ಅನಿಲ್ ಕಾಂಚನ್, ಅನಿಲ್ ಕರ್ಕೇರ, ದಯಾನಂದ್, ಕಿರಣ್, ಮುತ್ತಮ್ಮ, ವಿಶಾಲಾಕ್ಷಿ, ಜನಾರ್ದನ್, ವಿಶಾಲ್, ಶೇಖರ್, ಸುರೇಖಾ, ರಮ್ಯಾ, ಪಾರ್ವತಿ, ಶ್ರೀಕಾಂತ್, ಚಂದ್ರ ಶೇಖರ್, ರಾಜೇಶ್ ಮತ್ತಿತರು ಉಪಸ್ಥಿತರಿದ್ದರು.