ಇತ್ತೀಚಿನ ಸುದ್ದಿ
ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಭೂಮಿ ಕಂಪನ: ಭಯಭೀತರಾದ ಜನ
26/11/2021, 13:37
ಬೆಂಗಳೂರು(reporterkarnataka.com): ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಶುಕ್ರವಾರ ಭೂಮಿ ಕಂಪಿಸಿದ ಬಗ್ಗೆ ವರದಿಯಾಗಿದೆ.
ರಾಜಧಾನಿ ಬೆಂಗಳೂರಿನ ರಾಜರಾಜೇಶ್ವರಿ ನಗರ, ಕೆ. ಆರ್. ನಗರ, ಜ್ಞಾನಭಾರತಿ, ಕೆಂಗೇರಿ ಸೇರಿದಂತೆ ನಗರದ ಹಲವೆಡೆ ಭೂಮಿ ಕಂಪಿಸಿದೆ. ಭಾರಿ ಶಬ್ಧದೊಂದಿಗೆ ಎರಡೆರಡು ಬಾರಿ ಭೂಮಿ ಕಂಪಿಸಿದ ಬಗ್ಗೆ ವರದಿಯಾಗಿದೆ.
ಇದಲ್ಲದೆ ರಾಮನಗರ, ಮಂಡ್ಯ ಹಾಗೂ ಮೈಸೂರಿನ ಗಡಿಭಾಗದಲ್ಲಿಯೂ ಭೂಮಿ ಕಂಪಿಸಿದೆ. ಬೆಳಗ್ಗೆ 11.50 ಮತ್ತು 12. 10ರ ಸಮಯಕ್ಕೆ ಭೂಮಿ ಕಂಪಿಸಿದೆ. ಜನರು ಭಯಭೀತರಾಗಿ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.
ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಭಾರಿ ಮಳೆಯಾಗುತ್ತಿದೆ. ಭೂಮಿ ಕಂಪನದ ಕಾರಣ ತಿಳಿದು ಬಂದಿಲ್ಲ.