ಇತ್ತೀಚಿನ ಸುದ್ದಿ
ಬಂಟ್ವಾಳ ಸರಕಾರಿ ಪ್ರಥಮ ದರ್ಜೆ ಕಾಲೇಜು: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಬಿತ್ತೋತ್ಸವ ಕಾರ್ಯಕ್ರಮ
12/06/2022, 14:59
ಬಂಟ್ವಾಳ(reporterkarnataka.com): ಕರ್ನಾಟಕ ಅರಣ್ಯ ಇಲಾಖೆ ಹಾಗೂ ಬಂಟ್ವಾಳ ಸರಕಾರಿ ಪ್ರಥಮ ದರ್ಜೆ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕದ ಜಂಟೀ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಬಿತ್ತೋತ್ಸವ ಕಾರ್ಯಕ್ರಮ ನಡೆಸಲಾಯಿತು.
ಈ ಸಂದರ್ಭದಲ್ಲಿ ಗಿಡ ನೆಡುವ, ಗಿಡ ವಿತರಣೆ ಹಾಗೂ ಸ್ನೇಕ್ ಕಿರಣ್ ಅವರಿಂದ ಹಾವು ಮತ್ತು ನಾವು ಮಾಹಿತಿ ಕಾರ್ಯಕ್ರಮಗಳೂ ನಡೆದವು. ಕಾಲೇಜು ಅಭಿವೃದ್ಧಿ ಸಮಿತಿ ಅದ್ಯಕ್ಷ ಪ್ರಸಾದ್ ಕುಮಾರ್ ರೈ ಉದ್ಘಾಟಿಸಿ ಪರಿಸರ ಸಂರಕ್ಷಣೆ ಮತ್ತು ಮಾನವ ಅಸ್ತಿತ್ವದ ಮಹತ್ವ ವನ್ನು ವಿವರಿಸಿದರು.
ತುಂಬೆ ವಿಭಾಗ ದ ಉಪ ಅರಣ್ಯ ವಲಯಾಧಿಕಾರಿ ಯಶೋಧರ ಅವರು ಅರಣ್ಯ ಸಂರಕ್ಷಣೆಯ ಪ್ರಾಮುಖ್ಯತೆ ಬಗ್ಗೆ ತಾಂತ್ರಿಕ ಮಾಹಿತಿ ನೀಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ಪ್ರಕಾಶ್ಚಂದ್ರ ಗಿಡ ನೆಡುವುದರ ಮಹತ್ವ ಪ್ರಕೃತಿ – ಪರಿಸರ ಸಮತೋಲನದ ಪ್ರಾಮುಖ್ಯತೆಯನ್ನು ತಿಳಿಸಿದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪ್ರೊ ಹೈದರಾಲಿ ಸ್ವಾಗತಿಸಿದರು. ಡಾ. ಅಪರ್ಣ ಆಳ್ವ ವಂದಿಸಿದರು. ಪ್ರೊ ಬಾಲ ಸುಬ್ರಮಣ್ಯ,ವಲಯ ಅರಣ್ಯ ಇಲಾಖೆಯ ಜಿತೇಶ್, ರೇಖಾ ಹಾಗೂ ಭಾಸ್ಕರ್ ಕಾರ್ಯಕ್ರಮ ಆಯೋಜನೆಗೆ ಸಹಕರಿಸಿದರು. ಜ್ಞಾನೇಶ್ ಕಾರ್ಯಕ್ರಮ ನಿರೂಪಿಸಿದರು.