ಇತ್ತೀಚಿನ ಸುದ್ದಿ
ಬೆಂಗಳೂರಿಗೆ ಹೋಗುವುದಾಗಿ ತೆರಳಿದ ಮಹಿಳೆ 3 ಮಂದಿ ಮಕ್ಕಳ ಜತೆ ನಾಪತ್ತೆ: ಪತ್ತೆಗಾಗಿ ಮನವಿ
23/07/2021, 22:12

ಮಂಗಳೂರು(reporterkarnataka news): ಕೂಲಿ ಕೆಲಸಕ್ಕೆಂದು ಬಂದಿದ್ದ ಬಿಹಾರ ಮೂಲದ ಮಹಿಳೆ ತನ್ನ ಮೂವರು ಮಕ್ಕಳೊಂದಿಗೆ ಕಾಣೆಯಾಗಿದ್ದಾರೆ.
ಸುಭದ್ರಾದೇವಿ (32) ಕಾಣೆಯಾದ ಮಹಿಳೆ. ಬಿಹಾರದ ಬಗಲಪುರ ನಿವಾಸಿಯಾದ ಇವರು ಕೂಲಿ ಕೆಲಸಕ್ಕೆಂದು ತಮ್ಮ ಪತಿ ನೀರಜ್ ಚೌಧರಿಯೊಂದಿಗೆ ಪಚ್ಚನಾಡಿ ಗ್ರಾಮದ, “ಟೂ ಎಕರ್ಸ್” ಗೆ ಬಂದಿದ್ದರು.
ಸುಭದ್ರಾದೇವಿ, ಮೂರು ಮಂದಿ ಮಕ್ಕಳೊಂದಿಗೆ ಜುಲೈ 14 ರಂದು ಬೆಂಗಳೂರಿಗೆ ಹೋಗುವುದಾಗಿ ತೆರಳಿದವರು, ಬೆಂಗಳೂರಿಗೆ ಹೋಗದೇ, ತಮ್ಮ ಸ್ವಂತ ಊರಿಗೂ ಹೋಗದೇ ಕಾಣೆಯಾಗಿದ್ದಾರೆ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅವರು 5 ಅಡಿ ಎತ್ತರವಿದ್ದು, ಗೋಧಿ ಮೈ ಬಣ್ಣ, ಕೆನ್ನೆಯಲ್ಲಿ ಕಪ್ಪು ಎಳ್ಳು ಗಾತ್ರದ ಮಚ್ಚೆ, ಮೂಗುತ್ತಿ ಧರಿಸಿರುತ್ತಾಳೆ. ಹಿಂದಿ ಹಾಗೂ ಬಿಹಾರಿ ಮಾತನಾಡುತ್ತಾರೆ.
ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಹಾಗೂ ದೂರವಾಣಿ: 0824-2220535 ಸಂಪರ್ಕಿಸುವಂತೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.