ಇತ್ತೀಚಿನ ಸುದ್ದಿ
ಬೆಳಗಾವಿಯ ಅಥಣಿ: ಚಾಲಾಕಿ ಖದೀಮನನ್ನು ಬಲೆಗೆ ಕೆಡುವಿದ ಪೊಲೀಸರು; 6 ಟಯರ್ ವಶಕ್ಕೆ
23/01/2023, 22:00

ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ನಿಲ್ಲಿಸಿದ ಲಾರಿಗಳ ಟೈಯರ್ ಬಿಚ್ಚುತ್ತಿದ್ದ ಖದೀಮ
ಕುಮಾರ್ ದಶರಥ್ ಥೈಲರ್ ಎಂಬಾತನನ್ನು ಅಥಣಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯು ಅಥಣಿ ತಾಲೂಕಿನ ಅನಂತಪುರ ಗ್ರಾಮದವ ಎಂದು ತಿಳಿದು ಬಂದಿದೆ. ಈತ ನಿಲ್ಲಿಸಿದ್ದ ಲಾರಿಯಿಂದ ಡಿಸ್ಕ್ ಸಮೇತ 6 ಟೈಯರ್ ಕಳ್ಳತನ ಮಾಡಿದ್ದ. ಲಾರಿ ಗುತ್ತಿಗೆದಾರ ರಾಜು ಆಳಬಾಳ ಸೇರಿದ್ದಾಗಿದೆ. ಕಳೆದು ತಿಂಗಳು ಬಡಾವಣೆಯಲ್ಲಿ ನಿಲ್ಲಿಸಿದ ಲಾರಿಯಿಂದ ಟೈಯರ್ ಕಳ್ಳತನ ಮಾಡಲಾಗಿತ್ತು.
ಪೊಲೀಸರು ಅನುಮಾನದ ಮೇಲೆ ಅನಂಪರ ಕ್ರಾಸ್ ಬಳಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣ ನಡೆದಿದೆ.