ಇತ್ತೀಚಿನ ಸುದ್ದಿ
ಬಂಟ್ವಾಳ: ಜೀವನ ಕೌಶಲ್ಯ ತರಬೇತಿ ಕಾರ್ಯಕ್ರಮ
21/03/2022, 06:40
ಬಂಟ್ವಾಳ(reporterkarnataka.com):
ಬಂಟ್ವಾಳ ಸರಕಾರಿ ಪ್ರಥಮ ದರ್ಜೆ ಕಾಲೇಜು ಸ್ವಾತಂತ್ರ್ಯಅಮೃತ ಮಹೋತ್ಸವ ಸಮಿತಿ,ಎನ್ ಎಸ್ ಎಸ್ , ರೇಂಜರ್ ರೊವರ್ಸ್, ಸಮಾಜ ಶಾಸ್ತ್ರ ಸಂಘದ ಮತ್ತು ಯುವ ಸ್ಪಂದನದ ಸಹಯೊಗದೊಂದಿಗೆ ಜೀವನ ಕೌಶಲ್ಯ ತರಬೇತಿ ಕಾರ್ಯಕ್ರಮ ಜರಗಿತು.
ಕಾರ್ಯಕ್ರಮದಲ್ಲಿ ಯುವ ಪ್ರವರ್ತಕರಾದ ಅಲ್ಲಾಭಕ್ಶ ಭಾಗವಹಿಸಿದ್ದರು.
ಡಾ. ಅಪರ್ಣಾ ಅಳ್ವ ಜೀವನ ಕೌಶಲ್ಯದ ನಿರ್ವಹಣೆ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯ ಕ್ರಮದಲ್ಲಿ ಪ್ರಾಂಶುಪಾಲರು ಡಾ. ಸತೀಶ್, ಐಕ್ಯು ಎ ಸಿ ಸಂಚಾಲಕ ಪ್ರೊ. ನಂದಕಿಶೊರ್ , ಪ್ರೊ . ಬಾಲಸುಬ್ರಹ್ಮಣ್ಯ , ಪ್ರೊ. ವೈಶಾಲಿ ಉಪಸ್ಥಿತರಿದ್ದರು. ಪ್ರೊ. ಹೈದರಾಲಿ ಜೀವನ ಶೈಲಿಯಲ್ಲಿ ಕೌಶಲ್ಯದ ನಿರ್ವಹಣೆ ಬಗ್ಗೆ ತಿಳಿಸಿದರು. ಡಾ ಅಪರ್ಣಾ ಆಳ್ವ ವಂದಿಸಿದರು.