2:39 PM Tuesday11 - November 2025
ಬ್ರೇಕಿಂಗ್ ನ್ಯೂಸ್
ತಾಲ್ಲೂಕು ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಇರಬೇಕು; ತಪ್ಪಿದವರ ವಿರುದ್ಧ ವರದಿ ನೀಡಲು ಡಿಸಿಗೆ… Mysore | ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೇಟೆ: ಕೊಡಗು ಜಿಲ್ಲೆಯ ಇಬ್ಬರ… ಕೇಂದ್ರ ಸರ್ಕಾರದ ಸಾಲ ಕೊಡಿಸುವುದಾಗಿ ಮಹಿಳೆಯರಿಗೆ ಲಕ್ಷಕ್ಕೂ ಅಧಿಕ ವಂಚನೆ: ಮಡಿಕೇರಿ ನಿವಾಸಿ… Sports | ಖೇಲೋ ಇಂಡಿಯಾ ಮಹಿಳಾ ಹಾಕಿ ಟೂರ್ನಿ: ಕುಶಾಲನಗರದ ದಿಶಾ ನಿಡ್ಯಮಲೆ… ಸದ್ಯದಲ್ಲಿ ಸರ್ಕಾರಿ ಶಾಲೆಗಳಿಗೆ ಶಿಕ್ಷಕರ ನೇಮಕಾತಿ: ಸಚಿವ ಮಧು ಬಂಗಾರಪ್ಪ ಕಬ್ಬು ಬೆಳೆಗಾರರ ಕಿವಿಗೆ ಹೂವು ಇಟ್ಟ ರಾಜ್ಯ ಕಾಂಗ್ರೆಸ್ ಸರ್ಕಾರ: ಕೇಂದ್ರ ಸಚಿವ… ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಧಾನಿಗೆ ಸಿಎಂ ಪತ್ರ: ಕೇಂದ್ರ ಸಚಿವ ಕುಮಾರಸ್ವಾಮಿ ಆರೋಪ ಯುವಕನ ಅನುಮಾನಾಸ್ಪದ ಸಾವು : ರಾಷ್ಟ್ರೀಯ ಹೆದ್ದಾರಿಯಲ್ಲಿ ಮೃತದೇಹ ಇಟ್ಟು ಪ್ರತಿಭಟನೆ ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಗ್ರ್ಯಾಚುಟಿ ಸಮಸ್ಯೆ ಇತ್ಯರ್ಥ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್… ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಇತ್ತೀಚಿನ ಸುದ್ದಿ

ಭೀಕರ ಚಂಡಮಾರುತಕ್ಕೆ ಫಿಲಿಪೈನ್ಸ್‌ ತತ್ತರ; ಮಳೆ, ಭೂ ಕುಸಿತಕ್ಕೆ 58ಕ್ಕೂ ಹೆಚ್ಚು ಮಂದಿ ಸಾವು

14/04/2022, 00:39

ಮನಿಲಾ(reporterkarnataka.com):
ಭೀಕರ ಪ್ರಾಕೃತಿಕ ವಿಕೋಪದಿಂದ ಫಿಲಿಪೈನ್ಸ್‌ ದ್ವೀಪಸಮೂಹವು ತತ್ತರಿಸಿ ಹೋಗುತ್ತಿದೆ. ಮಳೆ- ಭೂಕುಸಿತ ಮತ್ತು ಪ್ರವಾಹದಿಂದಾಗಿ ಈ ವರೆಗೆ 58ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

ಫಿಲಿಪೈನ್ಸ್‌ಗೆ ಅಪ್ಪಳಿಸಿರುವ ಉಷ್ಣವಲಯದ ಚಂಡಮಾರುತವಾದ ಮೇಗಿಯು ಭಯಾನಕ ಅವಘಡಗಳನ್ನು ಸೃಷ್ಟಿ ಮಾಡುತ್ತಿದೆ. 85 ಕಿಮೀ ವೇಗದಲ್ಲಿ ಬೀಸುತ್ತಿರುವ ಚಂಡಮಾರುತದ ಪ್ರಭಾವದಿಂದಾಗಿ ಭಾರೀ ಮಳೆಯೊಂದಿಗೆ ತೀವ್ರಗತಿಯಲ್ಲಿ ಭೂಕುಸಿತ ಸಂಭವಿಸುತ್ತಿದ್ದು, ಅದು ಪ್ರವಾಹ ರೂಪದಲ್ಲಿ ಮುಂದುವರೆದು ಹಳ್ಳಿಹಳ್ಳಿಗಳು ಮಣ್ಣಿನಡಿ ಮುಚ್ಚಿಹೋಗುತ್ತಿವೆ. ರಕ್ಷಣಾ ಪಡೆಗಳು ಜನರ ರಕ್ಷಣಾ ಕಾರ್ಯದಲ್ಲಿ ನಿರಂತರವಾಗಿ ತೊಡಗಿವೆ. ದೊಡ್ಡದೊಡ್ಡ ಬೆಟ್ಟ ಗುಡ್ಡಗಳು ಕುಸಿಯುವ ಜೊತೆಗೆ ಚಂಡಮಾರುತದ ರಭಸಕ್ಕೆ ಮಣ್ಣು-ಕಲ್ಲುಗಳು ತೂರಿಬಂದು ಎಲ್ಲೆಡೆ ಅಪ್ಪಳಿಸುತ್ತಿವೆ.

ಬೇಬೇ ಸಿಟಿಯೊಂದರಲ್ಲೇ ಕುಸಿದ ಮಣ್ಣಿನಡಿ ಸಿಲುಕಿ 47 ಜನರು ಸಾವನ್ನಪ್ಪಿದ್ದಾರೆ ಮತ್ತು 27 ಮಂದಿ ಕಾಣೆಯಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಜೊತೆಗೆ 100 ಜನರು ಗಾಯಗೊಂಡಿದ್ದಾರೆ.

ಲೇಯ್ಟ್‌ನಲ್ಲಿರುವ ಪಿಲಾರ್ ಗ್ರಾಮದಲ್ಲಿ ಭೂಕುಸಿತವು ಹೆಚ್ಚಿನ ಹಾನಿ ಮಾಡಿದ್ದು, ಹಲವು ಮನೆಗಳು ಮನೆಗಳನ್ನು ಸಮುದ್ರಕ್ಕೆ ಕೊಚ್ಚಿ ಹೋಗಿವೆ. ಅಲ್ಲಿನ ಕರಾವಳಿ ಪ್ರದೇಶದಿಂದ ಸುಮಾರು 400 ಜನರನ್ನು ರಕ್ಷಣಾ ಪಡೆಗಳು ದೋಣಿ ಮೂಲಕ ರಕ್ಷಿಸುವ ಕಾರ್ಯದಲ್ಲಿ ತೊಡಗಿವೆ. ಇನ್ನೂ ಹಲವಾರು ನಗರಗಳಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು