2:18 AM Thursday9 - April 2026
ಬ್ರೇಕಿಂಗ್ ನ್ಯೂಸ್
ಫೇಲಾದವರಿಗೆ ಇನ್ನೊಂದು ಚಾನ್ಸ್: ದ್ವಿತೀಯ ಪಿಯುಸಿ ಪರೀಕ್ಷೆ-2 ದಿನಾಂಕ ಪ್ರಕಟ Suratkal | ಅಮಾನತುಗೊಂಡಿದ್ದ ಎನ್‌ಐಟಿಕೆ ಕುಲಸಚಿವ ರವೀಂದ್ರನಾಥ್ ಸೇವೆಯಿಂದ ವಜಾ ಪತಿಯ ಶವದ ಜತೆ 10 ದಿನ ಕಳೆದ ಪತ್ನಿ: ಮಲೆನಾಡು ಚಿಕ್ಕಮಗಳೂರಿನಲ್ಲಿ ವಿಚಿತ್ರ… ಕಾಂಗ್ರೆಸ್‌ನಿಂದ ಕೋಟ್ಯಂತರ ರೂಪಾಯಿ ಹಣ ಹಂಚಿಕೆ: ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಆರೋಪ ಅಮ್ಮನ ಸಾವಿನ ದುಃಖದಲ್ಲೂ ಛಲ ಬಿಡದೆ ಪರೀಕ್ಷೆ ಬರೆದ ದಿಶಾ ಸ್ಟೇಟ್ ಗೆ… ದಾವಣಗೆರೆ ದಕ್ಷಿಣ: ಮತಗಟ್ಟೆ ಬಳಿ ಟೇಬಲ್ ವಿಚಾರವಾಗಿ ಕಾಂಗ್ರೆಸ್-ಎಸ್ ಡಿಪಿಐ ಕಾರ್ಯಕರ್ತರ ಜಟಾಪಟಿ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪ ಚುನಾವಣೆ: ಬಹುತೇಕ ಶಾಂತಿಯುತ ಮತದಾನ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: 60 ಎಕರೆ ಅರಣ್ಯ ಪ್ರದೇಶ… ಎಲ್ಲ ಕಡೆ ಸಿದ್ದರಾಮಯ್ಯ ಬೇಕು ಎಂಬ ಬೇಡಿಕೆಯಿದೆ; ಕುಮಾರಸ್ವಾಮಿನಾ ಯಾರು ಎಂದು ಕೇಳ್ತಾರೆ:… ರಾಜ್ಯದಲ್ಲಿ ಬ್ಯಾನ್​​ ಆಗುತ್ತಾ ಸೋಲೋ ಟ್ರೆಕ್ಕಿಂಗ್?: ಅನುಭವವಿದ್ದರೂ ಅಪಾಯ ಫಿಕ್ಸ್​​; ಯಾಕೆ ಗೊತ್ತಾ?

