ಇತ್ತೀಚಿನ ಸುದ್ದಿ
ಬಸನಗೌಡ ಬಾದರ್ಲಿ ಫೌಂಡೇಶನ್ ನಿಂದ 31 ವಾರ್ಡುಗಳಿಗೆ ಔಷಧ ಸಿಂಪಡಣೆ ಕಾರ್ಯಕ್ಕೆ ಚಾಲನೆ
03/06/2021, 06:58
ಸಿಂಧನೂರು(reporterkarnataka news): ಬಸನಗೌಡ ಬಾದರ್ಲಿ ಫೌಂಡೇಶನ್ ವತಿಯಿಂದ ಬ ನಗರದ 31 ವಾರ್ಡುಗಳಿಗೆ ಔಷಧಿ ಸಿಂಪಡಣೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ನಗರದ ಆದಿಶೇಷ ದೇವಸ್ಥಾನದಲ್ಲಿ ವಾಹನಗಳಿಗೆ ಪೂಜೆ ಸಲ್ಲಿಸುವ ಮೂಲಕ ನಿವೃತ್ತ ಶಿಕ್ಷಕ ವೆಂಕನಗೌಡ ವಟಗಲ್ ಸಿಂಪಡಣೆ ಕಾರ್ಯಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಬಸನಗೌಡ ಬಾದರ್ಲಿ ಅವರು ತಮ್ಮ ಫೌಂಡೇಷನ್ ಮೂಲಕ ಅನೇಕ ಸಾಮಾಜಿಕ ಸೇವೆಯನ್ನು ಮಾಡುತ್ತಿದ್ದಾರೆ. ಕೊರೊನಾ ಸಂಕಷ್ಟ ದಲ್ಲಿ ಫೌಂಡೇಶನ್ ಸೇವೆ ಶ್ಲಾಘನೀಯವಾಗಿದೆ. ಬಡ ಜನರಿಗೆ ಆಹಾರ ಕಿಟ್ ವಿತರಣೆ, ಸ್ಯಾನಿಟೈಜರ್ ಸಿಂಪಡಣೆ, ಬಡ ಜನರಿಗೆ ದಿನನಿತ್ಯದ ಊಟದ ವ್ಯವಸ್ಥೆ ಸೇರಿದಂತೆ ಅನೇಕ ಸಾಮಾಜಿಕ ಸೇವೆಗಳನ್ನು ಮಾಡುವ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುತ್ತಿದ್ದಾರೆ ಎಂದರು.
ನಂತರ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಬಾದರ್ಲಿ ಮಾತನಾಡಿ, ಬದುಕು ಶಾಶ್ವತ ಅಲ್ಲ, ನಾವು ಬದುಕಿರುವರೆಗೆ ಮಾಡುವ ಕಾರ್ಯಗಳೇ ಶಾಶ್ವತವಾಗಿ ಉಳಿಯುತ್ತವೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಬಡಜನರ ಪರ ನಿಲ್ಲುವುದು ಪ್ರತಿಯೊಬ್ಬ ಆದ್ಯ ಕರ್ತವ್ಯವಾಗಿದೆ. ಕೊರೊನಾ ತಡೆಗಟ್ಟಲು ಪ್ರತಿಯೊಬ್ಬರು ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ನಮ್ಮ ಫೌಂಡೇಶನ್ ನಿಂದ ಸ್ಯಾನಿಟೈಜರ್ ಸಿಂಪಡಣೆ ಮಾಡಲಾಗುತ್ತಿದೆ. ಈಗಾಗಲೇ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯತಿ ಮಟ್ಟದಲ್ಲಿ ಈಗಾಗಲೇ ಸಿಂಪಡಣೆ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ಮುಖಂಡರಾದ ಸೋಮನಗೌಡ ಬಾದರ್ಲಿ, ವೆಂಕಟೇಶ ನಾಯಕ್, ಖಾಜಾ ಹುಸೇನ್ ರೌಡಕುಂದಾ, ಶಿವಕುಮಾರ ಜವಳಿ, ಬಷೀರ್ ಎತ್ಮಾರಿ, ರವಿ ಹಿರೇಮಠ, ವಿಶ್ವನಾಥ ಮಾಲಿಪಾಟೀಲ್, ಇಲಿಯಾಸ್ ಪಟೇಲ್, ಗೋಪಿಕೃಷ್ಣ, ಶರಣಯ್ಯ ಸ್ವಾಮಿ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಹಬೀಬ್ ಖಾಜಿ, ಗ್ರಾಮೀಣ ಘಟಕದ ಅಧ್ಯಕ್ಷ ಫಕೀರಯ್ಯ, ಶೈಬಾಜ್ , ಜಾವೀದ್, ಮುನ್ನಾ, ಅಮೀನ್, ಅಸ್ಲಾಂ, ಯುಸೂಫ್ ಎತ್ಮಾರಿ, ಸಲ್ಮಾಂನ್, ಇರ್ಷಾದ್ ಸೇರಿದಂತೆ ಅನೇಕರು ಇದ್ದರು.