ಇತ್ತೀಚಿನ ಸುದ್ದಿ
ಬೆಂಗಳೂರು: ರಾಷ್ಟ್ರೀಯ ಪರ್ತಕರ್ತರ 9ನೇ ಸಮಾವೇಶ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ
23/02/2026, 20:05
ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ಮಸ್ಕಿ ರಾಯಚೂರು
info.reporterkarnataka@gmail.com
ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಬೆಂಗಳೂರಿನ ಸಾಧನ ವೃದ್ದಾಶ್ರಮ ಮತ್ತು ಅನಾಥಾಶ್ರಮದ ಆಶ್ರಯದಲ್ಲಿ
ರಾಷ್ಟ್ರೀಯ ಪರ್ತಕರ್ತರ 9ನೇ ಸಮಾವೇಶ ಹಾಗೂ ಸಾಮ್ರಾಟ್ ಆಶೋಕ್ ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನ ಪುನೀತ್ ರಾಜ್ ಕುಮಾರ್ ಕನ್ನಡ ಭವನದಲ್ಲಿ ನಡೆಯಿತು.
ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕ ರಂಗಕ್ಕೆ ದೊಡ್ಡ ಗೌರವಿದೆ ಅದನ್ನು ಗೌರವಿಸಬೇಕು.



ಪತ್ರಿಕ ರಂಗ ಸೇವೆ ಸಲ್ಲಿಸುವವರು ಕಪ್ಪು ಚುಕ್ಕಿ ತರದಂತೆ ಕಾರ್ಯನಿರ್ವಹಿಸಬೇಕು. ಪತ್ರಿಕಾ ವಿತರಕರನ್ನು ಗೌರವಿಸಬೇಕೆಂದು ಹಿರಿಯ ಪತ್ರಕರ್ಯ ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ನುಡಿದರು.
ಸಂಪಾದಕ ಡಾ. ಜಲಾನುದ್ದೀನ್ ಅಕ್ಬರ್ ಮಾತನಾಡಿ,ಪತ್ರಕರ್ತರಿಗೆ ಮೂಲಭೂತ ಸೌಕರ್ಯಗಳನ್ನು ಸರಕಾರ ನೀಡಬೇಕೆಂದು ಹೇಳಿದರು.
ಸಾಧನ ವೃದ್ದಾಶ್ರಮದ ಸಂಸ್ಥಾಪಕರು ಮಾತನಾಡಿ, ಸಮಾಜದಲ್ಲಿ ಪತ್ರಿಕಾ ರಂಗಕ್ಕೆ ದೊಡ್ಡ ಗೌರವ ಇದೆ ಎಂದು ಹೇಳಿದರು.
ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಸನ್ಮಾನ ಮಾಡಿ ಮಸ್ಕಿ ಸಾಮ್ರಾಟ್ ಅಶೋಕ್ ಪ್ರಶಸ್ತಿಯನ್ನು ನೀಡಲಾಯಿತು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ರಾಜ್ಯಾಧ್ಯಕ್ಷ
ಬಂಗ್ಲೆ ಮಲ್ಲಿಕಾರ್ಜುನ ಮಾತನಾಡಿ, ಯಾವಾಗಲೂ ನಿಮ್ಮ ಜೊತೆಗಿರುತ್ತೇನೆ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕರಡಕಲ್ ಕಾರುಣ್ಯಶ್ರಮದ ಚನ್ನಬಸಯ್ಯಸ್ವಾಮಿ ಕೃಷ್ಣಪ್ಪ, ವಿವಿಧ ಕ್ಷೇತ್ರದಿಂದ ಸಾಧನೆ ಮಾಡಿದ ಪತ್ರಕರ್ತರು ಉಪಸ್ಥಿತರಿದ್ದರು.












