10:31 AM Saturday11 - April 2026
ಬ್ರೇಕಿಂಗ್ ನ್ಯೂಸ್
3 ದಿನಗಳಿಂದ ನಾಪತ್ತೆಯಾಗಿದ್ದ ಬಾಲಕಿಯ ಮೃತದೇಹ ಪತ್ತೆ: ಚಂದ್ರದ್ರೋಣ ಪರ್ವತದ 2 ಸಾವಿರ… ಪ್ರಧಾನಿ‌ ಮೋದಿಗೆ ಸಂಬಂಧಿಸಿದ ಗೌಪ್ಯ ಮಾಹಿತಿ ರವಾನೆ: ವಿದೇಶಿ ಏಜೆನ್ಸಿಗಳ ಜತೆ ಸಂಪರ್ಕ;… ಉತ್ತರ ಪ್ರದೇಶದಲ್ಲಿ ಭೀಕರ ದೋಣಿ ದುರಂತ: ಪ್ರವಾಸಿಗರಿದ್ದ ಸ್ಟೀಮರ್ ಪಲ್ಟಿಯಾಗಿ 10 ಮಂದಿ… ಚಾಮರಾಜನಗರ; ಮಹಿಳೆಯರ ಒಳ ಉಡುಪು ಕದಿಯುತ್ತಿದ್ದ ‘ಸೈಕೋ’ ಕಳ್ಳನ ಬಂಧನ ಫೇಲಾದವರಿಗೆ ಇನ್ನೊಂದು ಚಾನ್ಸ್: ದ್ವಿತೀಯ ಪಿಯುಸಿ ಪರೀಕ್ಷೆ-2 ದಿನಾಂಕ ಪ್ರಕಟ Suratkal | ಅಮಾನತುಗೊಂಡಿದ್ದ ಎನ್‌ಐಟಿಕೆ ಕುಲಸಚಿವ ರವೀಂದ್ರನಾಥ್ ಸೇವೆಯಿಂದ ವಜಾ ಪತಿಯ ಶವದ ಜತೆ 10 ದಿನ ಕಳೆದ ಪತ್ನಿ: ಮಲೆನಾಡು ಚಿಕ್ಕಮಗಳೂರಿನಲ್ಲಿ ವಿಚಿತ್ರ… ಕಾಂಗ್ರೆಸ್‌ನಿಂದ ಕೋಟ್ಯಂತರ ರೂಪಾಯಿ ಹಣ ಹಂಚಿಕೆ: ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಆರೋಪ ಅಮ್ಮನ ಸಾವಿನ ದುಃಖದಲ್ಲೂ ಛಲ ಬಿಡದೆ ಪರೀಕ್ಷೆ ಬರೆದ ದಿಶಾ ಸ್ಟೇಟ್ ಗೆ… ದಾವಣಗೆರೆ ದಕ್ಷಿಣ: ಮತಗಟ್ಟೆ ಬಳಿ ಟೇಬಲ್ ವಿಚಾರವಾಗಿ ಕಾಂಗ್ರೆಸ್-ಎಸ್ ಡಿಪಿಐ ಕಾರ್ಯಕರ್ತರ ಜಟಾಪಟಿ

ಇತ್ತೀಚಿನ ಸುದ್ದಿ

ಬೆಳ್ವೆ ಚರ್ಚ್ ಫಾದರ್ ವಿರುದ್ಧ ಅನುಯಾಯಿಗಳಿಂದ ಪ್ರತಿಭಟನೆ: ಕ್ರೈಸ್ತ ಧರ್ಮದಿಂದ ಮತಾಂತರ ಎಚ್ಚರಿಕೆ

25/10/2021, 08:34

ಕುಂದಾಪುರ(reporterkarnataka.com): ಬೆಳ್ವೆಯ ಚರ್ಚ್ ನ ಫಾದರ್ ವಿರುದ್ದ ಚರ್ಚ್ ಅನುಯಾಯಿಗಳು ಅಸಮಾಧಾನ ಹೊರ ಹಾಕಿ ಭಾನುವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕರುಣಾಕರ್ ಶೆಟ್ಟಿ, ಇದು ಕೇವಲ ಒಂದು ಧರ್ಮದ ವಿಚಾರವಲ್ಲ. ಸಾಮರಸ್ಯದಿಂದ ಇರುವ ಚರ್ಚಿನ ಅನುಯಾಯಿಗಳಿಗೆ ತೊಂದರೆ ಆದರೆ ಬೆಳ್ವೆ ಗ್ರಾಮದ ಪ್ರತಿಯೊಬ್ಬರು ಇವರ ಪರ ನಿಲ್ಲುತ್ತಾರೆ. ಇವರಿಗೆ ತೊಂದರೆ ನೀಡುತ್ತಿರುವ ಫಾದರ್ ಅಲೆಕ್ಸಾಂಡರ್ ಲೂವೀಸ್ ಈ ಹಿಂದೆ ತಲ್ಲೂರಿನಲ್ಲಿ ಗಲಾಟೆ ಮಾಡಿಕೊಂಡು ಬಂದು ಇಲ್ಲಿಗೆ ವರ್ಗಾವಣೆಗೊಂಡವರು. ಇಲ್ಲಿಯೂ ಅದೇ ಸಮಸ್ಯೆಯನ್ನು ಹುಟ್ಟುಹಾಕುತ್ತಿದ್ದಾರೆ ಎಂದರು.

ಚರ್ಚ್ ನ ಅನುಯಾಯಿ ಪ್ರವೀಣಾ ಮಾತನಾಡಿ, ಕಳೆದ ಮೂರು ತಿಂಗಳಿನಿಂದ ಇಲ್ಲಿ ಅಶಾಂತಿ ನೆಲೆಸಿದೆ. ಫಾದರ್ ಅಲೆಗ್ಸಾಂಡರ್ ಲೂವಿಸ್ ನಮಗೆ ಚರ್ಚ್ ನ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಿಡುತ್ತಿಲ್ಲ. ನಾವು ಕಟ್ಟಿದ ಚರ್ಚ್ ನ ಕಟ್ಟಡಕ್ಕೆ ಹಾನಿ ಮಾಡುತ್ತಿದ್ದಾರೆ. ಉಡುಪಿ ಧರ್ಮಾಧ್ಯಕ್ಷರಿಗೆ ಮನವಿ ಮಾಡಿದರೇ ನಮಗೆ ನ್ಯಾಯ ದೊರಕಿಸಿ ಕೊಡಲಿಲ್ಲ. ಒಂದು ವೇಳೆ ವಾರದೊಳಗೆ ಅಲೆಗ್ಸಾಂಡರ್ ಅನ್ನು ವರ್ಗಾವಣೆ ಮಾಡದೇ ಇದ್ದರೇ ನಾವು ಕ್ರಿಶ್ಚಿಯನ್ ಧರ್ಮವನ್ನು ಬಿಟ್ಟು ಹೋಗುತ್ತೇವೆ ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು