3:00 PM Saturday23 - November 2024
ಬ್ರೇಕಿಂಗ್ ನ್ಯೂಸ್
ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​ ಚನ್ನಪಟ್ಟಣ ಫಲಿತಾಂಶ: ಕುಮಾರಸ್ವಾಮಿಗೆ ತೀವ್ರ ಮುಖಭಂಗ; ಸೇಡು ತೀರಿಸಿದ ಡಿಸಿಎಂ ಶಿವಕುಮಾರ್ ಮಹಾರಾಷ್ಟ್ರ: ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ? ಆರೆಸ್ಸೆಸ್ ಮುಖ್ಯಸ್ಥ ಡಾ. ಭಾಗವತ್ ಡಿ. 7ರಂದು ಕಲ್ಲಡ್ಕಕ್ಕೆ: ಶ್ರೀರಾಮ ವಿದ್ಯಾಕೇಂದ್ರ ಕ್ರೀಡೋತ್ಸವದಲ್ಲಿ… ಬೆಂಗಳೂರು ಮತ್ತು ಚೆನ್ನೈಗೆ ಆಸ್ಟ್ರೇಲಿಯನ್ ಡಿಜಿಟೆಕ್ ಟ್ರೇಡ್ ಮಿಷನ್ ಭೇಟಿ ವೈಜ್ಞಾನಿಕತೆ, ವೈಚಾರಿಕತೆ ಇಲ್ಲದ ಶಿಕ್ಷಣದಿಂದ ಮಾನವೀಯ ಮೌಲ್ಯ ಬೆಳೆಸಿಕೊಳ್ಳಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ ನೀರು ಹರಿಸುವ ನಿರ್ಣಯದಿಂದ ನಮ್ಮ ಭಾಗದ ರೈತರಿಗೆ ಅನ್ಯಾಯ: ಮಾಜಿ ಸಚಿವ ನರಸಿಂಹ… ಫೆಸ್ಟಿವಲ್ ಆಫ್ ಆಸ್ಟ್ರೇಲಿಯಾ: ಶಿಕ್ಷಣದ ಶ್ರೇಷ್ಠತೆ ಮತ್ತು ಪ್ರಿಮಿಯಂ ಎಫ್ & ಬಿ… ತೇಜಸ್ವಿ ಅವರು ನಡೆನುಡಿಯಲ್ಲಿ ಬಹುತೇಕ ಒಂದೇ ಎಂಬಂತೆ ಬದುಕಿದ ಅಪರೂಪದ ಲೇಖಕರು; ಡಾ.ಸಂಪತ್… ಮೂವರು ಯುವತಿಯರ ಸಾವಿಗೆ ಕಾರಣವಾದ ಸೋಮೇಶ್ವರ ಬೀಚ್ ರೆಸಾಟ್೯ಗೆ ಬೀಗಮುದ್ರೆ

ಇತ್ತೀಚಿನ ಸುದ್ದಿ

ಬೆಳಗಾವಿ: ಅಥಣಿ ಹೊರವಲಯದ ಮನೆಯಲ್ಲಿ ದಂಪತಿ ಶವ ಪತ್ತೆ: ಕೊಲೆ ಶಂಕೆ; ಚುರುಕುಗೊಂಡ ಪೊಲೀಸ್ ತನಿಖೆ

08/11/2024, 10:22

ಶಿವರಾಯ ಲಕ್ಷ್ಮಣ ಕರ್ಕರಮುಂಡಿ ಬೆಳಗಾವಿ

info.reporterkarnataka@gmail.com

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚವ್ಹಾಣ ತೋಟದಲ್ಲಿ ದಂಪತಿಯ ಶವ ಪತ್ತೆಯಾಗಿದ್ದು, ಕೊಲೆಗೀಡಾಗಿರಬೇಕೆಂದು ಶಂಕಿಸಲಾಗಿದೆ.
ಚವ್ಹಾಣ ತೋಟದಲ್ಲಿನ ನಾನಾಸಾಹೇಬ ಚವ್ಹಾಣ (58) ಮತ್ತು ಜಯಶ್ರೀ ಚವ್ಹಾಣ (51) ದಂಪತಿ ನಿಗೂಢವಾಗಿ ಸಾವಿಗೀಡಾಗಿದವರು. ಈ ಮುನ್ನ ಇದನ್ನು‌ ಆತ್ಮಹತ್ಯೆ ಎಂದು ಶಂಕಿಸಲಾಗಿತ್ತು.
ಸುಮಾರು 6 -7 ದಿನಗಳ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ಸಾವಿಗೀಡಾದ ದಂಪತಿಯ ಪುತ್ರ ದಿಲೀಪ್ ದರೋಡೆ ಪ್ರಕರಣವೊಂದರಲ್ಲಿ ಜಮಖಂಡಿಯಲ್ಲಿ ಬಂಧಿಸಲ್ಪಟ್ಟಿದ್ದ. ಆತನನ್ನು ಬಿಡಿಸಲು ದಂಪತಿ 7-8 ದಿನಗಳ ಹಿಂದೆ ಜಮಖಂಡಿಗೆ ತೆರಳಿ ವಕೀಲರನ್ನು ಭೇಟಿಯಾಗಿ ಬಂದಿದ್ದಾರೆ. ಮತ್ತೆ ಎಲ್ಲೂ ಹೊರಗೆ ಕಾಣಿಸಲಿಲ್ಲ. ಆದರೆ ಬುಧವಾರ ಮನೆಯಿಂದ ವಾಸನೆ ಬರುತ್ತಿರುವುದಾಗಿ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಈ ಮೊದಲು ಇದು ಆತ್ಮಹತ್ಯೆ ಇರಬಹುದೆಂದು ಶಂಕಿಸಲಾಗಿತ್ತು.‌ ಆತ್ಮಹತ್ಯೆ ಇರಬಹುದು ಎನ್ನುವುದಕ್ಕೆ 2 ಕಾರಣಗಳಿವೆ. ಮೊದಲನೆಯದಾಗಿ, ಮಗ ದಿಲೀಪನನ್ನು ಪೊಲೀಸರು ಬಂಧಿಸಿರುವುದು, ಎರಡನೆಯದು ದಿಲೀಪನಿಗೆ ಮದುವೆ ಗೊತ್ತು ಮಾಡಿದ ಹಿನ್ನೆಲೆಯಲ್ಲಿ ಹೆಣ್ಣಿನ ಕಡೆಯವರ ಮನೆ ನೋಡಲು ಬರುವವರಿದ್ದರು. ಅವರಿಗೆ ಮುಖ ತೋರಿಸಲಾಗದೆ ಆತ್ಮಹತ್ಯೆ ಮಾಡಕೊಂಡಿರಬಹುದು ಎನ್ನಲಾಗಿತ್ತು. ಆದರೆ, ಮನೆಯ ಒಳಗೆ ಪ್ರವೇಶಿಸಿದ ಪೊಲೀಸರಿಗೆ ಸಂಶಯ ಹುಟ್ಟಿದೆ. ಮನೆಯೊಳಗಿನ‌ ವಾತಾವರಣವನ್ನು ನೋಡಿ ಇದು ಕೊಲೆಯಾಗಿರಬಹುದು ಎಂದು ಶಂಕಿಸಿ ಬೆರಳಚ್ಚು ತಜ್ಞರನ್ನು ಕರೆಸಿ ಪರಿಶೀಲಿಸುತ್ತಾರೆ. ಅವರು ಕೂಡ ಇದು ಕೊಲೆ ಎನ್ನುವುದಕ್ಕೆ ಸಾಕ್ಷಿಗಳನ್ನು ಪತ್ತೆ ಮಾಡುತ್ತಾರೆ. ನಂತರ ಪೊಸ್ಟ್ ಮಾರ್ಟಮ್ ನಡೆಸಿದಾಗ ಅದರ ವರದಿಯಲ್ಲಿ ಕೂಡ ಕೊಲೆಯ ಸಾಧ್ಯತೆ ಕಂಡು ಬಂದಿದೆ.ವಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾ ಶಂಕರ ಗುಳೇದ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೃತಿ ಬುಧವಾರ ಮತ್ತು ಗುರುವಾರ ಅಥಣಿಗೆ ಭೇಟಿ ನೀಡಿ ತೀವ್ರ ತನಿಖೆ ನಡೆಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು