8:38 PM Friday4 - April 2025
ಬ್ರೇಕಿಂಗ್ ನ್ಯೂಸ್
Bangaluru | ಚಿಲಿ ಅಧ್ಯಕ್ಷ ಗ್ಯಾಬ್ರಿಯಲ್ ಬೋರಿಕ್ ಫಾಂಟ್ ಬೆಂಗಳೂರಿಗೆ ಭೇಟಿ: 2… Mangaluru | ಸ್ಪೆಲ್‌ ಬೀ ವಿಜ್‌ ನ್ಯಾಶನಲ್‌ ಸ್ಪೆಲ್‌ ಬೀ: ಮಂಗಳೂರಿನ ಸಿಯೆಲ್‌… Bangaluru | ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರು ಜಲ ಮಂಡಳಿಯಿಂದ ವಿನೂತನ ಯೋಜನೆ:… Good News | ರೈತರಿಗೆ 7 ವರ್ಷಗಳ ನಂತರ ಮತ್ತೆ ಸೂಕ್ಷ್ಮ ನೀರಾವರಿಗೆ… Chikkamagaluru | ಕಾಫಿನಾಡಿನಲ್ಲಿ ಭಾರೀ ಮಳೆ: ಕೊಟ್ಟಿಗೆಹಾರ, ಬಣಕಲ್, ಬಾಳೂರು, ಚಾರ್ಮಾಡಿಯಲ್ಲಿ ವರ್ಷಧಾರೆ Solar power | ದೇಶದ 2,249 ರೈಲು ನಿಲ್ದಾಣಗಳಲ್ಲಿ 209 ಮೆಗಾವ್ಯಾಟ್‌ ಸೌರ… EX CM | ವಕ್ಸ್ ಆಸ್ತಿ ಕಬಳಿಸಿರುವುದನ್ನು ಮುಚ್ಚಿ ಹಾಕಲು ಕಾಂಗ್ರೆಸ್‌ ತಿದ್ದುಪಡಿ… Chikkamagaluru | ಅನ್ನದಾತ ಆತ್ಮಹತ್ಯೆ: ಕಿರುಕುಳ ನೀಡಿದ ಬ್ಯಾಂಕ್ ಎದುರು ರೈತನ ಪಾರ್ಥಿವ… Mangaluru | ಜಾಮರ್ ಸಮಸ್ಯೆ ಬಗೆಹರಿಸದಿದ್ದರೆ ಜೈಲಿನೊಳಗೆ ನುಗ್ಗಿ ಕಿತ್ತು ಬಿಸಾಕ ಬೇಕಾಗುತ್ತದೆ:… Delhi | ರಾಜ್ಯದ್ದು “ಜನ-ಕರ” ವಸೂಲಿ ಸರಕಾರ: ಕಾಂಗ್ರೆಸ್‌ ವಿರುದ್ಧ ಕೇಂದ್ರ ಸಚಿವ…

ಇತ್ತೀಚಿನ ಸುದ್ದಿ

ಬಂಟ್ವಾಳ: ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ

24/01/2022, 21:16

ಬಂಟ್ವಾಳ(reporterkarnataka.com):
ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ “ಅಮೃತ ಸಮುದಾಯ ಅಭಿವೃದ್ಧಿ ಯೋಜನೆ” ವಾರ್ಷಿಕ ವಿಶೇಷ ಶಿಬಿರವು ಬಂಟ್ವಾಳ  ಕೆಂಪುಗುಡ್ಡೆಯ ಅಂಬೇಡ್ಕರ್ ಸಮುದಾಯ ಭವನದಲ್ಲಿ ಶುಕ್ರವಾರ ಉದ್ಘಾಟನೆ ಗೊಂಡಿತು.

ಈ ಶಿಬಿರವನ್ನು ಪೊಳಲಿ ರಾಮಕೃಷ್ಣ ತಪೋವನದ ಅಧ್ಯಕ್ಷ ಸ್ವಾಮಿ ವಿವೇಕ ಚೈತನ್ಯಾನಂದ ಉದ್ಘಾಟಿಸಿದರು. ಈ ಸಂಧರ್ಭ

ಮಾತನಾಡಿದ ಅವರು, ” If you want to know India, meet Swami Vivekananda” ಎನ್ನುವ ವಿವೇಕ ವಾಣಿಯ ಮೂಲಕ ಯುವಜನತೆಗೆ ಸ್ಪೂರ್ತಿ ತುಂಬಿದರು. ಆಧ್ಯಾತ್ಮಿಕತೆಯ ಬಗ್ಗೆ, ಹಾಗೇ ವೈಜ್ಞಾನಿಕವಾಗಿ ಮೌಲ್ಯಾಧಾರಿತ ನುಡಿಗಳನ್ನು ನುಡಿದರು. 

ಅಧ್ಯಕ್ಷತೆಯನ್ನು ಡಾ.ಗಿರೀಶ್ ಭಟ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರವಿಶಂಕರ್ ಬಡಾಜೆಗುತ್ತು ಭಾಗವಹಿಸಿದ್ದರು. ರಾ.ಸೇ.ಯೋಜನಾಧಿಕಾರಿ ಹೈದರಾಲಿ  ಪ್ರಾಸ್ತವಿಕ ನುಡಿಗಳನ್ನಾಡಿದರು.

ಪ್ರಸಾದ್ ಕುಮಾರ್ ರೈ, ಡಾ. ಶೇಷಪ್ಪ ಕೆ.,ರವಿ ಹಿತನುಡಿಗಳನ್ನಾಡಿದರು. ಈ ಕಾರ್ಯಕ್ರಮವನ್ನು ಚಂದ್ರಪ್ರಭಾ ನಿರೂಪಿಸಿದರು. ಅಶ್ವಿತಾ, ಇಬ್ರಾಹಿಂ ಖಲೀಲ್,  ನಿಶಾಂತ್ ಸ್ವಾಗತಿಸಿದರು. ಜ್ಞಾನೇಶ್ ಕಾರಂತ್ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು