6:36 PM Saturday16 - August 2025
ಬ್ರೇಕಿಂಗ್ ನ್ಯೂಸ್
Bangalore | ಬಿಜೆಪಿಯವರಿಗೆ ರಾಜಕಾರಣಕ್ಕಾಗಿ ಧರ್ಮಸ್ಥಳ ಬೇಕಾಗಿದೆ: ಡಿಸಿಎಂ ಡಿ.ಕೆ. ಶಿವಕುಮಾರ್ ಕಿಡಿ ವಿರಾಜಪೇಟೆ: ಅರಣ್ಯ ಇಲಾಖೆಯ ಕಾರ್ಯಾಚರಣೆ ಯಶಸ್ವಿ; ನಾಡಿನಲ್ಲಿ ಬೀಡು ಬಿಟ್ಟಿದ್ದ 10ಕ್ಕೂ ಅಧಿಕ… ‘ಧರ್ಮಸ್ಥಳ ವಿರುದ್ಧ ಷಡ್ಯಂತರʼ ರಾಜ್ಯ ಸರ್ಕಾರದ್ದೇ?: ಡಿ.ಕೆ. ಶಿವಕುಮಾರ್‌ ಹೇಳಿಕೆಗೆ ಕೇಂದ್ರ ಸಚಿವ… ಸಾಲದ ಬಾಧೆ: ಆಟೋ ಚಾಲಕ ಕಾವೇರಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನ; ಅರಣ್ಯ… ಬಸವಣ್ಣನವರ ಕಲ್ಯಾಣ ರಾಜ್ಯದ ಕನಸಿನ ಈಡೇರಿಕೆಯೇ ನಮ್ಮ ಗುರಿ: ಸಿಎಂ ಸಿದ್ದರಾಮಯ್ಯ ಕೇಂದ್ರದಿಂದ ಸ್ವಾತಂತ್ರ್ಯೋತ್ಸವದ ವಿಶಿಷ್ಠ ಕೊಡುಗೆ; ಉತ್ತರ ಕರ್ನಾಟಕಕ್ಕೆ ವಿಶೇಷ ಆರ್ಥಿಕ ವಲಯ ಘೋಷಣೆ ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ; ಎಸ್ಐಟಿ ತನಿಖೆ ನಡೆಯುತ್ತಿರುವಾಗ ಸದನದಲ್ಲಿ ಪ್ರಸ್ತಾಪ ಸರಿಯಲ್ಲ:… ಜಾಮೀನು ರದ್ದು ಮಾಡಿದ ಸುಪ್ರೀಂಕೋರ್ಟ್: ನಟ ದರ್ಶನ್​​, ಪವಿತ್ರಾ ಗೌಡ ಸಹಿತ 4… ಕೇಂದ್ರದಿಂದ ರಸಗೊಬ್ಬರ ಪೂರೈಕೆ ಕೊರತೆ ರಾಜ್ಯದ ಸಮಸ್ಯೆಗೆ ಕಾರಣ: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ Kodagu | ಮಡಿಕೇರಿ: ಅಸ್ಸಾಂ ಕಾರ್ಮಿಕರಿಂದ ಆಧಾರ್ ಕಾರ್ಡಿನ ದುರ್ಬಳಕೆ ಆರೋಪ

