12:59 AM Friday3 - April 2026
ಬ್ರೇಕಿಂಗ್ ನ್ಯೂಸ್
ವಾರ್ ಎಫೆಕ್ಟ್‌‌ | ಇವಿಗೆ ಹೆಚ್ಚಿದ ಡಿಮ್ಯಾಂಡ್: ತಿಂಗಳಲ್ಲಿ 29 ಸಾವಿರಕ್ಕೂ ಅಧಿಕ… ಗೋಪಾಲಪುರದ ಸಂತ ಅಂತೋಣಿ ಚರ್ಚ್ ನಲ್ಲಿ ಗುಡ್ ಫ್ರೈಡೆಯನ್ನು ಶಿಲುಬೆಟ್ಟದಲ್ಲಿ ಶ್ರದ್ದಾ ಭಕ್ತಿಯಿಂದ… ವಿರಾಜಪೇಟೆಯಲ್ಲಿ ಸಂಭ್ರಮದ ಹನುಮ ಜಯಂತಿ ಆಚರಣೆ: ಸಹಸ್ರಾರು ಸಂಖ್ಯೆಯಲ್ಲಿ ಸಮಾಗಮ ಪಾಟೀಲ್ – ಯತ್ನಾಳ್ ವಾಕ್ಸಮರ | ಒಂದು ದಿನ ಅವರೇ ಅಪ್ಪ-ಮಕ್ಕಳನ್ನು ಕೈಬಿಟ್ಟು… ದಾವಣಗೆರೆ ಉಪ ಚುನಾವಣೆ: ಕೆಂಡ ತುಳಿದು ಭಕ್ತಿ ಸಮರ್ಪಿಸಿದ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್‌ ಸಿದ್ದಗಂಗಾ ಮಠಕ್ಕೆ ಬಂದಿದ್ದು ನನ್ನ ಜೀವನದ ಸೌಭಾಗ್ಯ: ರಾಷ್ಟ್ರಪತಿ ದ್ರೌಪದಿ ಮುರ್ಮು ದಾವಣಗೆರೆ, ಬಾಗಲಕೋಟೆಯಲ್ಲಿ ಸಚಿವ ಜಮೀರ್ ಪ್ರಚಾರ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ತಮಿಳುನಾಡಿನಿಂದ ರೈಲಿನಲ್ಲಿ ಬಂದು ಕೆಂಜಾರು ದೇಗುಲದ ಹುಂಡಿ ಕಳ್ಳತನ: ಅಂತಾರಾಜ್ಯ ಕಳ್ಳನ ಬಂಧನ ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರ ಬರೀ ಲೂಟಿ ಮಾಡಿದ್ದು ಬಿಟ್ಟರೆ ಅಭಿವೃದ್ಧಿ ಮಾಡಲಿಲ್ಲ: ಸಿಎಂ… ಸಿದ್ದರಾಮಯ್ಯ ಕಳ್ಳಮತಗಳಿಂದ ನನ್ನ ವಿರುದ್ಧ ಬಾದಾಮಿಯಲ್ಲಿ ಗೆದ್ದರು: ಶ್ರೀರಾಮುಲು ಆರೋಪ

