6:54 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಬೆಂಗಳೂರು: ಶ್ರೀನಿವಾಸ ಪ್ರಭುಗೆ ಸೃಷ್ಟಿ ಯಕ್ಷ ಏಕಲವ್ಯ ಪ್ರಶಸ್ತಿ ಪ್ರದಾನ

15/08/2023, 21:49

ಬೆಂಗಳೂರು(reporterlarnataka.com): ಯಕ್ಷಗಾನದಿಂದ ಕನ್ನಡ ಭಾಷೆಯು ಇನ್ನಷ್ಟು ಜೀವಂತವಾಗಿರುತ್ತದೆ, ದೈಹಿಕ ಮಾನಸಿಕ ಸ್ವಾಸ್ಥ್ಯ ಕಾಪಾಡುವುದರಲ್ಲಿ ಯಕ್ಷಗಾನ ಅತ್ಯಂತ ಪ್ರಯೋಜನಕಾರಿ ಎಂದು ಎಂದು ಶಾಸಕ ರವಿ ಸುಬ್ರಹ್ಮಣ್ಯ ಹೇಳಿದರು.
ಚೆನ್ನಮ್ಮನಕೆರೆ ಅಚ್ಚುಕಟ್ಟು ಬಳಿಯ ಪರಂಪರಾ ಸಭಾಂಗಣದಲ್ಲಿ ಭಾನುವಾರ ಸೃಷ್ಟಿ ಕಲಾ ವಿದ್ಯಾಲಯದ 23ನೇ ಸೃಷ್ಟಿ ಸಂಭ್ರಮ ಅಂಗವಾಗಿ ಪ್ರಸಿದ್ಧ ಚೆಂಡೆವಾದಕ ಶ್ರೀನಿವಾಸ ಪ್ರಭು( ಗುಂಡ) ಅವರಿಗೆ ಸೃಷ್ಟಿ ಯಕ್ಷ ಏಕಲವ್ಯ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಸೃಷ್ಟಿ ಕಲಾವಿದ್ಯಾಲಯವು ನಿರಂತರ ಯಕ್ಷಗಾನ ತರಬೇತಿ, ಕಲಾಸೇವೆ ಮೂಲಕ ಬಸವನ ಗುಡಿ ಕ್ಷೇತ್ರದ ಗೌರವವನ್ನು ಹೆಚ್ಚಿಸಿದೆ ಎಂದರು.
ಪ್ರಶಸ್ತಿ ಸ್ವೀಕರಿಸಿದ ಶ್ರೀನಿವಾಸ ಪ್ರಭು, ಸೃಷ್ಟಿಯ ಈ ಪ್ರಶಸ್ತಿ ನನ್ನ ಕಲಾ ಬದುಕಿನಲ್ಲಿ ಅತ್ಯಂತ ಮಹತ್ವದ್ದು ಹಾಗೂ ಮರೆಯಲಾರದ್ದು ಎಂದರು.


ಸೃಷ್ಟಿ ಅಧ್ಯಕ್ಷ ಛಾಯಾಪತಿ ಕಂಚಿಬೈಲ್, ಗೌರವಾಧ್ಯಕ್ಷ ಶ್ರೀಕಾಂತ್ ಎಂ.ಜಿ., ಕಲಾವಿದರುಗಳಾದ ಸುಬ್ರಾಯ ಹೆಬ್ಬಾರ್, ಅಕ್ಷಯ ಆಚಾರ್ಯ ನಿತ್ಯಾನಂದ ನಾಯಕ್ , ಅರ್ಜುನ್ ಕೊರ್ಡೇಲ್, ಭರತ್ ರಾಜ್ ಪರ್ಕಳ ಇದ್ದರು.
ಈ ಸಂದರ್ಭ ಸುಬ್ರಾಯ ಹೆಬ್ಬಾರ್‌ ಮತ್ತು ಭರತ್‌ ರಾಜ್‌ ಪರ್ಕಳ ನಿರ್ದೇಶನದಲ್ಲಿ, ನಿತ್ಯಾನಂದ ನಾಯಕ್‌ ಪರಿಕಲ್ಪನೆಯಲ್ಲಿ ಸೃಷ್ಟಿ ಕಲಾ ವಿದ್ಯಾಲಯ ವಿದ್ಯಾರ್ಥಿಗಳಿಂದ ಕುಮಾರ ವಿಜಯ ಯಕ್ಷಗಾನ ಪ್ರದರ್ಶನ ಗೊಂಡಿತು.

ಇತ್ತೀಚಿನ ಸುದ್ದಿ

ಜಾಹೀರಾತು