ಇತ್ತೀಚಿನ ಸುದ್ದಿ
ಬಂಟ್ವಾಳ: ಮದರ್ ವೆರೋನಿಕಾ ದ್ವಿಶತಮಾನ ಜನ್ಮದಿನದ ನೆನಪಿಗಾಗಿ ರಕ್ತದಾನ ಶಿಬಿರ
04/10/2023, 14:27

ಬಂಟ್ವಾಳ(reporterkarnataka.com): ಅಪೊಸ್ತೋಲಿಕ್ ಕಾರ್ಮೆಲ್ ಸಂಸ್ಥಾಪಕಿ ಮದರ್ ವೆರೋನಿಕಾ ಇವರ ದ್ವಿ ಶತಮಾನ ಜನ್ಮದಿನದ ನೆನಪಿಗಾಗಿ ರಕ್ತದಾನ ಶಿಬಿರವನ್ನು ರಾಷ್ಟ್ರೀಯ ಸೇವಾ ಯೋಜನೆ, ಯೂತ್ ರೆಡ್ ಕ್ರಾಸ್ ಕಾರ್ಮೆಲ್ ಕಾಲೇಜ್ ಮೊಡಂಕಾಪು , ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜ್, ಮಂಗಳೂರು, ಇನ್ಫ್ಯಾಂಟ್ ಜೀಸಸ್ ಚರ್ಚ್ ಮೊಡಂಕಾಪು, ಕ್ರಿಸ್ಟೊಫರ್ ಅಸೋಸಿಯೇಷನ್, ಆರೋಗ್ಯ ಆಯೋಗ ಇನ್ಫ್ಯಾಂಟ್ ಜೀಸಸ್ ಚರ್ಚ್, ಐಸಿವೈಮ್ ಹಾಗೂ ಸ್ತ್ರೀ ಸಂಘಟನೆಯ ಜಂಟಿ ಆಶ್ರಯದಲ್ಲಿ ಆಯೋಜಿಸಲಾಯಿತು.
ಸಭಾ ಕಾರ್ಯಕ್ರಮದಲ್ಲಿ ಗಣ್ಯ ಅತಿಥಿಗಳಾಗಿ ಅತೀ ವಂದನೀಯ ವೆಲೇರಿಯನ್ ಡಿ’ಸೋಜ (ಧರ್ಮ ಗುರುಗಳು ಇನ್ಫ್ಯಾಂಟ್ ಜೀಸಸ್ ಚರ್ಚ್ ಮೊಡಂಕಾಪು), ಚರ್ಚ್ ಪಾಲನ ಮಂಡಳಿಯ ಸುನಿಲ್ ವೇಗಸ್ ಹಾಗೂ ಕಾರ್ಯದರ್ಶಿ ಮನೋಹರ್ ಡಿ’ ಕೊಸ್ತಾ, ಡಾ| ಚಾರು, (ವೈದ್ಯರು ಫಾ| ಮುಲ್ಲರ್ ಆಸ್ಪತ್ರೆ), ಐವನ್ ಡಿ’ಸೋಜ(ಅಧ್ಯಕ್ಷರು ಕ್ರಿಸ್ಟೊಫರ್ ಅಸೋಸಿಯೇಷನ್), ಇನ್ಫ್ಯಾಂಟ್ ಜೀಸಸ್ ಚರ್ಚ್ ನ ಸಂಚಾಲಕರಾದ ಏಲೋಶಿಯಸ್ ಹಾಗೂ ಐಸಿವೈಮ್ ನ ಸಂಚಾಲಕಿ ಪ್ರೀಮ, ಕಾರ್ಮೆಲ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು|ನವೀನ ಎ. ಸಿ. ಮತ್ತು ಡಾ. ಲತಾ ಫೆ ರ್ನಾಂಡಿಸ್ ಎ ಸಿ. (ಪ್ರಾಂಶುಪಾಲರು ಕಾರ್ಮೆಲ್ ಡಿಗ್ರಿ ಕಾಲೇಜ್ ಮೊಡಂಕಾಪು) ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಅತೀ ವಂದನೀಯ
ವೆಲೇರಿಯನ್ ಡಿ’ಸೋಜ ಧರ್ಮ ಗುರುಗಳು ಇನ್ಫ್ಯಾಂಟ್ ಜೀಸಸ್ ಚರ್ಚ್ ಮೊಡಂಕಾಪು, ಮಾತನಾಡಿ ರಕ್ತದಾನದ ಮಹತ್ವವನ್ನು ತಿಳಿಸಿದರು. ಸಭಾ ಕಾರ್ಯಕ್ರಮದ ನಂತರ ರಕ್ತದಾನ ಶಿಬಿರ ಪ್ರಾರಂಭಗೊಂಡಿತು. 50 ಯುನಿಟ್ ರಕ್ತ ಪಡೆದುಕೊಳ್ಳಲಾಯಿತು. ಸಭಾ ಕಾರ್ಯಕ್ರಮದ ನಿರೂಪಣೆಯನ್ನು ವಿಜೇತಾ (ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಕಾರ್ಮೆಲ್ ಕಾಲೇಜ್ ಮೊಡಂಕಾಪು) ಮಾಡಿದರು. ರೊಸಿಲ್ಡ್ (ಕಾರ್ಮೆಲ್ ಕಾನ್ವೆಂಟ್ ನ ಸುಪೀರಿಯರ್ ಹಾಗೂ ಜಂಟಿ ಕಾರ್ಯದರ್ಶಿ ಕಾರ್ಮೆಲ್ ವಿದ್ಯಾ ಸಂಸ್ಥೆಗಳು) ಸ್ವಾಗತಿಸಿದರು.
ನವೀನ ಎ.ಸಿ (ಪ್ರಾಂಶುಪಾಲರು, ಕಾರ್ಮೆಲ್ ಪದವಿ ಪೂರ್ವ ಕಾಲೇಜು) ವಂದಿಸಿದರು.