ಇತ್ತೀಚಿನ ಸುದ್ದಿ

ಬಾರ್ & ರೆಸ್ಟೋರೆಂಟ್ ಮಾಡಿದರೆ ನಮ್ಮ ಬದುಕಿಗೆ ದಕ್ಕೆ ಆಗುತ್ತದೆ: ಸಾರ್ವಜನಿಕರ ಆಕ್ಷೇಪ

21/11/2024, 19:40

ರಶ್ಮಿ ಶ್ರೀಕಾಂತ್ ತೀರ್ಥಹಳ್ಳಿ ಶಿವಮೊಗ್ಗ

info.reporterkarma@gmail.com

ರಾಜ್ಯ ಹೆದ್ದಾರಿಯ ಹೊರಣೆಬೈಲು, ಕೆಸಲೂರು ಗ್ರಾಮದ (ಕಮ್ಮರಡಿಯಿಂದ ಶೃಂಗೇರಿಗೆ ಹೋಗುವ ರಸ್ತೆ) ಸರ್ವೆ ನಂ.72 ರಲ್ಲಿ ಪುರುಶೋತ್ತಮ ಎಂಬುವವರು ರಾತ್ರೋ ರಾತ್ರಿ ರಸ್ತೆಗೆ ಹೊಂದಿಕೊಂಡು ಕೇವಲ 8-10 ಅಡಿ ದೂರದಲ್ಲಿ ಒಂದು ಕಟ್ಟಡ ನಿರ್ಮಿಸಿರುತ್ತಾರೆ.
ಈ ಕಟ್ಟಡದಲ್ಲಿ ಸೊರಬದಿಂದ ಬಾರ್ ಮತ್ತು ರೆಸ್ಟೋರೆಂಟ್ ಮಾಡುತ್ತಿದ್ದು (ಸ್ಥಳಾಂತರ ಮಾಡುತ್ತಿದ್ದು) ಅದನ್ನು ಮಾಡಿದರೆ ನಮ್ಮ ಜೀವನಕ್ಕೆ ದಕ್ಕೆ ಆಗುತ್ತದೆ ಎಂದು ಸ್ಥಳೀಯರಾದ ಇಲಿಯಾಸ್ ಹೇಳಿದರು.
ಗುರುವಾರ ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ತೀರ್ಥಹಳ್ಳಿ ಕಮ್ಮರಡಿ, ಶೃಂಗೇರಿ ರಾಜ್ಯ ಹೆದ್ದಾರಿಯಲ್ಲಿ
50-60 ವರ್ಷಗಳಿಂದ ಸದರಿ ಜಾಗ ಖಾಲಿ ಇದ್ದು, ಅದರಲ್ಲಿ ಯಾವುದೇ ಕಟ್ಟಡ ಇರಲಿಲ್ಲ. ಈಗ ಕಟ್ಟಡದ ಮತ್ತು ರಸ್ತೆಗೆ ಮದ್ಯೆ ಕಾಂಪೌಂಡ್ ಸಹ ನಿರ್ಮಿಸಿದ್ದು ಹಾಗೂ ಹಿಂಭಾಗದಲ್ಲಿ ರಸ್ತೆಯನ್ನು
ಸಹ ಮಾಡುವ ಸಲುವಾಗಿ ಮರ ಗಿಡಗಳನ್ನು ಕಡಿಯಲಾಗಿದೆ. ಅಕ್ಕಪಕ್ಕದಲ್ಲಿ ವಸತಿ ಪ್ರದೇಶವಾಗಿದ್ದು, 30 ಕ್ಕೂ ಹೆಚ್ಚು ಮನೆಗಳಿವೆ. ಈ ರೀತಿ ಇಲ್ಲಿ ಬಾರ್ ಮತ್ತು ರೆಸ್ಟೋರೆಂಟ್ ಮಾಡಿದರೆ ನಮ್ಮ ಜೀವನಕ್ಕೆ ಹಾಗೂ ಬದುಕಿಗೆ ದಕ್ಕೆ ಆಗುತ್ತದೆ ಎಂದು ತಿಳಿಸಿದರು.
ಇದನ್ನು ವಿರೋಧಿಸಿ ಅರಣ್ಯ, ಕಂದಾಯ, ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಆದರೆ ನಮ್ಮ ಮನವಿ ಧಿಕ್ಕರಿಸಿ ಅಬಕಾರಿ ಅಧಿಕಾರಿಗಳು ಸದರಿ ಅರಣ್ಯ
ಇಲಾಖೆ ಭೂಮಿಯಲ್ಲಿ ರಾಜ್ಯ ಹೆದ್ದಾರಿಗೆ ಅತೀ ಸಮೀಪ 10-15 ಅಡಿ ಅಂತರದಲ್ಲಿ ಹಾಗೂ ಹತ್ತಾರು ವಾಸದ ಜನ ವಸತಿ ಪ್ರದೇಶದಲ್ಲಿ ಬಾರ್ & ರೆಸ್ಟೋರೆಂಟ್ ಗೆ ಪರವಾನಗಿ ನೀಡಲು ಮುಂದಾಗಿದ್ದಾರೆ. ಕ್ಷೇತ್ರದ ಶಾಸಕರು ಈ ಬಗ್ಗೆ ತಕ್ಷಣ ಈ ಸಮಸ್ಯೆಯನ್ನು ಗಮನಿಸಿ ಸದರಿ ಬಾ‌ರ್ ಗೆ ಲೈಸೆನ್ಸ್ ನೀಡದಂತೆ ಹಾಗೂ ಜನತೆಯ ಮತ್ತು ಗ್ರಾಮಸ್ಥರು ಸಹಾಯಕ್ಕೆ ಬರಬೇಕೆಂದು ಈ ಮೂಲಕ ಮನವಿ ಮಾಡುತ್ತೇವೆ ಎಂದು ತಿಳಿಸಿದರು.
ಈ ವಿಚಾರವಾಗಿ ನ್ಯಾಯಲಯಕ್ಕೆ ಹಾಗೂ ಲೋಕಾಯುಕ್ತಕ್ಕೆ ಹೋಗಲು ಸಿದ್ಧರಿದ್ದೇವೆ.
ಒಂದು ವೇಳೆ ನಮ್ಮ ಈ ಮನವಿ ಧಿಕ್ಕರಿಸಿ ವಸತಿ ಪ್ರದೇಶ ಹಾಗೂ ಅರಣ್ಯ ಪ್ರದೇಶ ಮತ್ತು ರಾಜ್ಯ ಹೆದ್ದಾರಿ ಪಕ್ಕದಲ್ಲಿ ಬಾರ್ ಗೆ ಪರವಾನಿಗೆ ನೀಡಿದರೆ ಪ್ರತಿಭಟನೆ ಸಹಾ ಮಾಡ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಯಾಹಿಯ, ಅನಿಷಾ, ಮಮ್ತಾಜ್, ನಿಷ್ಮಾ ಸೇರಿ ಹಲವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು