ಇತ್ತೀಚಿನ ಸುದ್ದಿ
ಬಂಟ್ವಾಳ ಕಾರ್ಮೆಲ್ ಕಾಲೇಜು ವಿದ್ಯಾರ್ಥಿ ಪರಿಷತ್ ಉದ್ಘಾಟನೆ
23/09/2023, 20:03
ಬಂಟ್ವಾಳ(reporterkarnataka.com): ಕಾರ್ಮೆಲ್ ಕಾಲೇಜು ವಿದ್ಯಾರ್ಥಿ ಪರಿಷತ್ 2023- 24ರ ಉದ್ಘಾಟನಾ ಸಮಾರಂಭ ಜರುಗಿತು.
ಮುಖ್ಯ ಅತಿಥಿಗಳಾದ ಡಾ. ಪ್ರಕಾಶ್ ಚಂದ್ರ ಬಿ. ಮಾತಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ನಾಯಕತ್ವದ ಗುಣವಿದೆ. ನಾವೆಲ್ಲರೂ ನಮ್ಮ ಜೀವನಕ್ಕೆ ನಾಯಕರು, ವಿದ್ಯಾರ್ಥಿಗಳಿಗೆ ಸಾಧಿಸಬೇಕೆಂಬ ಛಲ ಇದ್ದರೆ ಮಾತ್ರ ಭವಿಷ್ಯದಲ್ಲಿ ಉತ್ತಮ ನಾಗರೀಕರಾಗಿ ಮುಂದುವರಿಯಲು ಸಾಧ್ಯ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಲತಾ ಫೆರ್ನಾಂಡಿಸ್ ಎ. ಸಿ., (ಪ್ರಾಂಶುಪಾಲರು ಕಾರ್ಮೆಲ್ ಕಾಲೇಜ್ ಮೊಡಂಕಾಪು) ವಿದ್ಯಾರ್ಥಿ ಪರಿಷತ್ತಿಗೆ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೂ ಶುಭ ಹಾರೈಸಿ, ಮುಂದಿನ ಎಲ್ಲಾ ಕಾರ್ಯಚಟುವಟಿಕೆಗಳನ್ನು ಮುಂದುವರಿಸಲು ಬೇಕಾದ ಮಾರ್ಗದರ್ಶನ ನೀಡಿದರು. ಅದೇ ರೀತಿ ಪ್ರಾಂಶುಪಾಲರು ಕಾಲೇಜು ಬಾವುಟವನ್ನು ವಿದ್ಯಾರ್ಥಿ ಪರಿಷತ್ತಿನ ನಾಯಕಿ ಹಾಗೂ ಕಾರ್ಯದರ್ಶಿಗೆ ಹಸ್ತಾಂತರಿಸಿದರು. ವಿದ್ಯಾರ್ಥಿ ಪರಿಷತ್ತಿನ ಎಲ್ಲಾ ನಾಯಕರು ಪ್ರಾಂಶುಪಾಲರ ನೇತೃತ್ವದಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿ ಡಾ. ಪ್ರಕಾಶ್ ಚಂದ್ರ ಬಿ., (ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಾಮಜೆ ಬಂಟ್ವಾಳ), ಲತಾ ಫೆರ್ನಾಂಡಿಸ್ ಎ. ಸಿ.,( ಪ್ರಾಂಶುಪಾಲರು, ಕಾರ್ಮೆಲ್ ಕಾಲೇಜು ಮೊಡಂಕಾಪು), ಜೋಯಲ್ ಮಸ್ಕರೇನಸ್ (ವಾಣಿಜ್ಯ ಉಪನ್ಯಾಸಕರು), ಅಲ್ವಿಶ ಫ್ರಾಂಕ್ (ನಾಯಕಿ ವಿದ್ಯಾರ್ಥಿ ಪರಿಷತ್) ಹಾಗೂ ರಮ್ಜೀನಾ(ಕಾರ್ಯದರ್ಶಿ ವಿದ್ಯಾರ್ಥಿ ಪರಿಷತ್) ಉಪಸ್ಥಿತರಿದ್ದರು.
ಅಲ್ವಿಶ ವಾರ್ಷಿಕ ಚಟುವಟಿಕೆಗಳ ಸಮಗ್ರ ಮಾಹಿತಿಯನ್ನು ನೀಡಿದರು. ಆಸಿಯ ಕಾರ್ಯಕ್ರಮ ನಿರೂಪಿಸಿದರು, ರಮ್ಜೀನಾ ಸ್ವಾಗತಿಸಿದರು, ಮುಸ್ತಾಫ ವಂದಿಸಿದರು.