ಇತ್ತೀಚಿನ ಸುದ್ದಿ
ಬೆಂಗಳೂರು: ನವಜಾತ ಹೆಣ್ಣು ಶಿಶುವನ್ನು ದೇವರ ಗುಡಿ ಮುಂದಿಟ್ಟು ಪರಾರಿ
29/11/2021, 08:31
ಬೆಂಗಳೂರು(reporterkarnataka.com): ನವಜಾತ ಹೆಣ್ಣು ಶಿಶುವನ್ನು ದೇವಾಲಯದ ಮುಂದೆ ಇಟ್ಟು ಪರಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ದೇವನಹಳ್ಳಿ ತಾಲೂಕಿನ ವಿಜಯಪುರ – ಚಿಕ್ಕಬಳ್ಳಾಪುರ ರಸ್ತೆಯ ಕೆರೆಯ ಸಮೀಪವಿರುವ ದುರ್ಗಮ್ಮ ಗುಡಿ ಬಳಿ ರಾತ್ರಿಯಷ್ಟೇ ಹುಟ್ಟಿದ ನವಜಾತ ಹೆಣ್ಣು ಶಿಶುವನ್ನು ದೇವರ ಮುಂದೆ ಬಟ್ಟೆಯಲ್ಲಿ ಸುತ್ತಿ ಇಟ್ಟು ಹೋಗಿದ್ದಾರೆ. ಶಿಶು ಅಳುತ್ತಿದ್ದ ಧ್ವನಿ ಕೇಳಿ ಗುಡಿ ಬಳಿಗೆ ಬಂದ ಕೃಷ್ಣಮೂರ್ತಿ ಎನ್ನುವವರು ಮಗು ರಕ್ಷಣೆ ಮಾಡಿ ವಿಜಯಪುರ ಸರ್ಕಾರಿ ಆಸ್ಪತ್ರೆಗೆ ನೀಡಿದ್ದಾರೆ.
ಹೆಣ್ಣು ಎಂಬ ಕಾರಣಕ್ಕೋ ಅಥವಾ ಅನೈತಿಕ ಸಂಬಂಧಕ್ಕೆ ಹುಟ್ಟಿದ ಮಗುವೆಂದು ಹೆದರಿ ಗುಡಿಯ ಮುಂಭಾಗದಲ್ಲಿ ಬಿಟ್ಟು ಹೋಗಿರಬೇಕೆಂಬ ಶಂಕೆ ವ್ಯಕ್ತವಾಗಿದೆ.