ಇತ್ತೀಚಿನ ಸುದ್ದಿ
ಬೆಳಗಾವಿ: ಕೃಷ್ಣಾನದಿಯಲ್ಲಿ ಯುವಕ ನೀರು ಪಾಲು; ಸ್ನಾನ ಮುಗಿಸಿ ನೀರು ಕೊಂಡೋಗುತ್ತಿದ್ದ ವೇಳೆ ದುರ್ಘಟನೆ
26/08/2022, 15:02
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಶ್ರಾವಣ ಮಾಸದ ಪೂಜೆಯ ನಿಮಿತ್ಯ ಕೃಷ್ಣಾ ನದಿಯಲ್ಲಿ ಸ್ನಾನ ಮಾಡಿ ದೇವರಿಗೆ ನೀರು ಒಯ್ಯಲು ಆಗಮಿಸಿದ ವೇಳೆ ನದಿಯಲ್ಲಿ ಯುವಕನೋರ್ವ ಆಕಸ್ಮಿಕ ಕಾಲು ಬಿದ್ದು ನೀರು ಪಾಲಾದ ದುರ್ಘಟನೆ ಜರುಗಿದೆ.







ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಕಾಗಜಿ ಗಲ್ಲಿಯ ನಿವಾಸಿ ಸಾಗರ ರಾಜು ಹೊನಕಟ್ಟಿ (23) ಎಂಬ ಯುವಕ ದೇವರ ಪೂಜೆಗೆ ಕೃಷ್ಣಾನದಿಯಿಂದ ಸ್ನಾನ ಮಾಡಿ ನೀರು ತರಲು ಆಗಮಿಸಿದ ವೇಳೆ ದುರ್ಘಟನೆ ಸಂಭವಿಸಿದೆ.
ಅಥಣಿ ತಾಲೂಕಿನ ಹಲ್ಯಾಳ ದರೂರ ಬ್ರಿಡ್ಜನಲ್ಲಿ ಈ ದುರ್ಘಟನೆ ಜರುಗಿದ್ದು, ಈಜು ಬರುತ್ತಿದ್ದ ವ್ಯಕ್ತಿ ಅಚಾನಕ್ ಆಗಿ ನೀರನಲ್ಲಿ ಹರಿದು ಹೋಗಿದ್ದಾನೆ ಎಂದು ತಿಳಿದು ಬಂದಿದೆ.