ಇತ್ತೀಚಿನ ಸುದ್ದಿ

ಬಸವಣ್ಣನವರು ಸರ್ವಧರ್ಮೀಯರನ್ನು ಒಂದು ಗೂಡಿಸಿದ ಶ್ರೇಷ್ಠರು: ಕಪರಟ್ಟಿ ಬಸವರಾಜ ಮಹಾಸ್ವಾಮೀಜಿ

31/07/2024, 15:10

ಸಂತೋಷ್ ಬೆಳಗಾವಿ

info.reporterkarnataka@gmail.com

ಬಸವಣ್ಣವರು 12ನೇ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪಿಸಿ ಕಲ್ಯಾಣದ ಕ್ರಾಂತಿ ಮಾಡಿ ಸರ್ವಧರ್ಮೀಯರನ್ನು ಒಂದು ಗೂಡಿಸಿ ಒಂದೇ ಎಂಬ ತತ್ವ ಸಾರಿ ಶ್ರೇಷ್ಠ ಅನಿಸಿಕೊಂಡ್ಡವರು. ವಿಶ್ವ ಗುರು ಬಸವಣ್ಣವರು ಆಧ್ಯಾತ್ಮದ ಮಾತುಗಳು ಅಮೃತವಿದ್ದಂತೆ ಎಂದು ಕಪರಟ್ಟಿ ಬಸವರಾಜ ಮಹಾಸ್ವಾಮೀಜಿಗಳು ಹೇಳಿದರು. ಅವರು ಗ್ರಾಮದ ಪಾಂಡುರಂಗ ದೇವಸ್ಥಾನದಲ್ಲಿ ನಡೆದ ಬಸವ ಮಹಾಪೂಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾಜದಲ್ಲಿ ಎಲ್ಲ ಮಾನವ ಕುಲದ ಎಳ್ಗೆ ಬಯಸಿ ಎಲ್ಲರಿಗೂ ಸ್ಥಾನಮಾನ ದೊರೆತ್ತಿದ್ದು ಬಸವಣ್ಣವ ರಿಂದ.ಅದಿಕಾರವಿಲ್ಲದಿದ್ದರು ಬಡವ ದಿನ ದಲಿತರ ಹಿಂದುಳಿದ ವರ್ಗಗಳ ಕಲ್ಯಾಣ ಸಹಾಯ ಸಹಕಾರ ನೀಡಿ ಅವರನ್ನು ಮೇಲೆಕ್ಕೆತ್ತುವ ಕೆಲಸ ಮಾಡುವರೆ ಶ್ರೇಷ್ಠರು ಅವತಾರಿಕರಲ್ಲಿ ಜಾತಿ ಬೇಧವಿಲ್ಲ ನಿಜವಾದ ಸಾಧು ಸಂತರ ಸಂಘ ಮಾಡಿ ಜೀವನವು ಉದ್ಧಾರ ಮಾಡಿಕೊಳ್ಳಿರೆಂದು ಹೇಳಿದರು. ಸಿದ್ಧಾರೂಢ ಮಠದ ಶಿವಾನಂದ ಸ್ವಾಮೀಜಿಯವರು ಮಾತನಾಡಿ ಬಸವಣ್ಣನವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ನುಡಿದಂತೆ ನಡೆದು ಪ್ರಪಂಚ ಮಾಡಿ ಪಾರಮಾರ್ಥ ಗೆದ್ದು ಮಾನವ ಜೀವನ ಸಾರ್ಥಕ ಮಾಡಿಕೊಂಡು ಮುಕ್ತಿ ಪಡೆಯಬೇಕೆಂದು ಹೇಳಿದರು. ಈ ಸಮಯದಲ್ಲಿ ಶಂಕರಯ್ಯ ಹೀರೆಮಠ. ಬಸವನ್ನಿ ಡಬ್ಬನ್ನವರ. ಶಿವಪ್ಪ ನಿಡೋಣಿ.ದುಂಡಪ್ಪ ಬಡಿಗೇರ. ಅಡಿವೆಪ್ಪ ಪಾಲಬಾಂವಿ. ಭೀಮಪ್ಪ ಹೊಸಟ್ಟಿ.ಮಲ್ಲಿಕಾರ್ಜುನ ಸಂತಿ.ಮುರಿಗೆಪ್ಪ ಮಾಲಗಾರ.ರಮೇಶ ಲೋಕಣ್ಣವರ. ಲಕ್ಷ್ಮಣ ಬಡಿಗೇರ ಉಮೇಶ ಸಿದ್ನಾಳ. ದಿನೇಶ್ ಜುಗಳಿ.ಸೇರಿದಂತೆ ಅನೇಕರಿದ್ದು ಕಾರ್ಯಕ್ರಮವನ್ನು ಮುರಿಗೆಪ್ಪ ಮಾಲಗಾರ ನಿರೂಪಿಸಿ, ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು