ಇತ್ತೀಚಿನ ಸುದ್ದಿ
ಬೆಂಗಳೂರು ಮೆಟ್ರೋ ದುರಂತ: ದಾವಣಗೆರೆಯಲ್ಲಿ ತಾಯಿ- ಮಗು ಅಂತ್ಯಸಂಸ್ಕಾರ; ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂಧನ
12/01/2023, 11:13

ದಾವಣಗೆರೆ(reporterkarnataka.com): ಬೆಂಗಳೂರಿನಲ್ಲಿ ನಿರ್ಮಾಣ ಹಂತದಲ್ಲಿರುವ ಮೆಟ್ರೋ ಪಿಲ್ಲರ್ ಕುಸಿದು ಬಿದ್ದು ಸಾವನ್ನಪ್ಪಿದ ಸಾಫ್ಟ್ ವೇರ್ ಎಂಜಿನಿಯರ್ ತೇಜಸ್ವಿನಿ ಹಾಗೂ ಪುತ್ರ ವಿಹಾನ್ ಅಂತ್ಯಸಂಸ್ಕಾರ ನಡೆಯಿತು.
ದಾವಣಗೆರೆಯ ಬಸವೇಶ್ವರ ನಗರದ ಮನೆ ಮುಂದೆ ಮೃತರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಪಿ. ಬಿ. ರಸ್ತೆಯ ರುದ್ರಭೂಮಿಯಲ್ಲಿ ತೇಜಸ್ವಿನಿ ಹಾಗೂ ಗಾಜಿನ ಮನೆ ಸಮೀಪದ ರುದ್ರಭೂಮಿಯಲ್ಲಿ ವಿಹಾನ್ ಅಂತ್ಯ ಸಂಸ್ಕಾರ ನಡೆಯಿತು. ಭಾವಸಾರ ಕ್ಷತ್ರಿಯ ಸಮಾಜದ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನ ನೆರವೇರಿಸಲಾಯಿತು. ಕುಟುಂಬಸ್ಥರ ಆಕ್ರಂಧನ
ಮುಗಿಲು ಮುಟ್ಟಿತ್ತು.
ಸರಕಾರ ನಮಗೆ ಪರಿಹಾರ ಕೊಡುವುದು ಬೇಡ. ನಾವೇ ಪರಿಹಾರ ಕೊಡುತ್ತೇವೆ. ಹೋದ ಜೀವ ತಂದುಕೊಡಲು ಆಗುತ್ತಾ? ಕಮೀಷನ್ ಆಸೆಗೆ ಇಂಥ ಕಳಪೆ ಕಾಮಗಾರಿ ನಡೆಸಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