10:54 AM Wednesday10 - June 2026
ಬ್ರೇಕಿಂಗ್ ನ್ಯೂಸ್
Kodagu | ನಾಪೋಕ್ಲು: ಕಾರು – ಬೈಕ್ ಅಪಘಾತ- ಸವಾರ ಸ್ಥಳದಲ್ಲೇ ಸಾವು Bangalore | ನೌಕರಿ ಕೊಡಿಸುವುದಾಗಿ 40 ಮಂದಿಗೆ 5.3 ಕೋಟಿ ವಂಚನೆ: ಅಪ್ಪ… ಶಕ್ತಿ ಯೋಜನೆಯಿಂದ ವ್ಯಾಪಾರ ನಷ್ಟ, ಸಾಲಗಾರರ ಕಾಟ: ಮಂಡ್ಯದಲ್ಲಿ ಪತ್ನಿ, ಮಗನನ್ನು ಕೊಂದು… ರಾಜ್ಯಸಭೆ ಚುನಾವಣೆ: ರಾಜ್ಯದಿಂದ ಕಾಂಗ್ರೆಸ್ಸಿನ ಮೂವರು, ಓರ್ವ ಬಿಜೆಪಿ ಅಭ್ಯರ್ಥಿ ಅವಿರೋಧ ಆಯ್ಕೆ ಬಿಪಿಎಲ್ ಮಾತ್ರವಲ್ಲ, ಎಪಿಎಲ್ ಕುಟುಂಬಗಳಿಗೂ ಗುಡ್‌ನ್ಯೂಸ್: ಆರೋಗ್ಯ ಸಚಿವ ಖಾದರ್ ಜಲಸಂಪನ್ಮೂಲ ಖಾತೆಯಲ್ಲೇ ಮುಂದುವರಿಯುವೆ; ನಂಗೆ ಬೆಂಗಳೂರು ಉಸ್ತುವಾರಿಯೂ ಬೇಡ, ಏನೂ ಬೇಡ: ರಾಮಲಿಂಗಾ… ಇಂಡಿಯಾ ಮೈತ್ರಿಕೂಟದ ಸಭೆ: ಎಸ್ ಐಆರ್ ವಿರುದ್ಧ ಸುಪ್ರೀಂಕೋರ್ಟ್ ಸಿಜೆಗೆ ದೂರು ಸೇರಿದಂತೆ… ಮಳೆಗಾಲ ಎಫೆಕ್ಟ್: ಜೂನ್ 10ರಿಂದ ಕೊಡಗು ಜಿಲ್ಲೆಯಲ್ಲಿ ಬುಲೆಟ್ ಟ್ಯಾಂಕರ್ ಸಹಿತ ಭಾರೀ… ಸೈಟ್ ಇಲ್ಲದವರಿಗೆ ಉಚಿತ ಸೈಟ್ ಭಾಗ್ಯ: ಮುಖ್ಯಮಂತ್ರಿ ಡಿಕೆಶಿ ಮಹತ್ವದ ಘೋಷಣೆ Mangaluru | ನೂತನ ಆರೋಗ್ಯ ಸಚಿವ ಯು.ಟಿ.ಖಾದರ್ ಗೆ ಕಡಲನಗರಿಯಲ್ಲಿ ಭಾರೀ ಸ್ವಾಗತ

ಇತ್ತೀಚಿನ ಸುದ್ದಿ

ಭತ್ತ ಬೇರ್ಪಡಿಸುವ ಯಂತ್ರ ಆವಿಷ್ಕಾರ: ಹಾಕತ್ತೂರು 10ನೇ ತರಗತಿ ವಿದ್ಯಾರ್ಥಿನಿಯ ಮಹಾನ್ ಸಾಧನೆ

25/01/2023, 10:52

ಮಡಿಕೇರಿ(reporterkarnataka.com): ಗುರುಗಳ ಸಹಕಾರದೊಂದಿಗೆ ಭತ್ತದ ತೆನೆಯಿಂದ ಭತ್ತವನ್ನು ಬೇರ್ಪಡಿಸುವ ಯಂತ್ರವನ್ನು ತಯಾರಿಸಿ ರಾಜ್ಯದುದ್ದಗಲಕ್ಕೂ ನಡೆದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆಯುತ್ತಿರುವ ಬಡವರ ಮನೆಯ ಮಗಳು ಇವಳು. ವಯಸ್ಸು ಕಿರಿದಾದರೂ ಸಾಧನೆ ಮಾತ್ರ ಹಿರಿದು.


