ಇತ್ತೀಚಿನ ಸುದ್ದಿ
ಬಂಟ್ವಾಳ: ಅಮೃತ ಸಮುದಾಯ ವಾರ್ಷಿಕ ವಿಶೇಷ ಶಿಬಿರದ ಶೈಕ್ಷಣಿಕ ಕಾರ್ಯಕ್ರಮ
25/01/2022, 22:06
ಬಂಟ್ವಾಳ(reporterkarnataka.com): ಸರ್ಕಾರಿ ದ.ಕ.ಜಿ.ಪ ಹಿರಿಯ ಪ್ರಾಥಮಿಕ ಶಾಲೆ ಕೆಂಪುಗುಡ್ಡೆ ,ಕಿನ್ನಿಬೆಟ್ಟುವಿನಲ್ಲಿ ಬಂಟ್ವಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ “ಅಮೃತ ಸಮುದಾಯ ವಾರ್ಷಿಕ ವಿಶೇಷ ಶಿಬಿರದ” ಶೈಕ್ಷಣಿಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿ ಶಿವಪ್ರಕಾಶ್ ನಿವೃತ್ತ ಸುಬೇದಾರ್ (ಭಾರತೀಯ ಭೂಸೇನೆ) ಅವರು “ಭಾರತೀಯ ಸೇನೆಯಲ್ಲಿ ಸೇವಾನುಭವ” ಎಂಬ ವಿಷಯವಾಗಿ ಮಾತನಾಡಿದರು. ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಶಶಿಕಲಾ.ಕೆ ,
ಯೋಜನಾಧಿಕಾರಿ ಹೈದರಾಲಿ ಶಿಬಿರಾರ್ಥಿಗಳಿಗೆ ಹಿತವಚನ ನುಡಿದರು. ಈ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನಾ ಸಂಯೋಜನಾಧಿಕಾರಿ, ಶಿಬಿರ ನಿರ್ದೇಶಕಿ ಡಾ.ನಾಗರತ್ನ ಕೆ.ಎ.ಶಿಬಿರ ಸಂದರ್ಶಿಸಿ ಶಿಬಿರಾರ್ಥಿಗಳ ಶಿಸ್ತು ಕಾರ್ಯಕ್ರಮ ಸಂಯೋಜನೆಯನ್ನು ಶ್ಲಾಘಿಸಿದರು. ಶೈಕ್ಷಣಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅಮೃತ ಸಮುದಾಯ ಯೋಜನೆಯ ಉದ್ದೇಶಗಳನ್ನು ವಿವರಿಸಿದರು. ಕಾಲೇಜಿನ ಹಳೇ ವಿದ್ಯಾರ್ಥಿಗಳಾದ ಜಗನ್ನಾಥ್ ಮತ್ತು ಚೇತನ್ ಉಪಸ್ಥಿತರಿದ್ದರು. ಚಂದ್ರಪ್ರಭಾ ಕಾರ್ಯಕ್ರಮ ನಿರೂಪಿಸಿದರು.