ಇತ್ತೀಚಿನ ಸುದ್ದಿ
ಬೆಂಗಳೂರು ಪೊಲೀಸರಿಂದ ಭಾರಿ ಕಾರ್ಯಾಚರಣೆ: 454 ರೌಡಿಗಳ ಮನೆ ಮೇಲೆ ದಾಳಿ; 405 ಮಂದಿ ಖಾಕಿ ವಶಕ್ಕೆ
11/07/2021, 22:31

ಬೆಂಗಳೂರು(reporterkarnataka news): ಬೆಂಗಳೂರು ಪೊಲೀಸ್ ಇಲಾಖೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರಿ ಕಾರ್ಯಾಚರಣೆ ನಡೆಸಲಾಗಿದೆ. 454 ರೌಡಿಗಳ ಮನೆ ಮೇಲೆ ದಾಳಿ ನಡೆಸಿದ ಖಾಕಿ ಪಡೆ ರೌಡಿಸಂನಲ್ಲಿ ತೊಡಗಿಸಿಕೊಂಡಿರುವ 405 ಮಂದಿಯನ್ನು ವಶಕ್ಕೆ ಪಡೆದಿದೆ.
ದಕ್ಷಿಣ ವಿಭಾಗದ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ದಾಳಿ ವೇಳೆ ಮನೆಯಲ್ಲಿದ್ದ 39 ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಶಸ್ತ್ರಾಸ್ತ್ರ ಕಾಯಿದೆಯಡಿ 33 ಪ್ರಕರಣಗಳನ್ನು ದಾಖಲಿಸಲಾಗಿದೆ. ಮಂಜೇಶ್ ಗ್ಯಾಂಗ್ ಶಸ್ತ್ರಾಸ್ತ್ರ ಹೊಂದಿರುವುದಕ್ಕೆ ಬಂಧಿಸಲಾಗಿದೆ. ಉಳಿದಂತೆ ಬುಲೆಟ್ ರಾಜ, ಬಿಟಿಎಸ್ ಮಂಜ, ಬೈರೇಶ್ ಸೇರಿದಂತೆ 405 ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.