ಇತ್ತೀಚಿನ ಸುದ್ದಿ
ಬಿ.ಸಿ.ರೋಡ್: ಜುಲೈ 25ರಂದು ಕಟ್ಟಡ ಕಾರ್ಮಿಕರಿಗೆ ಉಚಿತ ನೋಂದಣಿ ಹಾಗೂ ಮಾಹಿತಿ ಕಾರ್ಯಾಗಾರ
18/07/2023, 14:07

ಬಂಟ್ವಾಳ(reporterkarnataka.com): ಬಂಟ್ವಾಳ ತಾಲೂಕು ಪಂಚಾಯತ್, ಸೀನಿಯರ್ ಛೇಂಬರ್ ಬಂಟ್ವಾಳ ನೇತ್ರಾವತಿ ಸಂಗಮ, ರೊಟರಿ ಕ್ಲಬ್ ಮೊಡಂಕಾಪು, ಕಾರ್ಮಿಕ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಕಟ್ಟಡ ಕಾರ್ಮಿಕರಿಗೆ ಉಚಿತ ನೋಂದಣಿ ಹಾಗೂ ಮಾಹಿತಿ ಕಾರ್ಯಾಗಾರ
ಬಿ.ಸಿ.ರೋಡಿನಲ್ಲಿರುವ ಬಂಟ್ವಾಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜುಲೈ 25ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ.
ಕಟ್ಟಡ ಕಾರ್ಮಿಕರ ನೋಂದಾವಣೆಗೆ ಅವಶ್ಯ ದಾಖಲೆಗಳು ಇಂತಿವೆ:
ಆಧಾರ್, ಭಾವಚಿತ್ರ-1, ಉದ್ಯೋಗ ಪ್ರಮಾಣ ಪತ್ರ, ವೇತನ ಸ್ಲಿಪ್, ಬ್ಯಾಂಕ್ ಪಾಸ್ ಪುಸ್ತಕ