ಇತ್ತೀಚಿನ ಸುದ್ದಿ
ಬೆಳ್ತಂಗಡಿ: ರೋವರ್ಸ್ ಹಾಗೂ ರೇಂಜರ್ಸ್ ಘಟಕದಿಂದ ‘ಪರಿಸರದ ಮಡಿಲಿನಲ್ಲಿ ನಡಿಗೆ ಹಾಗೂ ಸ್ವಚ್ಛತೆ’
27/02/2022, 09:44
ಮಂಗಳೂರು(reporterkarnataka.com): ಕೆನರಾ ಕಾಲೇಜಿನ ರೋವರ್ಸ್ ಹಾಗೂ ರೇಂಜರ್ಸ್ ಘಟಕದ ವತಿಯಿಂದ ಸ್ಕೌಟ್ ಸಂಸ್ಥಾಪಕ ಬೇಡನ್ ಪೊವೆಲ್ ರವರ ಜನ್ಮದಿನದ ಅಂಗವಾಗಿ ” ಗಡಾಯಿಕಲ್ಲು” ಬೆಳ್ತಂಗಡಿಯಲ್ಲಿ “ಪರಿಸರದ ಮಡಿಲಿನಲ್ಲಿ ನಡಿಗೆ ಹಾಗೂ ಸ್ವಚ್ಛತೆ” ಕಾರ್ಯಕ್ರಮನಡೆಯಿತು.
ಉತ್ಸಾಹಭರಿತ 26 ವಿಧ್ಯಾರ್ಥಿಗಳು ಚಾರಣದಲ್ಲಿ ಪಾಲ್ಗೊಂಡಿದ್ದರು.
ರೋವರ್ಸ್ ಸ್ಕೌಟ್ ನಾಯಕ ಕಾರ್ತಿಕ್ ಕಾಮತ್ ಹಾಗೂ ರೇಂಜರ್ಸ್ ನಾಯಕಿ ಧನಶ್ರೀ ಕುಲಕರ್ಣಿ ಉಪಸ್ಥಿತರಿದ್ದು ಏಕಶಿಲಾ ಬೆಟ್ಟದ ಚಾರಣದಲ್ಲಿ ಭಾಗವಹಿಸಿದರು. ವಿಧ್ಯಾರ್ಥಿಗಳು ಗಡಾಯಿಕಲ್ಲಿನ ಪರಿಸರದ ಸ್ವಚ್ಛತೆಯಲ್ಲಿ ಅಗತ್ಯಕ್ರಮಗಳನ್ನು ಕೈಗೊಂಡರು.