ಇತ್ತೀಚಿನ ಸುದ್ದಿ
ಬರೇ 5 ತಿಂಗಳಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಕುಲ್ ದೀಪ್ ಕುಮಾರ್ ಜೈನ್ ವರ್ಗಾವಣೆ!: ಡ್ರಗ್ಸ್, ಮಟ್ಕಾ ವಿರುದ್ಧ ಸಮರ ಸಾರಿದ್ದ ಅಧಿಕಾರಿ
05/09/2023, 10:12

ಮಂಗಳೂರು(reporterkarnataka.com):ಮಂಗಳೂರು ಪೊಲೀಸ್ ಕಮಿಷನರ್ ಕುಲ್ ದೀಪ್ ಕುಮಾರ್ ಜೈನ್ ಅವರನ್ನು ವರ್ಗಾಯಿಸಲಾಗಿದೆ. ನೂತನ ಕಮಿಷನರ್ ಆಗಿ ಹಿರಿಯ ಐಪಿಎಸ್ ಅಧಿಕಾರಿ ಅನೂಪಮ್ ಅಗರ್ವಾಲ್ ಅವರನ್ನು ನೇಮಿಸಲಾಗಿದೆ.ಸರಕಾರ ಈ ಕುರಿತು ಆದೇಶ ಹೊರಡಿಸಿದೆ.
ಕೇವಲ 5 ತಿಂಗಳ ಹಿಂದೆ ನೇಮಕಗೊಂಡ ಕುಲ್ ದೀಪ್ ಕುಮಾರ್ ಜೈನ್ ಅವರನ್ನು ವರ್ಗಾವಣೆ ಮಾಡಲಾಗಿದೆ. ದಕ್ಷ ಅಧಿಕಾರಿ ಎಂದೇ ಗುರುತಿಸಿ ಕೊಂಡಿದ್ದ ಕುಲ್ ದೀಪ್ ಕುಮಾರ್ ಜೈನ್ ಅವರು
ಡ್ರಗ್ಸ್ ವಿರುದ್ದ ಸಮರ ಸಾರಿದ್ದರು. ಮಂಗಳೂರನ್ನು
ಡ್ರಗ್ಸ್ ಫ್ರೀ ಮಾಡುವ ಗುರಿ ಹೊಂದಿದ್ದರು. ಹಾಗೆ ಮಟ್ಕಾ, ಜೂಜಿಗೆ ಕಡಿವಾಣ ಹಾಕಿದ್ದರು.
ಮಟ್ಕಾ, ಜೂಜು ಅಡ್ಡೆಗಳ ಮೇಲೆ ನಿರಂತರ ದಾಳಿ ನಡೆಸಿದ್ದ ರು. ಡ್ರಗ್ಸ್, ಮಟ್ಕಾ ಮಾಫಿಯಾದ ಹಿಂದೆ ಬಿದ್ದಿದ್ದೇ ಕುಲ್ ದೀಪ್ ಅವರಿಗೆ ಮುಳುವಾಯಿತೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.