ಇತ್ತೀಚಿನ ಸುದ್ದಿ

ಬೆಳಗಾವಿಯಲ್ಲಿ ವಿಶೇಷಚೇತನರ ಸೌರ ಸ್ವಉದ್ಯೋಗ ಸಮ್ಮೇಳನ: ಸೌರ ಉದ್ಯಮಿಗಳು ಭಾಗಿ

21/11/2023, 19:06

ಶಿವರಾಯ ಲಕ್ಷ್ಮಣ ಕರ್ಕರಮುಂಡಿ ಬೆಳಗಾವಿ

info.reporterkarnatakarma@gmail.com

ಸೆಲ್ಕೋ ಫೌಂಡೇಶನ್ ಇಂಡಿಯಾ ಸಂಸ್ಥೆ, ಎಪಿಡಿ ಸಂಸ್ಥೆ ಬೆಳಗಾವಿ, ಬರ್ಡ್ ಸಂಸ್ಥೆ,ಬೆಳಗಾವಿಯ ವಿಕಲಚೇತನರ ಸಬಲೀಕರಣ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಚೇತನರ ಸೌರ ಸ್ವ ಉದ್ಯೋಗ ಸಮ್ಮೇಳನವನ್ನು ನಗರದ ಕುಮಾರಗಂಧರ್ವ ರಂಗ ಮಂದಿರದಲ್ಲಿ ಜಿಲ್ಲಾ ಪಂಚಾಯತ್ ಸಿಇಒ
ಹರ್ಷಲ್ ಬೋಯರ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಸಿಇಒ ಹರ್ಷಲ್ ಬೋಯರ್, ಸೌರಶಕ್ತಿ ಬಳಸಿಕೊಂಡು ಸ್ವಯಂ ಉದ್ಯೋಗದ ಅವಕಾಶಗಳನ್ನು ಹೆಚ್ಚಿಸುವ ಮೂಲಕ ಸಮಾಜದ ಅಭಿವೃದ್ಧಿಗೆ ಸೆಲ್ಕೋ ಫೌಂಡೇಶನ್ ಸಂಸ್ಥೆ ಉತ್ತಮ ಕೊಡುಗೆ ನೀಡುತ್ತಿದೆ ಎಂದು ಹೇಳಿದರು. ಮಹಾಪ್ರಬಂಧಕರಾದ ಪ್ರಸನ್ನ ಹೆಗಡೆ ಅವರು ಮಾತನಾಡಿ, ಸೌರಶಕ್ತಿಯು ಕೇವಲ ಬೆಳಕು ನೀಡುವುದಲ್ಲದೆ ಜೀವನ ಕಟ್ಟಿಕೊಡುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. ಗ್ರಾಮೀಣ ಭಾಗದ ಕಟ್ಟಕಡೆ ವ್ಯಕ್ತಿಗೂ ಸೌರಶಕ್ತಿಯನ್ನು ತಲುಪಿಸುತ್ತಿದ್ದೇವೆ ಎಂದರು.
ದಿ ಅಸೋಶಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿಯ(ಎಪಿಡಿ) ವಿಭಾಗೀಯ ನಿರ್ದೇಶಕರಾದ ರಮೇಶ್ ಗೊಂಗಡಿ ಮಾತನಾಡಿ, ವಿಶೇಷಚೇತನರನ್ನು ಸುಶಿಕ್ಷಿತರನ್ನಾಗಿಸುವುದರ ಜೊತೆಗೆ ಸೆಲ್ಕೋ ಸಹಯೋಗದೊಂದಿಗೆ ಅವರಿಗೆ ಉದ್ಯೋಗ ಕಲ್ಪಿಸುವ ಕೆಲಸ ಮಾಡುತ್ತಿದೆ ಎಂದರು.
ಬಾಗಲಕೋಟೆಯ ಬರ್ಡ್ಸ್ ಸಂಸ್ಥೆಯ ಮಹಾಂತೇಶ್ ಅಗಸಿ ಮುಂದಿನ ಅವರು ಮಾತನಾಡಿ, ಕಳೆದ 8 ವರ್ಷಗಳಿಂದ ಸೆಲ್ಕೋ ಸಂಸ್ಥೆಯ ಜೊತೆ ಸೇರಿ ಅನೇಕ ವಿಶೇಷಚೇತನರಿಗೆ ಉದ್ಯೋಗ ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.
ಮಾಜಿ ಶಾಸಕರು ಹಾಗೂ ನಾಗನೂರ ಬರ್ಡ್ಸ್ ಸಂಸ್ಥೆ ಅಧ್ಯಕ್ಷ ಆರ್. ಎಮ್. ಪಾಟೀಲ ಅವರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಎರಡು ವಿಶೇಷ ಗುಂಪು ಚರ್ಚೆಗಳನ್ನು ಸೆಲ್ಕೋ ಫೌಂಡೇಷನ್ ನ ಹಿರಿಯ ನಿರ್ವಾಹಕರಾದ ಸುರಭಿ ರಾಜಗೋಪಾಲ್ ಮತ್ತು ಸೆಲ್ಕೋ ಫೌಂಡೇಷನ್ ನ ಪ್ರಾಜೆಕ್ಟ್ ಮ್ಯಾನೇಜರ್ ನಾಗೇಶ್ ರಾವ್ ನಡೆಸಿಕೊಟ್ಟರು.
ಇದೇ ಸಂದರ್ಭದಲ್ಲಿ ಕೆಲವು ಸೌರ ಉದ್ಯಮಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ಸೆಲ್ಕೋದ ಬೆಳಗಾವಿ ಏರಿಯಾ ಮ್ಯಾನೇಜರ್ ವಿನಾಯಕ ಹೆಗಡೆ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು