ಇತ್ತೀಚಿನ ಸುದ್ದಿ
ಬಿ.ಸಿ ರೋಡು ಅನ್ನಪೂರ್ಣೇಶ್ವರಿ ದೇವಸ್ಥಾನ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮತ್ತು ಜಾತ್ರಾ ಮಹೋತ್ಸವ: ಹೊರೆ ಕಾಣಿಕೆ ಸಮರ್ಪಣೆ
18/02/2024, 12:46
ಬಂಟ್ವಾಳ(reporterkarnataka.com): ಬಿ.ಸಿ ರೋಡು ಪೊಲೀಸ್ ಲೈನ್ ಶ್ರೀ ಅನ್ನಪೂರ್ಣೇಶ್ವರಿ ನಾಗದೇವರ ದೇವಸ್ಥಾನ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮತ್ತು ಜಾತ್ರಾಮಹೋತ್ಸವದ ಅಂಗವಾಗಿ ಹೊರೆ ಕಾಣಿಕೆಯನ್ನು ಶ್ರೀ ಕ್ಷೇತ್ರಕ್ಕೆ ಸಮರ್ಪಣೆ ಮಾಡಲಾಯಿತು. ಪೊಳಲಿ ದ್ವಾರದಿಂದ ಅನ್ನಪೂರ್ಣೇಶ್ವರಿ ಕ್ಷೇತ್ರ ದವರೆಗೆ ಹಸಿರುಹೊರೆಕಾಣಿಗೆ ಮೆರವಣಿಗೆ ಅಕ್ಕಿ , ತೆಂಗಿನಕಾಯಿ,ತರಕಾರಿ ಸಹಿತ ಫಲವಸ್ತುಗಳಿಂದ ಸಂಪನ್ನಗೊಂಡಿತು. ಪೊಳಲಿ ವಿವೇಕ ಚೈತನ್ಯಾನಂದ ಸಾಮೀ ,ಉದ್ಯಮಿ ರಘು ಸಪಲ್ಯ ಚಾಲನೆ ನೀಡಿದರು.
ಪ್ರಮುಖರಾದ ಜಗನ್ನಾಥ ಚೌಟ, ಭುವನೇಶ್ ಪಚ್ಚಿನಡ್ಕ, ಜಗನ್ನಾಥ ಶೆಟ್ಟಿ, ಚಂದ್ರಹಾಸ ಶೆಟ್ಟಿ ರಂಗೋಲಿ ಮೊದಲಾದವರು ನೇತೃತ್ವ ವಹಿಸಿದ್ದರು.
ಫೆ.16ರಿಂದ 23ರವರೆಗೆ ವಿವಿಧ ಧಾರ್ಮಿಕ ,ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. 22ಕ್ಕೆ ಬ್ರಹ್ಮ ಕಲಶೋತ್ಸವ ಮತ್ತು ಜಾತ್ರೋತ್ಸವ ನಡೆಯಲಿದೆ.