ಇತ್ತೀಚಿನ ಸುದ್ದಿ
ಬೆಳಗಾವಿಯ ಕಾಗವಾಡ: ಟಿಪ್ಪರ್- ಬೈಕ್ ಡಿಕ್ಕಿ; ಮಗ ಸಾವು; ತಾಯಿಗೆ ಗಂಭೀರ ಗಾಯ
16/01/2023, 10:54

ರಾಹುಲ್ ಅಥಣಿ ಬೆಳಗಾವಿ
info.reporter Karnataka@gmail.com
ಕಾಗವಾಡ : ಬೈಕ್, ಟಿಪ್ಪರಿಗೆ ಡಿಕ್ಕಿ ಹೊಡೆದ ಪರಿಣಾಮ ಮಗ ಸ್ಥಳದಲ್ಲೇ ಮೃತಪಟ್ಟರೆ, ತಾಯಿ ಗಂಭೀರ ಗಾಯಗೊಂಡ ಘಟನೆ ಕಾಗವಾಡದ ಜವಾಹರ ನಗರದಲ್ಲಿ ನಡೆದಿದೆ.
ಇಚಲಕರಂಜಿಯ ಅರಿಫ್ ಮೋಮಿನ(24), ಜವಾಹರ ನಗರ ಸ್ಥಳದಲ್ಲಿ ದುರ್ಮರಣ ಹೊಂದಿದ್ದು, ತಾಯಿ ನಜಮಾಮೋಮಿನ(60) ಗಂಭೀರ ಗಾಯಗೊಂಡಿದ್ದಾರೆ.
ಅವರನ್ನು ಮಿರಜದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶನಿವಾರ ಮಧ್ಯಾಹ್ನ 1 ಗಂಟೆಗೆ ಮಹಾರಾಷ್ಟ್ರದ ಇಚಲಕರಂಜಿಯಿಂದ ತನ್ನ ಮಾವನ ಮನೆಗೆ ಬೈಕ್ ಮೇಲೆ ತಾಯಿಯನ್ನು ಕರೆದುಕೊಂಡು ಅಥಣಿಗೆ ಹೋಗುತ್ತಿರುವ ಯುವಕನ ಬೈಕ್ ಟಿಪ್ಸರ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಕಾಗವಾಡ, ಪಿಎಸ್ ಐ ಹಣುಮಂತ ನರಳೆ ಸ್ಥಳಕ್ಕಾಗಮಿಸಿ ತನಿಖೆ ಕೈಗೊಂಡಿದ್ದಾರೆ.