ಇತ್ತೀಚಿನ ಸುದ್ದಿ
ಬೆಂಗಳೂರು ಕಾಶಿ ಮಠ ಗಣೇಶೋತ್ಸವಕ್ಕೆ ಸಚಿವ ಅಶ್ವಥ್ ನಾರಾಯಣ ಭೇಟಿ: ಪೂಜೆ ಸಲ್ಲಿಕೆ
06/09/2022, 06:16
ಬೆಂಗಳೂರು(reporterkarnataka.com): ನಗರದ ಮಲ್ಲೇಶ್ವರಂನಲ್ಲಿರುವ ಬೆಂಗಳೂರು ಶ್ರೀ ಕಾಶಿ ಮಠ ವ್ಯವಸ್ಥಾಪಕ ಸಮಿತಿ ಆಶ್ರಯದಲ್ಲಿ ನಡೆದ ಗಣೇಶೋತ್ಸವಕ್ಕೆ ಸಚಿವ ಅಶ್ವಥ್ ನಾರಾಯಣ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಮಾಜಿ ಉಪ ಮುಖ್ಯಮಂತ್ರಿಯೂ ಆಗಿರುವ ಅಶ್ವಥ್ ನಾರಾಯಣ ಅವರು ಗಣೇಶೋತ್ಸವ ಕೊನೆಯ ದಿನದ ಶೋಭಾಯಾತ್ರೆ ವೇಳೆ ಭೇಟಿ ಕೊಟ್ಟು ಸಿದ್ದಿ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಸಚಿವರು ಬೆಂಗಳೂರು ಕಾಶಿಮಠದ ಮುಖ್ಯಸ್ಥರಲ್ಲಿ, ಪದಾಧಿಕಾರಿಗಳ ಜತೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಉದ್ಯಮಿ ಹಾಗೂ ದಾನಿಯಾದ ಡಾ. ದಯಾನಂದ ಪೈ ಮುಂತಾದವರು ಉಪಸ್ಥಿತರಿದ್ದರು.