ಮಡಿಕೇರಿ ಸಮೀಪದ ಮೇಕೇರಿ ಗ್ರಾಮದ ನಿವಾಸಿ ಕಾರ್ಮಿಕ ಶ್ರಮಜೀವಿ ಪಿ. ಶಿವಕುಮಾರ್ ರವರ ಪುತ್ರಿ ಮೆಘಾ ಎಸ್. ಅವರು ಪ್ರಸ್ತುತ ಹಾಕತ್ತೂರಿನ ಪ್ರೌಢಶಾಲೆಯ 10ನೇ ತರಗತಿಯ ವಿಧ್ಯಾರ್ಥಿನಿ.
ಇತ್ತೀಚೆಗೆ ಮಡಿಕೇರಿಯಲ್ಲಿ ನಡೆದ ತಾಲ್ಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಆನಂತರ
ಕುಶಾಲನಗರದಲ್ಲಿ ನಡೆದ ಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಮೊನ್ನೆಮೊನ್ನೆ ಧಾರವಾಡದಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಎಂಟನೇಯ ಸ್ಥಾನವನ್ನು ಪಡೆದು ಇದೀಗ ಕೇರಳದ ತ್ರಿಶೂರ್ ನಲ್ಲಿ ನಡೆಯಲಿರುವ ದಕ್ಷಿಣ ವಿಭಾಗ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ.ತಮ್ಮ ಗ್ರಾಮದ ವಿದ್ಯಾರ್ಥಿನಿ ಮೆಘಾಳ ಈ ಸಾಧನೆಗೆ ಮೇಕೇರಿ ಗ್ರಾಮದ ಸ್ವಾಗತ ಯುವಕ ಸಂಘದ ಪದಾಧಿಕಾರಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದು ಯುವಕ ಸಂಘದ ಪದಾಧಿಕಾರಿಗಳು ಈ ದಿನ ವಿದ್ಯಾರ್ಥಿನಿ ಮನೆಗೆ ಭೇಟಿ ನೀಡಿ ಅಭಿನಂಧನೆ ಸಲ್ಲಿಸುವುದರ ಜೊತೆಗೆ ಮುಂದಿನ ವಿಭಾಗ ಮಟ್ಟದ ಸ್ಫರ್ಧೆಗೆ ತೆರಳಲು ಸಂಘದ ವತಿಯಿಂದ ಆರ್ಥಿಕ ಸಹಾಯ ನೀಡಿದರು. ಆ ಮೂಲಕ ಕಲಿಯುತ್ತಿರುವ ಶಾಲೆಗೆ ಹಾಗೂ ಗ್ರಾಮಕ್ಕೆ ಕೀರ್ತಿ ತಂದಿರುವ ವಿದ್ಯಾರ್ಥಿನಿ ಮೇಘಾಳ ಉತ್ತಮ ಸಾಧನೆಯನ್ನು ಗೌರವಿಸಿ ಆಕೆಯ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಲಾಯಿತು.ಈ ಸಂದರ್ಭ ಸ್ವಾಗತ ಯುವಕ ಸಂಘದ ಅಧ್ಯಕ್ಷರಾದ ವಿಜು ಹರೀಶ್ ಸದಸ್ಯರಾದ ಭವನ್ ಸಾಮಾಜಿಕ ಕಾರ್ಯಕರ್ತರಾದ ಸತ್ಯ ಕರ್ಕೇರ ರವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು