ಇತ್ತೀಚಿನ ಸುದ್ದಿ
ಬೆಳಗಾವಿ: ಸಹೋದರನ ಕೊಲೆ ಮಾಡಿ ಠಾಣೆಗೆ ಶರಣಾದ ಆರೋಪಿ
05/12/2022, 21:04

ರಾಹುಲ್ ಅಥಣಿ ಬೆಳಗಾವಿ
info.reporterkarnataka.com
ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಸ್ವಂತ ಸಹೋದರನ ಕೊಲೆ ಮಾಡಿ ವ್ಯಕ್ತಿ ಯೊಬ್ಬ ಪೊಲೀಸರಿಗೆ ಶರಣಾದ ಘಟನೆ ನಡೆದಿದೆ.
ಅಕ್ಬರ್ ಅಬ್ದುಲ ಶೇಖ್ (42) ಎಂಬಾತನ ಕೊಲೆ ಮಾಡಲಾಗಿದೆ. ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದ ಹತ್ತಿರ ಸಹೋದರನ ಕೊಲೆ ಮಾಡಲಾಗಿದೆ.
ಚಿಕ್ಕೋಡಿ ಪಟ್ಟಣದ ನಿವಾಸಿಯಾಗಿದ್ದ ಅಕ್ಬರ ಅಬ್ದುಲ್ ಶೇಖ್ ಎಂಬಾತನ ಕೊಲೆ ಮಾಡಲಾಗಿದೆ.ಅಕ್ಬರ ಅಬ್ದುಲ್ ಶೇಖ್ ಸಹೋದರ ಲಕೊಲೆ ಮಾಡಿದ ಆರೋಪಿಯಾಗಿದ್ದಾನೆ.
ತನ್ನ ಸಹೋದರನ್ನ ನಾನೇ ಕೊಲೆ ಮಾಡಿರುವುದಾಗಿ ಆರೋಪಿ ಪೋಲಿಸ್ ಠಾಣೆಗೆ ಶರಣಾಗಿದ್ದಾನೆ.ಚಿಕ್ಕೋಡಿ ಪೋಲಿಸ್ ಠಾಣೆಗೆ ಶರಣಾದ ಅಬ್ಜದ ಅಬ್ದುಲ ಶೇಖ್ ಶರಣಾಗಿದ್ದಾನೆ.
ಈ ಕುರಿತು ಚಿಕ್ಕೋಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.