ಇತ್ತೀಚಿನ ಸುದ್ದಿ
ಬಿ.ಸಿ.ರೋಡ್ ಶ್ರೀ ರಕ್ತೇಶ್ವರೀ ದೇವಿ ಸನ್ನಿಧಿಯಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಾಶಾಭಿಶೇಕ ಸಂಪನ್ನ
09/04/2025, 22:47

ಜಯಾನಂದ ಪೆರಾಜೆ ಬಂಟ್ವಾಳ
info.reporterkarnataka@gmail.com
ಬಂಟ್ವಾಳ ತಾಲೂಕಿನ ಕೇಂದ್ರ ಸ್ಥಾನ ಬಿ.ಸಿ. ರೋಡಿನ ಶ್ರೀ ರಕ್ತೇಶ್ವರೀ ದೇವಿ ಪುನರ್ಪ್ರತಿಷ್ಠೆ ಬ್ರಹ್ಮ ಕಲಶಾಭಿಶೇಕ, ನಾಗದೇವರ ಹಾಗೂ ಪರಿವಾರ ದೈವದ ಪ್ರತಿಷ್ಠೆ ಬುಧವಾರ ವೇ.ಮೂ. ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು.
ಸುಮಾರು ಒಂದೂವರೆ ಕೋಟಿ ರುಪಾಯಿ ವೆಚ್ಚದಲ್ಲಿ ಜೀರ್ಣೋದ್ಧಾರ ಕಾರ್ಯಗಳು ಆಗಿದ್ದವು. 48 ದಿನಗಳ ಭಜನಾ ಸೇವೆ ಜರಗಿ ಏ.3ರಿಂದ ವಿವಿಧ ಧಾರ್ಮಿಕ ವಿಧಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು , ಅನ್ನಸಂತರ್ಪಣೆಯೊಂದಿಗೆ ಸಹಸ್ರಾರು ಮಂದಿ ಭಾಗವಹಿಸುವ ಮೂಲಕ ಸಂಪನ್ನಗೊಂಡಿತು.