ಇತ್ತೀಚಿನ ಸುದ್ದಿ
ಬಣಕಲ್: 26ರಂದು ಫಲ್ಗುಣಿ ಕಲಾನಾಥೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ, ರಥೋತ್ಸವ
22/03/2024, 17:26
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಕೋಳೂರು ಸಾವಿರದ ಫಲ್ಗುಣಿ ಶ್ರೀಕಲಾನಾಥೇಶ್ವರ ಸ್ವಾಮಿಯ ದಿವ್ಯ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವವು ಇದೇ 26ರಂದು ಮಂಗಳವಾರ ಸಂಭ್ರಮದಿಂದ ಜರುಗಲಿದೆ.
ಇದೇ 24ರಂದು ಭಾನುವಾರ ಸಂಜೆ ಮಹಾಗಣಪತಿ ಪೂಜೆ, ಪ್ರಾರ್ಥನೆ, ಅಂಕುರಾರ್ಪಣೆ, ಧ್ವಜಾರೋಹಣ ಹಾಗೂ ಬಲಿ ಉತ್ಸವ ನಡೆಯಲಿದೆ. 25ರಂದು ಸೋಮವಾರ ಮಧ್ಯಾಹ್ನ 1 ಗಂಟೆ ಒಳಗೆ ಸ್ವಾಮಿಯ ದಿವ್ಯ ರಥರೋಹಣ ನಡೆಯಲಿದೆ. 26ರಂದು ಮಂಗಳವಾರ ಜಾತ್ರಾ ಮಹೋತ್ಸವ ಹಾಗೂ ಸಂಜೆ 4.30ಕ್ಕೆ ದಿವ್ಯ ರಥೋತ್ಸವ ನಡೆಯಲಿದೆ. 27ರಂದು ಬುಧವಾರ ಕಲಾನಾಥೇಶ್ವರ ಸ್ವಾಮಿಗೆ ದಿವ್ಯ ಅವಭೃತ ಸ್ನಾನ (ನೀರೋಕುಳಿ)ಮಧ್ಯಾಹ್ನ ಉತ್ಸವ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ದೇವರ ಕೃಪೆಗೆ ಪಾತರರಾಗಬೇಕೆಂದು ಕಲಾನಾಥೇಶ್ವರ ಸ್ವಾಮಿ ಅಭಿವೃದ್ದಿ ಸಮಿತಿ ಅಧ್ಯಕ್ಷ ಬಿ.ಆರ್.ಸುಧೀರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.