8:15 AM Thursday16 - January 2025
ಬ್ರೇಕಿಂಗ್ ನ್ಯೂಸ್
ಗರೋಡಿ ಜಾತ್ರೆಗೂ ಊರವರಿಗೆ ನೀರಿಲ್ಲ!: 5 ದಿನಗಳಿಂದ ನೋ ವಾಟರ್!!; ಮೇಯರ್ ಅವರೇ… ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಸಚಿವ ಜಮೀರ್‌ ಭಾವಚಿತ್ರಕ್ಕೆ ಸಗಣಿ ಬಳಿದು ಬಿಜೆಪಿ… ಕೆಚ್ಚಲು ಕೊಯ್ದ ಪ್ರಕರಣ: ದನದ ಮಾಲೀಕನ ತಾಯಿಗೆ 3 ಹಸು ಕೊಡಿಸಿದ ಸಚಿವ… 5 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ: ಆರೋಪಿಯ ತಕ್ಷಣ ಬಂಧಿಸಲು ಆಗ್ರಹಿಸಿ ಎಐಎಂಎಸ್ಎಸ್… ಕಾಡಾನೆಯ ಚಿತ್ರೀಕರಣ ಮಾಡಲು ಹೋದ ಯೂಟ್ಯೂಬರ್ ಮೇಲೆ ಸಲಗ ದಾಳಿ: ಕೂದಲೆಳೆ ಅಂತರದಲ್ಲಿ… ವಿಕಲಚೇತನ ಉದ್ಯೋಗಿಗಳ ಜತೆ ಸಂಕ್ರಾಂತಿ ಹಬ್ಬ ಆಚರಿಸಿಕೊಂಡ ಕೇಂದ್ರ ಸಚಿವ ಕುಮಾರಸ್ವಾಮಿ ಶಬರಿಮಲೆ: ಆಕಾಶದತ್ತ ಮುಖ ಮಾಡಿ ಕಾಯುತ್ತಿದ್ದ ಭಕ್ತರಿಗೆ ಮಕರ ಜ್ಯೋತಿ ದರ್ಶನ: ಪುನೀತರಾದ… ನಂಜನಗೂಡು: ಶಿವಶರಣ ಶ್ರೀ ಸಿದ್ದರಾಮೇಶ್ವರ ರ ಜಯಂತಿ ಆಚರಣೆ ಜಿಹಾದಿ ಮನಸ್ಥಿತಿಯನ್ನು ಪೋಷಿಸಿ ಬೆಳೆಸುತ್ತಿರುವ ಸಿದ್ದರಾಮಯ್ಯ ಸರಕಾರ: ಸಂಸದ ಕ್ಯಾ ಬ್ರಿಜೇಶ್ ಚೌಟ… ವಿಜಯಪುರ: 4 ಮಂದಿ ಮಕ್ಕಳ ಜತೆ ಕಾಲುವೆಗೆ ಜಿಗಿದ ಹೆತ್ತಬ್ಬೆ: ಮಕ್ಕಳ ದಾರುಣ…

ಇತ್ತೀಚಿನ ಸುದ್ದಿ

ಬೆಂಗಳೂರು: ಸಿಲಿಂಡರ್ ಸ್ಫೋಟಗೊಂಡು ಭೀಕರ ಬೆಂಕಿ ಅನಾಹುತ; ಗೋದಾಮು ಮತ್ತು 8 ಮನೆಗಳು ಭಸ್ಮ

18/09/2023, 17:16

ಬೆಂಗಳೂರು(reporterkarnataka.com): ನಗರದ ಚಾಮರಾಜಪೇಟೆಯ ಅನಂತಪುರದ ಬಳಿ
ಸಿಲಿಂಡರ್ ಸ್ಫೋಟಗೊಂಡು ಗೋದಾಮು ಮತ್ತು 8 ಮನೆಗಳು ಭಸ್ಮಗೊಂಡಿರುವ ಘಟನೆ ನಡೆದಿದ್ದು, ಒಬ್ಬರು ಗಂಭೀರ ಗಾಯಗೊಂಡಿದ್ದಾರೆ.

ಬೆಂಗಳೂರಿನ ವಿನಾಯಕ ಸಿನೆಮಾ ಥಿಯೇಟರ್ ಬಳಿ ಈ ದುರ್ಘಟನೆ ನಡೆದಿದ್ದು,
ಸಿಲಿಂಡರ್‌ ಸ್ಪೋಟದ ಭೀಕರತೆಗೆ ಅಲಂಕಾರಿಕ ವಸ್ತುಗಳ ಗೋದಾಮು ಮತ್ತು 8 ತಗಡಿನ ಶೀಟ್ ಮನೆಗಳು ಭಸ್ಮವಾಗಿವೆ. ಒಬ್ಬರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಗ್ನಿಶಾಮಕ ದಳ ಬೆಂಕಿ ನದಿಸುವ ಕಾರ್ಯ ಮಾಡಿದ್ದಾರೆ. ಈ ಅವಘಡದಲ್ಲಿ ಗೋದಾಮು ಸೇರಿದಂತೆ ಪಕ್ಕದಲ್ಲಿರುವ 8 ಮನೆಗಳಿಗೂ ಬೆಂಕಿ ತಗುಲಿದ್ದು, ಈ ವೇಳೆ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ವಿನಾಯಕ ಸಿನಿಮಾ ಥಿಯೇಟರ್‌ ಎದುರುಗಡೆ ಇರುವ ಗೋದಾಮಿಗೆ ಬೆಂಕಿ ತಲುಗಿದ ಹಿನ್ನೆಲೆ ಸಿಲಿಂಡರ್‌ಗಳು ಬ್ಲಾಸ್ಟ್ ಆಗಿರಬಹುದು ಎಂದು ಶಂಕಿಸಲಾಗುತ್ತಿದೆ. ಅಲ್ಲದೆ ಮನೆಯ ಅಲಂಕಾರಿಕ ವಸ್ತುಗಳ ಗೋದಾಮಿಗೆ ಬೆಂಕಿ ತಗುಲಿದ್ದು, ಬೆಂಕಿ ತಗಲುತ್ತಿದ್ದಂತೆ ಅದರ ಪಕ್ಕದಲ್ಲಿರುವ ಸುಮಾರು 8 ಶೀಟ್ ಮನೆಗಳಿಗೂ ಬೆಂಕಿ ಆವರಿಸಿದೆ ಎನ್ನಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು