ಇತ್ತೀಚಿನ ಸುದ್ದಿ
ಬಂಗಾಳ ಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತ: ಚಂಡಮಾರುತದ ಭೀತಿ; ಮುಂದಿನ 5 ದಿನ ಮಳೆ ಸಾಧ್ಯತೆ
02/12/2022, 13:46

ಬೆಂಗಳೂರು(reporterkarnataka.com): ಅಂಡಮಾನ್, ಆಗ್ನೇಯ ಬಂಗಾಳ ಕೊಲ್ಲಿ ಸಮುದ್ರದಲ್ಲಿ ಚಂಡಮಾರುತ ಲಕ್ಷಣಗಳು ಗೋಚರಿಸಿದೆ.
ಮುಂದಿನ 48 ಗಂಟೆಗಳಲ್ಲಿ ಈ ಚಂಡಮಾರುತ ಬಂಗಾಳ ಕೊಲ್ಲಿಯತ್ತ ಸಾಗಲಿದ್ದು. ಡಿಸೆಂಬರ್ 8ರ ವೇಳೆಗೆ ತಮಿಳುನಾಡು ಹಾಗೂ ಪುದುಚೇರಿ, ಕರ್ನಾಟಕದ ಕರಾವಳಿ ಸೇರಿದಂತೆ ದ.ಒಳನಾಡು ಮಲೆನಾಡಿನ ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಶೀತಮಿಶ್ರಿತ ವಾತವಾರಣ ಒಂದು ವಾರ ಇರುವ ಸಾಧ್ಯತೆ ಇದೆ.